ಕಲಬುರಗಿ: ಕನ್ನಡ ನಾಡಿಗೆ ಅಮೋಘ ಕೊಡಿಗೆ ನೀಡಿರುವ ಕಲ್ಯಾಣ ಕರ್ನಾಟಕ ಪ್ರದೇಶಲ್ಲಿನ ಸಾಧಕರ ಹೆಸರಿನಲ್ಲಿ ಪ್ರತಿμÁ್ಠನ ಸ್ಥಾಪಿಸಿಲ್ಲ. ಈ ಭಾಗದ ಹಿರಿಯ ಸಾಹಿತಿ, ಕಲಾವಿದರ ಹೆಸರಿನಲ್ಲಿ ಪ್ರತಿμÁ್ಠನ ಸ್ಥಾಪಿಸಬೇಕು ಎಂದು ಶಿರಪುರ ಪ್ರಕಾಶನ ಮತ್ತು ರಂಗ ಸಂಗಮ ಕಲಾವೇದಿಕೆ ಒತಾಯಿಸುತ್ತಿದೆ ಎಂದು ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ, ರಂಗ ಸಂಗಮವೇದಿಕೆ ಅಧ್ಯಕ್ಷೆ ಡಾ. ಸುಜಾತಾ ಜಂಗಮಶೆಟ್ಟಿ ಹೇಳಿದರು.
ಕನ್ನಡ ಭಾμÉ ಕಟ್ಟಿ ಬೆಳೆಸುವಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬೀದರ್ ಜಿಲ್ಲೆಗಳು ಅಪಾರ ಕೊಡುವೆ ನೀಡಿವೆ. ಈ ಭಾಗದಲ್ಲೂ ಅನೇಕ ಪ್ರಖ್ಯಾತ ಸಾಹಿತಿಗಳು, ಕಲಾವಿದರಿದ್ದಾರೆ. ಅಂಥ ಕಲಾವಿದರ ಹೆಸರಿನಲ್ಲಿ ಸರ್ಕಾರ ಪ್ರತಿμÁ್ಠನ ಸ್ಥಾಪಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಈಗಾಗಲೆ ಹಲವಾರು ಜಿಲ್ಲೆಗಳಲ್ಲಿ ಸರ್ಕಾರ 27 ಪ್ರತಿμÁ್ಠನಗಳನ್ನು ಸ್ಥಾಪಿಸಿದೆ. ಅವುಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಯಾವ ಜಿಲ್ಲೆಯೂ ಸೇರಿಲ್ಲ. ಬೆಂಗಳೂರಿನಲಿ-್ಲ2, ಬೆಳಗಾವಿ-2, ಮುಧೋಳ-1, ತುಮಕೂರು-1, ಶಿವಮೊಗ್ಗ-1, ಚಿತ್ರದುರ್ಗ-1, ಕೋಲಾರ-2, ದಕ್ಷಿಣ ಕನ್ನಡ-1, ಬಾಗಲಕೋಟೆ-1, ಹಾವೇರಿ-4, ಧಾರವಾಡ-7, ಉಡುಪಿ-1, ವಿಜಯಪುರ-1, ಚಿಕ್ಕಮಗಳೂರು-1 ಹಾಗೂ ಮಂಡ್ಯ ಜಿಲ್ಲೆಯಲ್ಲಿ ಒಂದು ಹೀಗೆ27 ಪ್ರತಿμÁ್ಠನಗಳಿವೆ. ಅದೇ ಮಾದರಿಯಲ್ಲಿ ಕಲಬುರಗಿಯಲ್ಲಿ ಚನ್ನಣ್ಣ ವಾಲೀಕಾರ ಹಾಗೂ ರಾಯಚೂರಿನಲ್ಲಿ ಶಾಂತರಸರ ಹೆಸರಿನಲ್ಲಿ ಪ್ರಥಮ ಹಂತವಾಗಿ ಸರ್ಕಾರ ಪ್ರತಿμÁ್ಠನ ಸ್ಥಾಪಿಸಬೇಕು ಎಂದು ಈ ಭಾಗದ ಸಾಹಿತಿಗಳು ಮತ್ತು ಕಲಾವಿದರ ನಿಯೋಗ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಡಾ. ನಂಜುಂಡಪ್ಪ ವರದಿಯಲ್ಲೂ ಈ ಭಾಗದಲ್ಲಿ ಪ್ರತಿμÁ್ಠನ ಸ್ಥಾಪಿಸುವ ಕುರಿತು ಉಲ್ಲೇಖಿಸಿದೆ. ಆದರೂ ಸರ್ಕಾರ ಈ ಭಾಗಕ್ಕೆ ನ್ಯಾಯ ಕೊಡುವಲ್ಲಿ ವಿಫಲವಾಗಿದೆ. ಈ ಪ್ರದೇಶಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಹಿರಿಯ ಸಾಹಿತಿಗಳು, ಕಲಾವಿದರು ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಮುಂಬರುವ ದಿನಗಳಲ್ಲಿ ಈ ಕುರಿತು ಹೋರಾಟ ರೂಪಿಸಲಾಗುವುದು ಎಂದು ಅವರು ತಿಳಿಸಿದರು.
ಪ್ರಮುಖರಾದ ಅಪ್ಪಾರಾವ ಅಕ್ಕೋಣಿ, ಎಸ್.ಪಿ.ಸುಳ್ಳದ, ನಾರಾಯಣ ಕುಲಕರ್ಣಿ, ಕೆ.ಪಿ.ಗಿರಿಧರ ಸುದ್ದಿಗೋಷ್ಠಿಯಲ್ಲಿದ್ದರು.