ಕ್ರಾಂತಿವೀರ ಬೆಳವಡಿ ಯಲ್ಲಣ್ಣ ವಡ್ಡರ ಜಯಂತಿ ಸರಕಾರದಿಂದ ಆರ್ಚರಿಸಲು ಮನವಿ

0
16

ಕಲಬುರಗಿ: ಕ್ರಾಂತಿವೀರ ಬೆಳವಡಿ ಯಲ್ಲಣ್ಣ ವಡ್ಡರ ಇವರ ಜಯಂತಿಯನ್ನು ಸರಕಾರದಿಂದ ಆರ್ಚಣೆ ಮಾಡಬೇಕೆಂದು ಕ್ರಾಂತಿಕಾರಿ ಬೆಳವಡಿ ವಡ್ಡರ ಯಲ್ಲಣ್ಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಜಿ. ಶಿವಶಂಕರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಕಿತ್ತೂರ ರಾಣಿ ಚೆನ್ನಮ್ಮ ಸೈನ್ಯದ ನಂಬಿಗಸ್ತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಬಲಗೈ ಬಂಟ ಹಾಗೂ ಅವರ ಆಪ್ತ ಸ್ನೇಹಿತನಾಗಿದ್ದ ಬೆಳವಡಿ ಯಲ್ಲಣ್ಣ ವಡ್ಡರ್ ಬೆಳವಡಿ ಗ್ರಾಮದ ಕ್ರಿ.ಶ 16ನೇ ಶತಮಾನದಲ್ಲಿ ಮಲ್ಲಮ್ಮ ಹೋರಾಡಿದ ಪುಣ್ಯ ಭೂಮಿಯಲ್ಲಿ 28 ಜನೇವರಿ 1800 ರಂದು ಯಲ್ಲಣ್ಣ ಜನಿಸಿದ್ದು ಬಾಲ್ಯದಲ್ಲೇ ಯುದ್ಧಗಳಲ್ಲಿ ಆಸಕ್ತಿಯಿದ್ದ ಯಲ್ಲಣ್ಣ ಸ್ವಾತಂತ್ರಕ್ಕಾಗಿ ಪ್ರಾಣವನ್ನೇ ಮುಡಾಪಾಗಿಟ್ಟಿದ್ದ ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣ. ಆದ ಕಾರಣ ರವರ ಜಯಂತಿಯನ್ನು ಸರ್ಕಾರದಿಂದ ಆಚರಣೆ ಮಾಡಬೇಕು ಮತ್ತು ಅವರ ಮೂರ್ತಿ ಸ್ಥಾಪನೆ ಮಾಡಬೇಕು, ಬೇಳವಡಿ ಮಲ್ಲಮ್ಮ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು ಆದರೆ ಕ್ರಾಂತಿಕಾರಿ ಬೆಳವಡಿ ಯಲ್ಲಣ್ಣ ವಡ್ಡರ್ ಯಾರು ಎನ್ನುವ ಅನುಮಾನ ಎಲ್ಲರಿಗೂ ಬರುತ್ತೆ. ಯಾಕೆಂದರೆ ? ಕಿತ್ತೂರಿನ ಇತಿಹಾಸಕ್ಕೆ ಕಿತ್ತೂರು ನಾಡಿನ ಪ್ರತಿ ಊರಿನಿಂದಲು ಕೊಡಗೆ ಇದೇ, ಸರಿಯಾದ ಇತಿಹಾಸ ಇಲ್ಲದೆ ಇರುವುದರಿಂದ ಅವೂ ಮರೇಮಾಚಿ ಹೊಗಿವೆ ಇದನ್ನು ಸರ್ಕಾರ ಪತ್ತೆ ಹಚ್ಚಬೇಕು.

Contact Your\'s Advertisement; 9902492681

ಸಂಗೋಳ್ಳಿ ರಾಯಣ್ಣನ ಹೋರಾಟದಲ್ಲಿ ಪ್ರತಿಯೊಂದಕ್ಕು ಅವರ ಜೋತೆಯಾಗಿ ತನ್ನ ಪ್ರಾಣವನ್ನೇ ಈ ನಾಡಿಗೆ ಅರ್ಪಿಸಿದ ನಿಷ್ಠಾವಂತ ಸೇವಕನಾಗಿದ್ದ ಬೆಳವಡಿ ಯಲ್ಲಣ್ಣನವರ ಊರಿನಲ್ಲೆಯೇ ಅವರಿಗೆ ಜಾಗವಿಲ್ಲ ಮತ್ತು ಅವರ ಹೆಸರಿನ ವೃತ್ತ ಮಾಡಲು ಸಹಾ ಹೋರಾಟ ಮಾಡಬೇಕಾದ ಪರಿಸ್ಥಿತಿ ಈಗ ಬಂದಿದ್ದು ಮಾತ್ರ ದೂರದೃಷ್ಟವೇ ಸರಿ ಎಂದು ಅಸಮಾದಾನವಾಗುತ್ತದೆ.

ಅವರು ಶಬ್ದವೇದಿ ತಂತ್ರ ವಿದ್ಯಾಯನ್ನು ಕಲಿತಿದ್ದ ಯಲ್ಲಣ್ಣ ಶತ್ರು ಸೈನ್ಯವನ್ನು ಬರುವುದನ್ನು ಕೇವಲ ಶಬ್ದದಿಂದಲೇ ಕಂಡು ಹಿಡಿದು ರಾಯಣ್ಣನಿಗೆ ತಿಳಿಸಿ ಸುಮಾರು 800 ಸೈನಿಕರನ್ನು ಒಗ್ಗೂಡಿಸಿ ಸಂಗೋಳಿ ರಾಯಣ್ಣನಿಗೆ ಬೇನ್ನೆಲುಬಾಗಿ ನಿಂತ ಮಹಾನ ನಿಷ್ಠವಂತ ಸೇವಕ ಬೆಳವಡಿ ವಡ್ಡರ ಯಲ್ಲಣನಾಗಿದ್ದಾನೆ ಹಾಗಾಗಿ ಸರ್ಕಾರ ಕೂಡಲೇ ಸೂಕ್ತವಾಗಿ ಸಮಾಲೋಚನೆ ಮಾಡಿ ಬೇಳವಡಿ ಯಲ್ಲಣ್ಣನವರ ಇತಿಹಾಸ ಪುಟವನ್ನು ತಿರುವಿಹಾಕಿ ಅವರನ್ನು ಬೆಳಕಿಗೆ ತರುವ ಕೆಲಸ ಮಾಡಬೇಕು. ಇಂತಾ ನಿಷ್ಠಾವಂತಾ ದೇಶ ಪ್ರೇಮಿಗೆ ಗೌರವ ಸಲ್ಲಿಸಬೇಕಾದ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿಂದಿನ ಸರ್ಕಾರಗಳು ನಿರ್ಲಕ್ಷ ತೊರುತ್ತಾ ಬಂದಿವೆ. ಈಗ ತಮ್ಮ ಸರ್ಕಾರದಲ್ಲಿ ಈ ದೇಶ ಪ್ರೇಮಿಗೆ ನ್ಯಾಯ ಸಿಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಭೋವಿ ಸಮಾಜ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಕುಸ್ತಿ, ಸಮಾಜ ಸಂಸ್ಥಾಪಕ ಅಧ್ಯಕ್ಷ ಜಿ. ಶಿವಶಂಕರ, ಕಾರ್ಯದರ್ಶಿ ಕೃಷ್ಣ ಕುಶಾಲ್ಕಾರ್, ಮಲ್ಲಿಕಾರ್ಜುನ ಚೌದ್ರಿ, ರಾಘು ಲಸಕರೆ, ನಾಗೇಶ ಗೊಬ್ಬರ, ಸಂಜು ಮಂಜತ್ಕರ್, ಸುರೇಶ ಕುಶಳ್ಳರ, ರವಿ ಹಾಗರಗಿ, ವಿಠಲ ನೆಲೋಗಿ, ಶ್ರೀಹರಿ ಜಾದವ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here