ಸತ್ಯಂಪೇಟೆಗೆ ಸಿ.ಎಂ ರಾಜಕೀಯ ಕಾರ್ಯದರ್ಶಿ ಬಿ.ಆರ್.ಪಾಟೀಲ್ ಭೇಟಿ

0
134

ಸುರಪುರ: ದಾವಣಗೇರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಸಮಾವೇಶದಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ಎಲ್ಲರು ಬದ್ಧರಾಗಿರಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಆಳಂದ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿದರು.

ನಗರದ ಸತ್ಯಂಪೇಟೆ ಗ್ರಾಮದಲ್ಲಿನ ಪತ್ರಕರ್ತ ಲಿಂ:ಲಿಂಗಣ್ಣ ಸಂತ್ಯಂಪೇಟೆ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ,ದಾವಣಗೇರೆ ಸಮಾವೇಶದಲ್ಲಿ ಬಿ.ಎಸ್.ಯಡಿಯೂರಪ್ಪನವರನ್ನು ಹೊರತು ಪಡಿಸಿ ವಿರೋಧ ಪಕ್ಷದ ಅನೇಕ ವೀರಶೈವ ಲಿಂಗಾಯತ ಸಮುದಾಯದ ನಾಯಕರು ಭಾಗವಹಿಸದೆ ದೂರ ಉಳಿದಿದ್ದು ಒಳ್ಳೆಯ ಬೆಳವಣಿಗೆಯಲ್ಲ,ಅಲ್ಲದೆ ಸಮಾವೇಶದಲ್ಲಿ ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಲ್ಲದೆ,ಜನಗಣತಿ ಸಂದರ್ಭದಲ್ಲಿ ಧರ್ಮದ ಕಾಲಂ ನಲ್ಲಿ ವೀರಶೈವ ಲಿಂಗಾಯತ ಎಂದು ಬರೆಯಿಸುವಂತೆ ಘೋಷಿಸಿರುವುದು ಒಳ್ಳೆಯದು,ಆದರೆ ಅದರಂತೆ ರಾಜಕೀಯ ಬದಿಗಿಟ್ಟು ಸಮುದಾಯದ ಮುಖಂಡರು ನಡೆದುಕೊಳ್ಳಬೇಕು ಎಂದರು.

Contact Your\'s Advertisement; 9902492681

ಅಲ್ಲದೆ ರೈತರು ಅನೇಕ ದಿನಗಳಿಂದ ಕಾಲುವೆಗೆ ನೀರು ಹರಿಸುವಂತೆ ಭೀಮರಾಯನಗುಡಿಯಲ್ಲಿ ನಡೆದ ಪ್ರತಿಭಟನೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ಸಚಿವ ಶರಣಬಸಪ್ಪಗೌಡ ದರ್ಶನಾಪುರ,ನಾನು,ಈ ಭಾಗದ ನಮ್ಮ ಶಾಸಕರು ತಂದು ನೀರು ಬಿಡಿಸುವಂತ ಕೆಲಸ ಮಾಡಿದ್ದೇವೆ ಎಂದರು.ಅಲ್ಲದೆ ಮುಂದೆಯೂ ರೈತರು ಯಾವುದೇ ಸಂದರ್ಭದಲ್ಲಿಯಾದರು ಸರಕಾರಕ್ಕೆ ತಮ್ಮ ಬೇಡಿಕೆ ಸಲ್ಲಿಸಬೇಕಾದರೆ ಅದಕ್ಕೆ ಸ್ಪಂಧಿಸುವುದಾಗಿ ತಿಳಿಸಿದರು.

ಈ ಕಡೆಗೆ ಬಂದರೆ ನನಗೆ ಮೊದಲು ಲಿಂಗಣ್ಣ ಸತ್ಯಂಪೇಟೆಯವರು ಮಲ್ಲಿಕಾರ್ಜುನ ಅವರು ನೆನಪಾಗುತ್ತಾರೆ,ಅದಕ್ಕಾಗಿಯೇ ನಾನು ಸಿಂಧನೂರಿಗೆ ಹೋಗಬೇಕಾದರೆ ಮಾರ್ಗದಲ್ಲಿ ಲಿಂಗಣ್ಣನವರ ಮನೆ ಹಾಗೂ ಸಮಾಧಿಗೆ ಭೇಟಿ ನೀಡುವ ಮನಸ್ಸಾಯಿತು ಎಂದು ಸಮಾಧಿಗೆ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ,ಪಿ.ಎಸ್.ಐ ಸಿದ್ದಣ್ಣ ಯಡ್ರಾಮಿ,ಮುಖಂಡರಾದ ಶಿವರುದ್ರ ಉಳ್ಳಿ,ವೀರಭದ್ರ ಕೆಂಭಾವಿ,ಜಟ್ಟೆಪ್ಪ,ಮಂಜುನಾಥ ಹಿರೇಮಠ,ಶರಬಣ್ಣ ಹೊಸ್ಮನಿ, ವಿಜಯಕುಮಾರ ಗುಳಗಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here