ಕಲಬುರಗಿ: ತಾಲೂಕಿನ ಲೋಕೋಪಯೋಗಿ ಇಲಾಖೆಯ ಗುಣ ನಿಯಂತ್ರಣ ವಿಭಾಗದಲ್ಲಿ ಜೆಇ ಆಗಿ ಕಾರ್ಯನಿರ್ಹಿಸುತ್ತಿದ್ದ ಶಿವಶರಣಪ್ಪ ಎಲ್ ಆಲೂರಕರ್ ಅನಾರೋಗ್ಯದಿಂದ ಮಂಗಳವಾರ ನಿಧನರಾದರು.
ಮೃತರು ಪತ್ನಿ, ಮೂವರು ಹೆಣ್ಣು, ಒರ್ವ ಗಂಡು ಮಗ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಬುಧವಾರ ಸ್ವಗ್ರಾಮ ಆಳಂದ ತಾಲೂಕಿನ ರಿಕ್ಕಿನ ಆಲೂರ ಗ್ರಾಮದಲ್ಲಿ ಮಧ್ಯಾಹ್ನ 1 ಗಂಟೆಗೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.