ಕಲಬುರಗಿ: ‘ಸತತ ಪ್ರಯತ್ನ, ಪರಿಶ್ರಮ ಮತ್ತು ತ್ಯಾಗಗಳಿದ್ದಾಗಲೇ ದೊಡ್ಡ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಯಶಸ್ಸು ನಮ್ಮದಾಗುತ್ತದೆ. ಇಲ್ಲದಿದ್ದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದುಕೊಂಡು ಜೀವನದುದ್ದಕ್ಕೂ ಕಷ್ಟ-ನಷ್ಟಗಳನ್ನು ಅನುಭವಿಸಬೇಕಾಗುತ್ತದೆ’ ಎಂದು ಕಡಗಂಚಿಯ ವಿಶ್ವವಿದ್ಯಾಲಯದ ಜಾನಪದ ಮತ್ತು ಬುಡಕಟ್ಟು ಅಧ್ಯಯನ ವಿಬಘಧ ಸಹಾಯಕ ಪ್ರಾಧ್ಯಾಪಕ ಡಾ. ರೋಹಿಣಾಕ್ಷ ಶಿರ್ಲಾಲು ಹೇಳಿದರು.
ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ದಿಶಾ ಪಿ.ಯು. ಸೈನ್ಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿ, ಶಿಕ್ಷಣದ ಜೊತೆ ಒಳ್ಳೆಯ ಸಂಸ್ಕಾರ ರೂಢಿಸಿಕೊಂಡರೆ ಮೇಲ್ಪಟ್ಟಕ್ಕೆ ಹೋಗಲು ಸಾಧ್ಯವಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ, ಸಾಮಥ್ರ್ಯ ಇದ್ದೇ ಇರುತ್ತದೆ. ಯಾರೂ ಅಸಮರ್ಥರಲ್ಲ. ಅವರಲ್ಲಿನ ವಿಶಿಷ್ಟ ಪ್ರತಿಭೆ ಗುರುತಿಸಿ ಉತ್ತೇಜನ ನೀಡುವ ಕೆಲಸ ಆಗಬೇಕು. ಆ ನಿಟ್ಟಿನಲ್ಲಿ ದಿಶಾ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ‘ದಿಶೆ’ ತೋರಿ ವಿದ್ಯಾರ್ಥಿಗಳಿಗೆ ಸಕಾರಾತ್ಮಕ ಶಕ್ತಿ ಕಲ್ಪಿಸುತ್ತಿದೆ ಎಂದು ಅವರು ಶ್ಲಾಘಿಸಿದರು.
ಈ ದೇಶದ ನಾಳೆಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕನಸು ಕಾಣಿ. ದೊಡ್ಡ ಗುರಿ ಇಟ್ಟುಕೊಂಡು ಉನ್ನತ ಹುದ್ದೆ, ಸ್ಥಾನಮಾನ ಪಡೆದು ಕಲಿತ ವಿದ್ಯಾಸಂಸ್ಥೆಗೆ, ಪಾಲಕರಿಗೆ, ನಾಡಿಗೆ ಹೆಸರು ತನ್ನಿ, ದೇಶದ ಆಸ್ತಿಯಾಗಿರುವ ಯುವಶಕ್ತಿ ನಾಡಿಗಾಗಿ ದುಡಿಯುವುದು ಸಹ ಅಷ್ಟೇ ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಕಲ್ಪ ಫೌಂಡೇಶನ್ ಅಧ್ಯಕ್ಷ ಶಿವಾನಂದ ಖಜೂರ್ಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡುವುದರ ಜೊತೆಗೆ ಉತ್ತಮ ಸಂಸ್ಕಾರ, ಮೌಲ್ಯ, ಆದರ್ಶಗಳನ್ನು ಕಲಿಸಿಕೊಡುವಂಥ ಸಾಮಾಜಿಕ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಅದನ್ನೇ ಧೈಯವಾಗಿ- ರಿಸಿಕೊಂಡು ಉನ್ನತ ಗುರಿಯೊಂದಿಗೆ ಕಾಲೇಜನ್ನು ಮುನ್ನಡೆಸುತ್ತಿದ್ದೇವೆಂದರು. ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳ ಮೆದುಳನ್ನು ಚುರುಕುಗೊಳಿಸುವುದಕ್ಕಷ್ಟೇ ಆದ್ಯತೆ ನೀಡುತ್ತಿದ್ದು, ಇದು ಸರಿಯಲ್ಲ. ಮೆದುಳಿನ ಜೊತೆ ಹೃದಯ ವೈಶಾಲ್ಯತೆ ಬೆಳೆಸುವಂಥ ಕೆಲಸವಾಗಬೇಕಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಯಶಸ್ಸು ಗಳಿಸುವಂತೆ ಪ್ರೇರೇಪಿಸುತ್ತೇವೆ. ಎಲ್ಲ ಕಾಲಕ್ಕೂ ಅವರ ಬೆನ್ನಿಗೆ ನಿಂತು ಪೆÇ್ರೀತ್ಸಾಹಿಸುತ್ತಿದ್ದೇವೆ. `ಹಾಗಾಗಿಯೇ ಪ್ರತಿವರ್ಷವೂ ಉತ್ತಮ ಫಲಿತಾಂಶ ಬರುತ್ತಿದೆ ಎಂದು ಖಜೂರ್ಗಿ ಹೇಳಿದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಸುಹಾಸಿನಿ, ಸ್ನೇಹಾ ಪವಾರ್, ಕೃತಿ ಬಡಶೇಷಿ ತಮ್ಮ ಅನುಭವ, ಅನಿಸಿಕೆಗಳನ್ನು ಹಂಚಿಕೊಂಡರು. ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ ಮಾನಕರ್, ಖಜಾಂಚಿ ನಿತಿನ್ ತಾಂದಳೆ, ಟ್ರಸ್ಟಿ ವೆಂಕಟೇಶ ಅಮಾನ್, ಪ್ರಾಚಾರ್ಯ ಗುರುಶಾಂತಪ್ಪ ಅಕ್ಕಾ ವೇದಿಕೆಯ ಮೇಲಿದ್ದರು. ನಮ್ರತಾ ಉಪ್ಪಿನ್ ಅತಿಥಿಗಳ ಪರಿಚಯ ಮಾಡಿದರು. ನಂದಿನಿ ಪ್ರಾರ್ಥಿಸಿದರು. ಪ್ರಥಮ ವಿದ್ಯಾರ್ಥಿಗಳಿಂದ ನಾಡಗೀತೆ ಮೊಳಗಿತು. ವೈಷ್ಣವಿ ಪಲ್ಲೇರಿ ಸ್ವಾಗತಿಸಿದರು. ಹರಿಪ್ರಿಯಾ ಘನಾತೆ ನಿರೂಪಿಸಿದರು. ಕು. ಅಕ್ಷತಾ ಇಂಗಳೆ ವಂದಿಸಿದರು. ಕಾಲೇಜಿನ ವಿದ್ಯಾರ್ಥಿಗಳು, ಪಾಲಕರು, ಉಪನ್ಯಾಸಕರು, ಸಿಬ್ಬಂದಿ ಪಾಲ್ಗೊಂಡಿದ್ದರು. ಸಮಾರಂಭದ ಬಳಿಕ ಸಾಂಸ್ಕøತಿಕ ಕಾರ್ಯಕ್ರಮ ನಡೆದವು, ವಿದ್ಯಾರ್ಥಿಗಳು ನೃತ್ಯ, ಭರತನಾಟ್ಯ, ಸಂಪೂರ್ಣ ರಾಮಾಯಣ ಹಾಡಿನ ಮೂಲಕ ಪ್ರಸ್ತುತಪಡಿಸಿದರು.