ಕಲಬುರಗಿ ನಗರಕ್ಕೆ ಕೊಳಚೆ ನೀರು ಪೂರೈಸದಿರಲು ಜಂಟಿ ಶಾಸಕರ ಸೂಚನೆ

0
87

ಧೀಡಿರ್ ನೀರು ಸರಬರಾಜು ಮತ್ತು ಶುದ್ಧಿಕರಣ ಘಟಕಕ್ಕೆ ಭೇಟಿ

ಕಲಬುರಗಿ: ನಗರಕ್ಕೆ ಕೊಳಚೆ ನೀರು ಪೂರೈಕೆ ಆಗುತ್ತಿರುವ ಕುರಿತು ಸಾಕಷ್ಟು ದೂರುಗಳ ಹಿನ್ನೆಲೆಯಲ್ಲಿ ಶುಕ್ರವಾರ ಕಲಬುರಗಿ ಉತ್ತರ ಮತ್ತು ದಕ್ಷಿಣ ಮತಕ್ಷೇತ್ರದ ಶಾಸಕರು ಜಂಟಿಯಾಗಿ ಧೀಡಿರ ನೀರು ಸರಬರಾಜು ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ, ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ನೇತೃತ್ವದಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾದ ಪಾಟೀಲ್ ಭುವನೇಶ್ ದಾಸ್, ಫಾರಜ್ ಉಲ್ ಇಸ್ಲಾಂ ಸೇರಿದಂತೆ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಅಜಮಲ್ ಗೋಲಾ, ಪಾಲಿಕೆ ಸದಸ್ಯರು ಸೇರಿದಂತೆ ಪಕ್ಷದ ಮುಖಂಡರು ಈ ಸಂದರ್ಭದಲ್ಲಿ ಜೊತೆಗೆ ಇದ್ದರು.

Contact Your\'s Advertisement; 9902492681

ನಂತರ ಎಲ್.ಎನ್.ಟಿ ಅಧಿಕಾರಿಗಳಿಗೆ ಮಾತನಾಡಿದ ಶಾಸಕರು ನಗರಕ್ಕೆ ಕೊಳಚೆ ನೀರು ಸರಬರಾಜು ಆಗುತ್ತಿರುವ ಬಗ್ಗೆ ಸಾಕಷ್ಟು ದೂರು ಬರುತ್ತಿವೆ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಜಂಟಿ ಶಾಸಕರು ನೀರು ಶುದ್ಧಿಕರಣ ಘಟಕದಲ್ಲಿ ಆಗುತ್ತಿರು ತಾಂತ್ರಿಕ ತೊಂದರೆಗಳನ್ನು ಶೀಘ್ರ ನಿವಾರಿಸಿ ನಗರಕ್ಕೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಬೇಕೆಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಫೌಜಿಯಾ ತರನ್ನೂಮ್, ಕಾಂಗ್ರೆಸ್ ಮುಖಂಡ ಮಜಹರ್ ಆಲಮ್ ಖಾನ್, ಪಾಲಿಕೆ ಸದಸ್ಯ ಸೈಯದ್ ಅಹ್ಮದ್, ತಾಹೆರ್, ದಸ್ತೆಗಿರ್ ಅಹ್ಮದ್, ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here