ಶಹಾಬಾದ: ಜನವರಿ 22ರಂದು ಅಯೋಧ್ಯೆ ಶ್ರೀರಾಮ ಮಂದಿರದ ಲೋಕಾರ್ಪಣೆಯ ಶ್ರೀರಾಮ ಲಲ್ಲಾನ ವಿಗ್ರಹ ಪ್ರತಿμÉ್ಠಯ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಪೂಜಿಸಲ್ಪಟ್ಟ ಮಂತ್ರಾಕ್ಷತೆಯನ್ನು ಮನೆಮನೆಗೆ ವಿತರಿಸುವ ಅಭಿಯಾನದಲ್ಲಿ ತಾಲೂಕಿನ ಹೊನಗುಂಟಾ ಗ್ರಾಮದ ಮನೆಮನೆಗೆ ಮಂತ್ರಾಕ್ಷತೆ ವಿತರಿಸಲಾಯಿತು.
ಗ್ರಾಮದ ಯುವಮುಖಂಡರು ಮನೆಮನೆಗೆ ತೆರಳಿ ಜನವರಿ 22ರ ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ಸುಮುಹೂರ್ತದಲ್ಲಿ ಶ್ರೀರಾಮ ದೇವರ ಪ್ರಾಣಪ್ರತಿμÉ್ಠ ನಡೆಯಲಿದೆ. ಇದನ್ನು ಪ್ರತೀ ರಾಮಭಕ್ತರು ತಮ್ಮತಮ್ಮ ಊರು, ಮನೆಗಳಲ್ಲಿ ಸಂಭ್ರಮದಿಂದ ಆಚರಿಸುವಂತಾಗಲು ಈ ಅಭಿಯಾನ ನಡೆಸಲಾಗುತ್ತಿದೆ, ಶ್ರೀರಾಮಲಲ್ಲಾನ ವಿಗ್ರಹ ಪ್ರತಿμÉ್ಠಯ ದಿನ ಸೂರ್ಯಾಸ್ತದ ಬಳಿಕ ಎಲ್ಲ ಮನೆಗಳಲ್ಲಿ ಕನಿಷ್ಠ ಐದು ದೀಪ ಬೆಳಗಬೇಕು, ಮನೆಯವರೆಲ್ಲರೂ ಸೇರಿ ಅಯೋಧ್ಯೆ ಮಂದಿರ ಇರುವ ಉತ್ತರ ದಿಕ್ಕಿಗೆ ಮುಖ ಮಾಡಿ ಮಹಾ ಮಂಗಳಾರತಿ ಬೆಳಗಬೇಕು ಎಂದು ತಿಳಿಸಿ ಮಂತ್ರಾಕ್ಷೇತಗಳ್ಳನ್ನು ವಿತರಣೆಮಾಡಲಾಗುತ್ತಿದೆ ಎಂದರು.
ಅಲ್ಲದೇ ಮಂದಿರದ ಭಾವಚಿತ್ರ ಹಾಗೂ ಕರಪತ್ರಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸುಭಾಷ ಜಾಪೂರ, ಸಂತೋಷ ಹಾವೇರಿ,ಸಂಗಣ್ಣ ಇಜೇರಿ, ರಾಜು ಸಣಮೊ,ಶರಣು ಕೊಡಸಾ,ನಾಗರಾಜ ಕುಂಬಾರ, ರುದ್ರಮಿಣಿ ಪೂಜಾರಿ, ಮಲ್ಲು ಆಡಿನ,ಯಲ್ಲಾಲಿಂಗ ಕರಗಾರ,ರಾಯಪ್ಪ,ಬನ್ನಪ್ಪ,
ಸಂಗಣ್ಣಾ ಬಾಗೋಡಿ,ಮಹೇಶ ಬಬಲಾದಿ,ಕೃಷ್ಣ ಬಾಗೋಡಿ,ಮಹಾಂತೇಶ ಟೆಂಗಳಿ,ವಜ್ರಪ್ಪ ಬಂಗಿ,ಮಾಳು ಕೌವಲಗಿ,ಧನಂಜಯ ಟೇಲರ್,ದೇವಣ್ಣಾ ಇಜೇರಿ,ಬಾಬು ಆಡಿನ್,ನಾಗು ಸುಣಗಾರ,ಶರಣು ಬಾಗೊಡಿ,ಸುನೀಲ ಬಬಲಾದಿ ಇನ್ನಿತರರು ಇದ್ದರು.