ಆನೆ ಕಾಲು ಮುಕ್ತ ಜಿಲ್ಲೆಗೆ ಕೈಜೋಡಿಸಿ: ಡಾ. ಅಪರ್ಣ ಭದ್ರ ಶೆಟ್ಟಿ ಕರೆ

0
73

ಅಫಜಲಪುರ; ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬರ (ಬಿ) ಆನೆಕಾಲು ರೋಗ ನಿವಾರಣೆ ಸುಮಾರು ಸುತ್ತಿನಲ್ಲಿ ಮಾತ್ರೆ ಸೇವಿಸದೆ ಇರುವುದು ಇದಕ್ಕೆ ಕಾರಣವಾಗಿದೆ ಅದಕ್ಕಾಗಿ ಈ ಸುತ್ತಿನಲ್ಲಿ ಈ ಸಲ ಶಾಲೆಗಳಿಂದ ಪ್ರಾರಂಭವಾಗಿ ಮೊದಲು ಶಾಲೆಗಳಲ್ಲಿ ವಿದ್ಯಾರ್ಥಿಗಳು ಸೇವನೆ ಮಾಡಿ ನಂತರ ತಮ್ಮ ಮನೆಯಲ್ಲಿ ಎಲ್ಲಾ ಸದಸ್ಯರಿಗೆ ಯಾವುದೇ ಭಯ ಬೇಡ ಎಂದು ಹೇಳಿ ಎಲ್ಲರೂ ಮಾತ್ರೆ ಸೇವನೆ ಮಾಡಿ ಎಂದು ಆನೆ ಕಾಲು ಮುಕ್ತ ಜಿಲ್ಲೆಗೆ ಕೈಜೋಡಿಸಿ ಎಂದು ಶಾಲಾ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಡಾ. ಅಪರ್ಣ ಭದ್ರ ಶೆಟ್ಟಿ ಕರೆ. ಮನವಿ ಮಾಡಿದರು.

ನಂತರ ವೇದಿಕೆ ಮೇಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಬಳಿ ಮಾತನಾಡಿ ಆನೆಕಾಲು ರೋಗ ಗುಪ್ತಗಾಮಿನ ರೋಗ ವಾಗಿದ್ದು ಅದರ ಇತಿಹಾಸವನ್ನು ತಿಳಿಸಿ ಜನರು ಇದನ್ನು ನಿರ್ಲಕ್ಷಿಸುತ್ತಿರುವುದು ವಿಷಾದನೀಯ. ಆನೆಕಾಲು ರೋಗದ ತಡೆಗೆ ತ್ರಿವಳಿ ಮಾತ್ರಗಳು ಮುದ್ದಾಗಿದ್ದು ಅದನ್ನು ತಪ್ಪದೆ ಸೇವಿಸಿ, ಯಾವುದೇ ಅಡ್ಡ ಪರಿಣಾಮವಿಲ್ಲ. ಸರಕಾರ ಉಚಿತವಾಗಿ ಡಿ.ಇ.ಸಿ, ಅಲ್ಬಂಡ ಜಾಲ, ಐವರ್ ಮೆಟ್ಟಿನ್ ಮಾತ್ರೆಗಳನ್ನು ಆರೋಗ್ಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಬಂದಾಗ ಸಹಕರಿಸಿ ಊಟದ ಸೇವನೆಯ ನಂತರ ಸೇವಿಸಿ ಆನೆಕಾಲು ರೋಗದಿಂದ ದೂರವಿರಿ ಎಂದು ಪೂರ್ವ ಭಾವಿ ಸಭೆಯಲ್ಲಿ ತಿಳಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ 18 ರೊಳಗೆ ಪಾಲಕರ ಸಭೆ ಕರೆದು ತ್ರಿವಳಿ ಮಾತ್ರೆಗಳ ಬಗ್ಗೆ ಮಾಹಿತಿ ನೀಡಲು ತಿಳಿಸಲಾಯಿತು. ಸಭೆಯಲ್ಲಿ ಶಾಲಾ ಮುಖ್ಯ ಗುರುಗಳಾದ ಜಬೇರ್ ಮುಲ್ಲಾ, ಹಾಗೂ ಶಾಲಾ ಶಿಕ್ಷಕ ವೃಂದ, ಉಪ ಕೇಂದ್ರದ ಸಿಬ್ಬಂದಿಗಳಾದ ಲಕ್ಷ್ಮಿಕಾಂತ್ ಲಾಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಶ್ವೇತಾ ಪಾಟೀಲ್ ಸಮುದಾಯ ಆರೋಗ್ಯ ಅಧಿಕಾರಿಗಳು, ಆರ್ .ಕೆ ಎಸ್ ಕೆ ಕೌನ್ಸಲರ್ ಎನ್ ಸುಧಾಕರ್, ಆಶಾ ಕಾರ್ಯಕರ್ತೆ ಮಾಂತಮ್ಮ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here