ಮನೆ ಮನೆಗೆ ಮರ್ಯಾದಾ ಪುರುಷೋತ್ತಮ ರಾಮನ ಮಂತ್ರಾಕ್ಷತೆ ವಿತರಣೆ

0
27

ವಾಡಿ: ಪಟ್ಟಣದಲ್ಲಿ ಜನವರಿ 22 ರ ಶ್ರೀ ರಾಮನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಪ್ರಯುಕ್ತ ಪಟ್ಟಣದ ಶ್ರೀ ಲಕ್ಷ್ಮೀ ನಾರಾಯಣ ಮಂದಿರದಲ್ಲಿ ರಾಮಜನ್ಮಭೂಮಿಯಿಂದ ಬಂದ ಪವಿತ್ರ ಮಂತ್ರಾಕ್ಷತೆಗೆ ವಿಶೇಷ ಪೂಜೆ ಸಲ್ಲಿಸಿ ವಿತರಣೆಗೆ ಚಾಲನೆ ನೀಡಲಾಯಿತು.

ಪಟ್ಟಣದ ಎಲ್ಲಾ ವಾರ್ಡ್ ಗಳಿಗಾಗಿ 23 ತಂಡಗಳನ್ನು ರಚಿಸಿ ಶ್ರೀರಾಮನ ಫೋಟೋ,ಕರಪತ್ರ ಮತ್ತು ಪವಿತ್ರ ಮಂತ್ರಾಕ್ಷತೆ’ ವಿತರಿಸಲಾಯಿತು‌.

Contact Your\'s Advertisement; 9902492681

ಈ ಸಂದರ್ಭದಲ್ಲಿ ಶ್ರೀರಾಮ‌ ಉತ್ಸವ ಸಮಿತಿಯ ಸಂಚಾಲಕ ವೀರಣ್ಣ ಯಾರಿ ಮಾತನಾಡಿ ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ದೇಶದ ಮೂಲೆ ಮೂಲೆಗಳಲ್ಲಿ ನೆಲೆಸಿರುವ ಪ್ರತಿಯೊಬ್ಬ ಹಿಂದೂಗಳಿಗೆ ಪವಿತ್ರವಾದ ಮಂತ್ರಾಕ್ಷತೆ ಮತ್ತು ಶ್ರೀರಾಮನ ಫೋಟೋವನ್ನು ವಿತರಿಸುವ ಅಭಿಯಾನವನ್ನು ಕೈಗೊಂಡಿದೆ.

ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾನ ಪ್ರತಿಷ್ಠಾಪನೆಯ ದಿನವಾದ ಜನವರಿ 22 ರಂದು ವಾಡಿ ಪಟ್ಟಣ ಸೇರಿದಂತೆ ದೇಶದ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಲಿದೆ.

ಎಲ್ಲಾ ಮನೆಗಳಲ್ಲಿಯೂ ಸಹ ಅಂದು ವಿಶೇಷ ಪೂಜೆ ಮತ್ತು ಸಂಜೆ ಕನಿಷ್ಠ 5 ದೀಪಗಳನ್ನು ಹಚ್ಚಿ ಮತ್ತೊಮ್ಮೆ ದೀಪಾವಳಿ ಹಬ್ಬದ ಸಂಭ್ರಮಾಚರಣೆ ಮಾಡುವುದರ ಬಗ್ಗೆ ಮಂತ್ರಾಕ್ಷತೆ ವಿತರಣಾ ತಂಡಗಳು ಈ ಸಂದೇಶ ಸಾರಬೇಕಾಗಿದೆ ಎಂದರು.

ಈ ಒಂದು ಪವಿತ್ರ ಧರ್ಮಕಾರ್ಯಕ್ಕೆ ಭಕ್ತಿ ಭಾವ ದೊಂದಿಗೆ ಪಟ್ಟಣದಲ್ಲಿನ ಎಲ್ಲಾ ಬಾಂಧವರು 22ರ ಪವಿತ್ರದಿನದ ಸಂಭ್ರಮಕ್ಕಾಗಿ ನಾವು ಕಾತುರರಾಗಿದ್ದು,ಅದನ್ನು ನಾವು ವಿಜೃಂಭಣೆಯಿಂದ ಆಚರಿಸಬೇಕೆಂದು ಎಲ್ಲರ ಮಹಾದಾಸೆ ಯಾಗಿದೆ ಎಂದರು.

ಈ ಸಂದರ್ಭದಲ್ಲಿ ಬಸವರಾಜ ಪಂಚಾಳ,ಸುನಿಲ ವರ್ಮಾ,ರಾಮಚಂದ್ರ ರಡ್ಡಿ,ಶರಣಗೌಡ ಚಾಮನೂರ,
ಹರಿ ಗಲಾಂಡೆ, ಅಶೋಕ ಪವಾರ,ಆನಂದ ಡೌಳೆ,ಸಂಜಯ ಗಾಯಕವಾಡ,ಗಣಪತರಾವ ಸುತ್ರಾವೆ, ರಾವುಲ ಸಿಂದಗಿ,ಪ್ರೀತಮ್ ಜ್ಯೂಷಿ,ಭಾಗಣ್ಣ ದೊರೆ,ರವಿ ನಾಯಕ,ಭರತ ರಾಠೋಡ, ದತ್ತಾ ಖೈರೆ,ಸನ್ನಿ ವಾಲಿಯ, ಸತೀಶ ಸಾವಳಗಿ,ಸಿದ್ದೇಶ್ವರ ಚೊಪಡೆ, ಅಯ್ಯಣ್ಣ ದಂಡೋತಿ, ಅನಿತ ಅಗ್ರವಾಲ,ಕಿಶನ ಜಾಧವ, ಜಯಂತ ಪವಾರ,ಬನಶಂಕರ ಮಸ್ಟೂರ್,ರವಿ ಹಡಪದ, ಮಹಾಲಿಂಗ ಶೆಳ್ಳಗಿ,ಪ್ರೇಮ ರಾಠೋಡ, ರಾಜೀವ್ ಪಾಂಡೆ,ಜ್ವಾಲಾ ಶರ್ಮಾ, ಯಂಕಮ್ಮ ಗೌಡಗಾಂವ, ಶರಣಮ್ಮ ಯಾದಗಿರ,ಸುಶೀಲ ವರ್ಮಾ, ಇಂಡಿ,ಸಿದ್ದಮ್ಮ ಭದ್ರಯ್ಯ ಸ್ವಾಮಿ,ವಿಶ್ವ ತಳವಾರ, ವಿಶಾಲ ನಾಯಕ, ಉಮಾದೇವಿ ಗೌಳಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here