45ನೇ ಹುಟ್ಟುಹಬ್ಬ ಆಚರಿಕೊಳ್ಳುತ್ತಿರುವ ಪ್ರಿಯಾಂಕ್ ಖರ್ಗೆಯವರ ವೈಯಕ್ತಿಕ ಪರಿಚಯ ಎಲ್ಲರಿಗೂ ತಿಳಿದಿರುವಂತೆದ್ದೆ. ಅವರ ತಂದೆಯವರಾದ ಮಲ್ಲಿಕಾರ್ಜುನ ಖರ್ಗೆಯವರ ನಿಷ್ಟುರ ಮತ್ತು ಪ್ರಾಮಾಣಿಕ ಮಾತುಗಳು ರಕ್ತಗತವಾಗಿ ಬಂದಿರುವುದು ಪ್ರಿಯಾಂಕ್ ಖರ್ಗೆಯವರ ಸ್ಪಷ್ಟವಾದ ಮಾತುಗಳಲ್ಲಿ ಗೋಚರಿಸುತ್ತದೆ.
ಕೆಲ ಸಂಗತಿಗಳನ್ನು ಅವಲೋಕಿಸಿದ ಸಂದರ್ಭದಲ್ಲಿ ತಮ್ಮ ತಂದೆಯವರಿಗಿಂತ ವಿಭಿನ್ನವಾದ ಮತ್ತು ಸ್ವತಂತ್ರವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಕರ್ನಾಟಕದ ಅನೇಕ ರಾಜಕೀಯ ನಾಯಕರ ಮಕ್ಳಳು ತಂದೆಯ ಶ್ಯಾಡೋಯಿಂದ ಹೊರಬಂದು ಸ್ವತಂತ್ರ ರಾಜಕೀಯ ಪ್ರಜ್ಞೆ ಹಾಗೂ ವ್ಯಕ್ತಿತ್ವ ರೂಪಿಸ್ಕೊಳ್ಳಲಿಕ್ಕೆ ಸಾಧ್ಯವಾಗಿಲ್ಲ.
ಇಂಥವರ ಮದ್ಯ ಸಂಪೂರ್ಣವಾಗಿ ತಂದೆಯವರ ಶ್ಯಾಡೋಯಿಂದ ಹೊರ ನಿಂತು ರಾಜಕೀಯ ಅಸ್ತಿತ್ವ ಕಂಡುಕೊಂಡವರು ಪ್ರಿಯಾಂಕ್ ಖರ್ಗೆ. ಇವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಿದ್ಧಾಂತ, ಸಾಮಾಜಿಕ ನ್ಯಾಯ ತತ್ವಗಳ ಬಗ್ಗೆ ನಂಬಿಕೆ ಉಳ್ಳವರು ಮತ್ತು ಅವುಗಳ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುತ್ತಾ ಶೋಷಿತ ಸಮುದಾಯದ ಜನರಿಗೆ ನ್ಯಾಯ ದೊರಕಿಸಿಕೊಡಲು ಶ್ರಮಿಸುತ್ತಿರುವ ನಾಯಕ.
ಇಷ್ಟಾದರೂ ಕೂಡ ಕೆಲ ಸಂದರ್ಭದಲ್ಲಿ ಅನೇಕರು ಹೇಳುವ ಮಾತು ಅವರು ವ್ಯವಧಾನದಿಂದ ಆಲಿಸುವುದಿಲ್ಲ ಎನ್ನುವ ಮಾತುಗಳನ್ನು ಕೆಲವರು ಆಡಿದ್ದನ್ನು ಕೇಳಿ, ನಗು ಬರುತ್ತಿತ್ತು. ಎದುರಿಗಿರುವ ವ್ಯಕ್ತಿ ತನ್ನ ಸಮಸ್ಯೆಗಳನ್ನು ಹೇಳುತ್ತಿರವಂತೆ, ಅದಕ್ಕೆ ಪರಿಹಾರವನ್ನು ಸೂಚಿಸುವ ಮತ್ತು ಸಮಸ್ಯೆ ಗಂಭೀರತೆಯನ್ನು ಅರಿಯಬಲ್ಲ ಅತೀ ಸೂಕ್ಷ್ಮ ರಾಜಕಾರಣಿ ಇವರು.
ಸಮಸ್ಯೆ ಆಲಿಸಿ ಪರಿಹರಿಸದೆ ಕಾಲ ಹರಣ ಮಾಡುವ ವ್ಯಕ್ತಿತ್ವ ಇವರದಲ್ಲ.ಇದು ನಾನು ಅವರ ಹತ್ತಿರ ಕಂಡಿದ್ದು. ಗುಲ್ಬರ್ಗಾದ ಯಾವ ರಾಜಕೀಯ ನಾಯಕರ ಮನೆ ಮುಂದೆ ಕಾಣದ ಜನ ಸಮುದಾಯದಗಳ ದಂಡು ಇವರ ಮನೆ ಮುಂದ ನೆರದಿರುತ್ತದೆ. ಹೀಗಾಗಿಯೇ ಅವರಿಗೆ ಸಿಕ್ಕ ಸಮಯದಲ್ಲಿ ಎಲ್ಲರ ಸಮಸ್ಯೆ ಆಲಿಸುವ ಕೇಳುವ ಸಂದರ್ಭದಲ್ಲಿ ಕೆಲವರಿಗೆ ಹೀಗೆ ಅನ್ನಿಸುವುದು ಸಹಜವೇ. ಕಾರಣ ಅದಕ್ಕೆ ಪ್ರಿಯಾಂಕ್ ಖರ್ಗೆಯವರ ತಪ್ಪಲ್ಲ. ವ್ಯವಧಾನದಿಂದ ಆಲಿಸುವುದಿಲ್ಲ ಎನ್ನುವವರ ತಾಳ್ಮೆಯ ಮಿತಿ ಅಷ್ಟೇ.
ಹಿಂದುಳಿದ ಬಾಗವೆಂದೂ ಹಣೆಪಟ್ಟಿ ಹೊತ್ತಿರುವ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಅನೇಕ ಮಹತ್ವದ ಯೋಚನೆಗಳು ತಂದು ಅಭಿವೃದ್ಧಿ ಕಾರ್ಯಗಳಿಗೆ ಹೆಸರಾದವರು. ಕಲಬುರ್ಗಿ ಜಿಲ್ಲೆಯ ಸುತ್ತಮುತ್ತಲಿನ ತಾಲೂಕು ಮತ್ತು ಹಳ್ಳಿಗಳಿಂದ ಬಂದ ವಿದ್ಯಾರ್ಥಿಗಳ ಸಂಖ್ಯಗನುಗುಣವಾಗಿ ಸರಿಯಾದ ವಸತಿ ನಿಲಯಗಳು ಇರಲಿಲ್ಲ. ಇವರು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಜಿಲ್ಲೆಗೆ ವಸತಿ ನಿಲಯಗಳನ್ನು ಮಂಜೂರು ಮಾಡಿ. ಅವುಗಳ ಕಟ್ಟಡ ನಿರ್ಮಾಣ ಕಾರ್ಯವನ್ನು ತ್ವರಿತಗತಿಯಲ್ಲಿ ಮುಗಿಸಿ ಅನೇಕ ವಿದ್ಯಾರ್ಥಿ ಗಳಿಗೆ ಸೂರನ್ನು ಹೋದಗಿಸಿದರು. ಈಗ ಅವರು ನಿರ್ಮಿಸಿದ ವಸತಿ ನಿಲಯಗಳ ಬೃಹತ್ ಕಟ್ಟಡ ಪ್ರವೇಶಿಸಿ ನೋಡಿದರೆ. ನಾವುಗಳು ಯಾವುದೋ ಒಂದು ಅಂತಾರಾಷ್ಟ್ರೀಯ ಮಟ್ಟದ ಹೊಟೇಲ ಕಟ್ಟಡ ಪ್ರವೇಶಿಸಿದ ಬಾಸವಾಗುತ್ತದೆ.
ಶಿಕ್ಷಣ ಪ್ರೇಮಿಯಾದ ಪ್ರಿಯಾಂಕ್ ಖರ್ಗೆಯವರು ತಾವು ಪ್ರತಿನಿಧಿಸುವ ಕ್ಷೇತ್ರವಾದ ಚಿತ್ತಾಪುರನ್ನು ಶೈಕ್ಷಣಿಕ ಹಬ್ ಆಗಿ ಪರಿವರ್ತಿಸಿದ್ದಾರೆ. ಇದರ ಪ್ರತಿಫಲ ಇನ್ನೆರಡು ವರ್ಷಗಳಲ್ಲಿ ರಾಜ್ಯಕ್ಕೆ ತಿಳಿಯಲಿದೆ ಹಾಗೂ ಶೈಕ್ಷಣಿಕವಾಗಿ ಮಾದರಿ ಕ್ಷೇತ್ರವಾಗಿ ಗುರುತು ಪಡೆಯಲಿದೆ. ಉದ್ಯೋಗ ಖಾತ್ರಿ, ಕೃಷಿ, ವಾಣಿಜ್ಯ, ವ್ಯವಹಾರ, ಸಾರಿಗೆ , ಸರ್ಕಾರಿ ಆಡಳಿತ ಸೇವೆ ಎಲ್ಲವುಗಳಿಗೂ ಹೊಸ ಕಾಯಕಲ್ಪವನ್ನು ನೀಡಿ, ಜಿಲ್ಲಾಡಳಿತ ಕಾರ್ಯ ಕ್ಷಮತೆಯನ್ನು ಹೆಚ್ಚಿಸಿದ್ದಾರೆ.
ಇಡೀ ರಾಜ್ಯದ ನಿರುದ್ಯೋಗಿ ಯುವರು ತಮ್ಮ ಜೀವನ ಕಟ್ಟಿಕೊಳ್ಳಲು ಹಗಲು ರಾತ್ರಿ ಎನ್ನದೆ ಓದಿ ಉದ್ಯೋಗ ಪಡೆಯಬೇಕು ಎಂಬ ಹಂಬಲದಲ್ಲಿ ಪಿ ಎಸ್ ಐ ಪರೀಕ್ಷೆ ಬರೆದು. ಭವಿಷ್ಯದ ಬದುಕಿನ ಕನಸು ಕಾಣುತ್ತಿದ್ದಾರೆ. ಇತ್ತ ಭ್ರಷ್ಟಾಚಾರ ಸರ್ಕಾರ ಆ ಯುವಕರ ಕನಸಿಗೆ ಎಳ್ಳುನೀರು ಬಿಡುವ ಕೆಲಸ ಮಾಡುವುದರಲ್ಲಿ ನಿರತವಾಗಿತ್ತು.
ಈ ಭ್ರಷ್ಟಾಚಾರದ ಜಾಲ ಭೇದಿಸಿ ಎಲ್ಲ ಯುವಕರಿಗೆ ನ್ಯಾಯ ಕೊಡಿಸುವಲ್ಲಿ ಅವರು ಮಾಡಿದ ಹೋರಾಟ ಇತಿಹಾಸ. ಇದು ಕೇವಲ ಸಾಂದರ್ಭಿಕವಾಗಿ ಕೆಲ ಸಂಗತಿಗಳನ್ನು ಉಲ್ಲೇಖಿಸಿರಿವೆ. ಅವರ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.
ಹಾಗಾಯೇ ಎಲ್ಲ ಜಾತಿ, ಧರ್ಮದ ಜನ ಸಮುದಾಯಗಳು ಅವರನ್ನು ಅಪ್ಪಿ ಒಪ್ಪಿ ಅಧಿಕಾರದಲ್ಲಿ ಕುರಿಸಿರುವುದು. ವೈಚಾರಿಕತೆ ಮತ್ತು ಸೈದ್ಧಾಂತಿಕ ಸಂಗತಿ ಹಾಗೂ ಸಂವಿಧಾನದ ಪರ ವಿಚಾರಗಳಲ್ಲಿ ರಾಜ್ಯದ ಉಳಿದ ರಾಜಕೀಯ ನಾಯಕರಿಗೆ ಹೋಲಿಸಿದರೆ ಇವರು ಹೆಚ್ಚು ಸ್ಪಷ್ಟತೆಯನ್ನು ಹೊಂದಿದ್ದಾರೆ.
ಮೇಲ್ವರ್ಣದ ವೈಧಿಕಶಾಹಿಯ ಪುರೋಹಿತ ಸಂಕುಲ ಸಾವಿರಾರು ವರ್ಷಗಳಿಂದ ತನ್ನ ನೀತಿ ಮೌಲ್ಯಗಳನ್ನು ಸಮಾಜದ ಸರ್ವರ ನೀತಿ ಮೌಲ್ಯಗಳನ್ನಾಗಿ ಬಿಂಬಿಸುವಲ್ಲಿ ಅನುಪಮ ಯಶಸ್ಸು ಸಾಧಿಸಿದೆ. ಧರ್ಮ, ಜಾತಿ, ಯಾವುದೇ ಇರಲಿ ಭಾರತದ ಉದ್ದಗಲಕ್ಕೂ ಎಲ್ಲ ಜನರ ಮೇಲೆ ವೈಧಿಕವೈಧಿಕ ಮೌಲ್ಯಗಳನ್ನು ಬಿಟ್ಟಲೋಟಿರುವುದರ ಕುರಿತು ಅನೇಕ ಸಾರಿ ಪ್ರಿಯಾಂಕ್ ಖರ್ಗೆಯವರು ಮಾತನಾಡಿದ್ದಾರೆ.
ಮನುವಾದಿಗಳ ಮುಖ್ಯ ತತ್ವ ಕರ್ಮಸಿದ್ಧಾಂತ ಪೂರ್ವಜನ್ಮ, ಮನುಷ್ಯರನ್ನೇ ಮೇಲುಕಿಳಾಗಿ ನೋಡುವ ದೃಷ್ಟಿ, ಧರ್ಮಸಮೇತವಾಗಿಯೇ ಕೆಲವರನ್ನು ಕೀಳೆಂದು ಪಶುಸದೃಶವಾದ ಬದುಕಿಗೆ ದೂಡುವ, ಮಹಿಳೆಯರನ್ನು ಅತ್ಯಂತ ನಿಕೃಷ್ಟರನ್ನಾಗಿ ಬಿಂಬಿಸುವ ಮನುವಾದಿ ಆರ್ ಎಸ್ ಎಸ್ ನ ಬಿಜೆಪಿಯ ಕುಟೀಲ ಬುದ್ದಿಗೆ ಆಗಾಗ ಚಾಟಿಯನ್ನು ಬಿಸುವಲ್ಲಿ ಪ್ರಿಯಾಂಕ್ ಖರ್ಗೆಯವರು ಮೊದಲಿಗರು.
ದೀರ್ಘಕಾಲದ ಸಾರ್ವಜನಿಕ ಬದುಕಿನ ಅನುಭವ, ಅವರ ಶಿಸ್ತಿನ ಅಧ್ಯಾಯ ಸಂವಿಧಾನ ಬದ್ಧ ಹಕ್ಕುಗಳಿಗೆ ಅಹಿಂಸಾತ್ಮಕ ಹೋರಾಟ ಈ ನಿಟ್ಟಿನಲ್ಲಿ ಮಾನ್ಯ ಪ್ರಿಯಾಂಕ್ ಖರ್ಗೆಯವರು ಮುಖ್ಯವಾಗುತ್ತಾರೆ. ಇಡೀ ಶೋಷಿತ ಸಮುದಾಯಗಳ ಮುನ್ನೆಡೆಸಬಲ್ಲ ಭರವಸೆಯ ನಾಯಕತ್ವದ ಗುಣಗಳು ಇವರಲ್ಲಿವೆ.
ಮುಂದಿನ ದಿನಗಳಲ್ಲಿ ರಾಜ್ಯದ ಶೋಷಿತ ಜನಸಮುದಾಯಗಳ ಪ್ರತಿನಿಧಿಯಾಗಿ ಈ ಕರ್ನಾಟಕ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಗಳು ಇವರಲ್ಲಿವೆ. ಮುಖ್ಯ ಮಂತ್ರಿಗಳಾಗಿ ಉತ್ತಮ ಸಮಾಜ ನಿರ್ಮಾಣದ ಅವರ ಉದ್ದೇಶ ಈಡೇರಲೆಂದು ಈ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ಆಶಿಸುತ್ತೇನೆ.