ಕಲೆ ವಿಚಾರ ಶಕ್ತಿಯನ್ನು ಬೆಳೆಸುತ್ತದೆ: ಡಾ. ನಿರಂಜನ್ ನಿಷ್ಠಿ

0
53

ಕಲಬುರಗಿ: ಕಲೆ ವಿಚಾರ ಶಕ್ತಿಯನ್ನು ಬೆಳೆಸುತ್ತದೆ. ಕಲೆ- ವಿಜ್ಞಾನಗಳಿಂದ ಕೂಡಿದ ಬದುಕು ಸಾರ್ಥಕತೆಯನ್ನು ಪಡೆಯುತ್ತದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ನಿರಂಜನ್ ನಿಷ್ಠಿ ಅವರು ಹೇಳಿದರು.
ಶರಣಬಸವ ವಿಶ್ವವಿದ್ಯಾಲಯ ಶರಣಬಸವ ವಿಶ್ವವಿದ್ಯಾಲಯದ ಕಲಾ ನಿಕಾಯದ ಎಂ.ಎ. ವಿಜ್ಯುವಲ್‌ಆರ್ಟ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ನಾಲ್ಕು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಬುಧವಾರ ಮುಖ್ಯ ಅಥಿತಿಗಳಾಗಿ ಮಾತನಾಡಿದ ಅವರು, ಎಲ್ಲರ ಮನಸ್ಸನ್ನು ಗೆಲ್ಲುವ ಶಕ್ತಿ ಕಲೆಗಿದೆ, ಕಲೆಯಿಂದ ವಿಶೇಷ ಜ್ಞಾನ ಪ್ರಾಪ್ತಿ ಆಗುತ್ತದೆ ಎಂದರು.

ಡಾ. ವಿ.ಜಿ. ಅಂದಾನಿ ಅವರು ಮಾತನಾಡಿದರು. ಡಾ.ಎ.ಎಸ್. ಪಾಟೀಲರು ಫೈನ್‌ಆರ್ಟ ಈ ಭಾಗದಲ್ಲಿ ರಾಷ್ಟ್ರಅಂತರಾಷ್ಟ್ರ ಮಟ್ಟದಲ್ಲಿ ಬೆಳೆದಿರುವುದು ಸಂತೋಷದ ವಿಷಯ. ಈ ಕ್ಷೇತ್ರದಲ್ಲಿ ನಮ್ಮಯುವಕರು ಮತ್ತು ಅದರಲ್ಲೂ ಯುವತಿಯರು ಇನ್ನೂ ಹೆಚ್ಚೆಚ್ಚು ಬೆಳೆಯಬೇಕೆಂದು ಯುವಕಲಾವಿದರಿಗೆ ಕಿವಿ ಮಾತನ್ನು ಹೇಳಿದರು.
ಡಾ. ಶಾಂತಲಾ ನಿಷ್ಠಿ ಅವರು ಅಧ್ಯಕ್ಷೀಯ ಮಾತುಗಳನ್ನಾಡುತ್ತ ಈ ಭಾಗದಲ್ಲಿ ಕಲೆ ಬೆಳೆದುಬಂದ ಬಗೆಯನ್ನು ಪೂಜ್ಯ.ದೊಡ್ಡಪ್ಪಅಪ್ಪ್ ಹಾಗೂ ಪೂಜ್ಯ. ಡಾ. ಶರಣಬಸವಪ್ಪಅಪ್ಪಅವರ ಪ್ರಯತ್ನಗಳನ್ನು ಹೇಳಿದರು.ಶ್ರೀ. ಕೆ.ಎಸ್. ಸರೋದೇ, ಡಾ.ಲಕ್ಷ್ಮಿ ನಾರಾಯಣ ಭಾವಸಾರ್, ಪ್ರೋ.ವಾಣಿಶ್ರಿ, ಡಾ.ಸುಬ್ಬಯ್ಯ ಎಂ.ನೀಲಾ, ಪ್ರೋ. ವ್ಹಿ.ಬಿ. ಬಿರಾದಾರ, ಪ್ರೊ. ಗಾಯತ್ರಿ ಕಲ್ಯಾಣಿ, ಪ್ರೋ. ನಿಜಲಿಂಗ ಮುಗಳಿಯವರು ಉಪಸ್ಥಿತರಿದ್ದರು.ಡಾ. ಛಾಯಾ ಭರತನೂರಅವರ ಪ್ರಾರ್ಥನಾ ಗೀತೆ ಹಾಡಿದರು. ಪ್ರೋ. ಪಂಚಶೀಲಾ ಬಿ.ಅಪ್ಪ್‌ಅವರು ಸ್ವಾಗತಕೋರಿದರು.ಶ್ರೀ. ಡೊಣ್ಣೇಗೌಡರ ವೆಂಕಣ್ಣ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here