ಸುರಪುರ: ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಧಮ್ಮ ಧ್ವಜಾ ದಿನಾಚರಣೆ

0
12

ಸುರಪುರ: ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟಿನ ಗೌರವ ಅದ್ಯಕ್ಷರಾದ ಪೂಜ್ಯ ವರಜ್ಯೋತಿ ಬಂತೆಜಿಯವರ ಉಪದೇಶದಂತೆ 139 ನೇ ವಿಶ್ವ ಬೌದ್ಧ ಧಮ್ಮ ದ್ವಜದ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಬುದ್ದ ವಿಹಾರದಲ್ಲಿ ದ್ವಜಾರೋಹಣ ನೆರವೇರಿಸಿದ ನಂತರ ಅನೇಕ ಮುಖಂಡರು ಮಾತನಾಡಿ, ಬ್ರಿಟಿಷರ ಕಾಲಘಟ್ಟದ ಬ್ರೀಟಿಷ ಅಧಿಕಾರಿಯಾದ ಸ್ಠೀಲೆ ಓಲಕಾಟ್, ಮತ್ತು ಜೆ.ಆರ್ ಡಿಸಿಲ್ವಾ ರವರು ಮೋಟ್ಟ ಮೋದಲಿಗೆ ಶ್ರಿಲಂಕಾದ ಕ್ಯಾಂಡಿಯಲ್ಲಿ ವಿಶ್ವದ 32 ಬುದ್ದಿಸ್ಟ್ ದೇಶಗಳ ಹಿರಿಯ ಬಂತೆಜಿಗಳನ್ನು ಆಹ್ವಾನ ಮಾಡಿ ಅನಗಾರಿಕ ಧಮ್ಮಪಾಲ, ಮತ್ತು ಪ್ರಭಾವಣಿ,ಶ್ರೀಲಂಕಾದಲ್ಲಿ ಬಂತೆಜಿಯಾಗಿ ದೀಕ್ಷೆ ಪಡೆಯುವ ಕಾರ್ಯಾಕ್ರಮಕ್ಕೆ ಎಲ್ಲ ಬೌದ್ಧ ಪ್ರತಿನಿಧಿಗಳನ್ನು ಕರೆಸಿ ಎಲ್ಲರು ಒಪ್ಪುವಂತೆ ಬೌದ್ಧ ಧರ್ಮದ ಏಕೈಕ ಒಂದೆ ಪಂಚಶೀಲ ದ್ವಜವಿರುವಂತೆ ನಿರ್ದರಿಸಿದರು.

Contact Your\'s Advertisement; 9902492681

1885 ರಲ್ಲಿ ಅನಾವರಣಮಾಡಿದ ಈ ದಿನವನ್ನು ವಿಶ್ವ ಬೌದ್ಧ ಧಮ್ಮ ದ್ವಜದ ದಿನವನ್ನಾಗಿ ಆಚರಿಸಲಾಗುತ್ತಿದೆ. ಆದ್ದರಿಂದ ಡಾ.ಅಂಬೇಡ್ಕರ್ ರವರ ಅನುಯಾಯಿಗಳು ಹೆಚ್ಚು ಹೆಚ್ಚು ಬೌದ್ಧ ಧಮ್ಮ ಸೇವೆಯನ್ನು ಮಾಡಲೂ ಸರ್ವ ಬೌದ್ಧ ಉಪಾಸಕರು ತಮ್ಮ ತಮ್ಮ ಪ್ರತೀಷ್ಠೆಯನ್ನು ಬಿಟ್ಟು ಶ್ರದ್ದೆಯಿಂದ ಮುಂದಿನ ದಿನಗಳಲ್ಲಿ ಸುರಪುರದ ವಿಹಾರದ ಅಭಿವೃದ್ಧಿಗೆ ಶ್ರಮವಹಿಸುವ ಅವಶ್ಯಕತೆಯಿದೆ ಎಂದರು.

ಈ ಕಾರ್ಯಾಕ್ರಮಕ್ಕೆ ಬುದ್ದವಿಹಾರದ ವಿಶಾಲವಾದ ಸ್ವರ್ಣ ಬಂಡೆಯ ಮೆಲಿರುವ ದ್ವಜದ ಕಟ್ಟೆಯ ಮೆಲೆ ಬೌದ್ಧ ದ್ವಜಾರೋಹಣವನ್ನು ನೆರೆವರಿಸಲು ಗೋಲ್ಡನ್ ಕೇವ್ ಬುದ್ದ ವಿಹಾರದ ಪೂಜ್ಯ ಸಂಘಜ್ಯೋತಿ ಭಂತೇಜಿಯವರು ಬುದ್ಧ ವಂದನೆಯನ್ನು ಪಠಿಸಿದರು ಹಾಗೂ ಟ್ರಸ್ಟಿನ ಅದ್ಯಕ್ಷ ವೆಂಕಟೇಶ ಹೊಸಮನಿ, ಉಪಾದ್ಯಕ್ಷರಾದ ನಾಗಣ್ಣ ಕಲ್ಲದೆವನಹಳ್ಳಿ,ರಾಹುಲ್ ಹುಲಿಮನಿ ಸದಸ್ಯರಾದ ಮಾಳಪ್ಪ ಕಿರದಳ್ಳಿ ಮತ್ತು ಬೌದ್ಧ ಅನುಯಾಯಿಗಳಾದ ಮಾನಪ್ಪ ಕಲ್ಲದೇವನಹಳ್ಳಿ, ದೇವು ಕಕ್ಕೇರಾ, ನಾಗರಾಜ ಬೇವಿನಗಿಡ, ಅವಿನಾಶ ಹೊಸಮನಿ, ಹಣಮಂತ ಕೊಡ್ಲಿ, ಮಾನಪ್ಪ ಚಂದಲಾಪುರ, ಗಜ ತಳವಾರ್ ಚಂದಪ್ಪ ಪಂಚಮ್, ಇತರರು ಬಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here