ಕಲಬುರಗಿ: ಶ್ರೀರಾಮ ಜನ್ಮ ಭೂಮಿಯ ಮೂರ್ತಿ ಪ್ರತಿಷ್ಠಾಪನೆಯೂ ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿದ್ದು, ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಶರಣಬಸವೇಶ್ವರ ಸಂಸ್ಥಾನದ ಪ್ರಮುಖರಾದ ಶ್ರೀ ಬಸವರಾಜ ದೇಶಮುಖ ಅವರಿಗೆ ಸಂಘ ಮತ್ತು ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರು ಆಮಂತ್ರಣವನ್ನು ನೀಡಿದ್ದಾರೆ.
ಸಂಘದ ಪ್ರಾಂತ ಪ್ರಚಾರ ಪ್ರಮುಖರಾದ ಕೃಷ್ಣ ಜೋಶಿ ಸೇವಾ ಭಾರತೀಯ ಅಧ್ಯಕ್ಷರಾದ ರಮೇಶ ತಿಪ್ಪನೂರ ಹಾಗೂ ಭೀಮಾಶಂಕರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.