ಜ.16 ರಿಂದ ಕಲಬುರಗಿ, ಯಾದಗಿರಿ, ಬೀದರನಲ್ಲಿ ಮಾನವ ಹಕ್ಕುಗಳ ಆಯೋಗದಿಂದ ಸಿಟ್ಟಿಂಗ್ಸ್

0
28

ಸಾರ್ವಜನಿಕರ ಅಹವಾಲು ಆಲಿಕೆ,ಸ್ಥಳದಲ್ಲಿಯೇ ಪ್ರಕರಣ ವಿಲೇವಾರಿ

ಕಲಬುರಗಿ; ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣದಲ್ಲಿ ನೊಂದವರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳನ್ನೊಳಗೊಂಡ ಪೀಠವು ಇದೇ ಜನವರಿ 16 ರಿಂದ 20ರ ವರೆಗೆ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ ಹಾಗೂ ಬೀದರ ಜಿಲ್ಲೆಯಲ್ಲಿ ಸಿಟ್ಟಿಂಗ್ಸ್ ನಡೆಸಿ ಸಾರ್ವಜನಿಕರ ಅಹವಾಲು ಆಲಿಸಿ ಸ್ಥಳದಲ್ಲಿಯೇ‌ ವಿಲೇವಾರಿ ಮಾಡಲಿದೆ.

ಕಲಬುರಗಿ ಜಿಲ್ಲೆಯಲ್ಲಿ ಜನವರಿ 16, 17 ಹಾಗೂ 20 ರಂದು, ಯಾದಗಿರಿ ಜಿಲ್ಲೆಯಲ್ಲಿ ಜನವರಿ 18 ರಂದು ಹಾಗೂ ಬೀದರ ಜಿಲ್ಲೆಯಲ್ಲಿ ಜನವರಿ 19 ರಂದು ಆಯೋಗದ ಪೀಠವು ಸಿಟ್ಟಿಂಗ್ಸ್ ನಡೆಸಲಿದ್ದು, ಅಂದು ಈ ಜಿಲ್ಲೆಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು, ಸಂಘ-ಸಂಸ್ಥೆಗಳಿಂದ ಅಹವಾಲು ಆಲಿಸಿ ಪರಿಶೀಲಿಸಿ ಸ್ಥಳದಲ್ಲಿಯೆ ಪ್ರಕರಣಗಳನ್ನು ವಿಲೇವಾರಿ ಮಾಡಲಿದೆ. ಇದೇ ಸಂದರ್ಭದಲ್ಲಿ ಈ ಹಿಂದೆ ಆಯೋಗಕ್ಕೆ ಸಲ್ಲಿಕೆಯಾಗಿರುವ ಪ್ರಕರಣಗಳ ವಿಲೇವಾರಿ ಸಹ ಆಯಾ ಜಿಲ್ಲೆಯಲ್ಲಿಯೆ ಮಾಡಲಾಗುತ್ತದೆ.

Contact Your\'s Advertisement; 9902492681

ಕಲಬುರಗಿ, ಯಾದಗಿರಿ ಹಾಗೂ ಬೀದರ ಜಿಲ್ಲೆಯ ಸಾರ್ವಜನಿಕರು, ದೂರುದಾರರು ಹಾಗೂ ಮಾನವ ಹಕ್ಕುಗಳ ಸಂಘ- ಸಂಸ್ಥೆಗಳು ಮಾನವ ಹಕ್ಕುಗಳ ಉಲ್ಲಂಘನೆ ಕುರಿತಂತೆ ಯಾವುದೇ ದೂರುಗಳಿದ್ದಲ್ಲಿ ನಿಗದಿತ ದಿನಾಂಕದಂದು ಅಯೋಗದ ಪೀಠದ ಮುಂದೆ ಹಾಜರಾಗಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಆಯೋಗದ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here