ತಿಂಥಣಿ ಜಾತ್ರೆಯಲ್ಲಿ ಮೂಲ ಸೌಕರ್ಯಕ್ಕೆ ರಾಜ್ಯ ಬೇಡರ ಸಮಿತಿ ಮನವಿ

0
15

ಸುರಪುರ: ತಾಲೂಕಿನ ತಿಂಥಣಿಯಲ್ಲಿ ಜರಗುವ ಶ್ರೀ ಮೌನೇಶ್ವರ ಜಾತ್ರೆಯಲ್ಲಿ ಬರುವ ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ನಗರದ ತಹಸೀಲ್ದಾರ್ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಬೇಡರ ಸಮಿತಿ ಬೆಂಗಳೂರು ವತಿಯಿಂದ ತಹಸೀಲ್ದಾರ್ ಕೆ.ವಿಜಯಕುಮಾರ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರು ಮಾತನಾಡಿ,ರಾಜ್ಯದಲ್ಲಿಯ ಅತಿ ದೊಡ್ಡ ಜಾತ್ರೆಗಳಲ್ಲಿ ತಿಂಥಣಿಯ ಮೌನೇಶ್ವರ ಜಾತ್ರೆ ಒಂದಾಗಿದೆ,ಆದರೆ ಜಾತ್ರೆಗೆ ಬರುವ ಭಕ್ತರಿಗೆ ಸರಿಯಾದ ವಸತಿ ವ್ಯವಸ್ಥೆ ಇರುವುದಿಲ್ಲ,ಈಬಾರಿ ಸರಿಯಾದ ವಸತಿ ವ್ಯವಸ್ಥೆ ಕಲ್ಪಿಸಬೇಕು,ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು,ಜಾತ್ರೆಗ ಬರುವವರು ಕೃಷ್ಣಾ ನದಿಯಲ್ಲಿನ ಕಲುಷಿತ ನೀರು ಸೇವಿಸಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಾರೆ,ಇನ್ನು ಜಾತ್ರೆಗೆ ನಮ್ಮ ಜಿಲ್ಲೆ ಸೇರಿ ವಿವಿಧ ಜಿಲ್ಲೆಗಳಿಂದ ಬರುವ ಬಸ್‍ಗಳ ನಿಲುಗಡೆಗೆ ಕನಿಷ್ಠ ಮೂರು ಕಡೆಗಳಲ್ಲಿ ನಿಲ್ದಾಣಕ್ಕೆ ವ್ಯವಸ್ಥೆ ಮಾಡಬೇಕು,ರಸ್ತೆಗಳ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಬೇಕು,ಕೃಷ್ಣಾ ನದಿಯಲ್ಲಿ ಭಕ್ತಾದಿಗಳು ನೀರು ಕಲುಷಿತಗೊಳಿಸದಂತೆ ಜಾಗೃತಿ ಮೂಡಿಸಬೇಕು,ಜಾತ್ರೆಯಲ್ಲಿ ಭಕ್ತರು ಎಲ್ಲೆಂದರಲ್ಲಿ ಮಲ ಮೂತ್ರ ವಿಸರ್ಜನೆ ಮಾಡುತ್ತಾರೆ,ಆದ್ದರಿಂದ ಸ್ವಚ್ಛತೆಗೆ ಕ್ರಮ ಕೈಗೊಂಡು ತಾತ್ಕಾಲಿಕ ಶೌಚಾಲಯ ಮತ್ತು ಸ್ನಾನ ಗೃಹಗಳ ವ್ಯವಸ್ಥೆ ಮಾಡಬೇಕು,ಅಲ್ಲದೆ ದೇವಸ್ಥಾನದಲ್ಲಿ ನಡೆಯುವ ಪುರವಂತರ ಮಹಾಸೇವಾ ಮತ್ತು ಸಾಮೂಹಿಕ ಉಪನಯನ ಕಾರ್ಯಕ್ರಮ ನಡೆಯುವುದನ್ನು ದೇವಸ್ಥಾನದ ಹೊರಭಾಗದಲ್ಲಿನ ಎಲ್ಲ ಭಕ್ತರು ವೀಕ್ಷಿಸಲು ಎಲ್.ಇ.ಡಿ ಪರದೆಗಳ ಅಳವಡಿಸುವ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಂಬಣ್ಣ ನಾಯಕ ಮಾನವಿ,ಕಾರ್ಯಾಧ್ಯಕ್ಷ ಗಂಗಾಧರ ನಾಯಕ ತಿಂಥಣಿ,ವಿಶ್ವಕರ್ಮ ಮಹಾಸಭಾದ ತಾಲೂಕು ಅಧ್ಯಕ್ಷ ದೇವಿಂದ್ರಪ್ಪ ವಿಶ್ವಕರ್ಮ,ಸುರಪುರ ಕಾಳಿಕಾದೇವಿ ಅರ್ಚಕ ಮೌನೇಶ ವಿಶ್ವಕರ್ಮ,ಮುಖಂಡರಾದ ವಿಜಯಕುಮಾರ ಹಳಿಸಗರ,ಪ್ರಜ್ವಲಕುಮಾರ,ಹರ್ಷವರ್ಧನ ವಿಶ್ವಕರ್ಮ,ಎಲ್.ಡಿ.ಶಿವಮೊನಯ್ಯ ನಾಯಕ ದೇವರಗೋನಾಲ,ಚಂದ್ರಶೇಖರ ದೊರೆ ಬಿಚಗತ್ತಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here