ಕಲಬುರಗಿ: ಕೃಷಿ ವಿಜ್ಞಾನಿಗಳ ಸಹಕಾರದಿಂದ ರೈತ ವಿವಿದ ಬೆಳೆ ಬೆಳೆಯ ಬಹುದು, ಆದರೆ ಉತ್ತಮ ಬೆಲೆ ಸಿಗಲು ಕೃಷಿ ಉತ್ಪನ್ನ ಗಳ ಬ್ರಾಂಡಗೆ ಪ್ರೋತ್ಸಾಹ (Agro Products value addition and Branding), ಇಂದಿನ ಅಗತ್ಯತೆ ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ ಮಹಾ ನಿರ್ದೇಶಕರಾದ ಡಾ. ಹಿಮಾನಷಾ ಪಾತಕ (DR. Himanshu Pathak) ತಿಳಿಸಿದರು.
ಆಟರೀ ಬೆಂಗಳೂರು ನಿರ್ದೇಶಕರಾದ ಡಾ. ವೆಂಕಟಸುಬ್ರಹ್ಮಣ್ಯಂ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕರಾದ ಡಾ. ಎ ಆರ್ ಕುರುಬರ, ಕೆ ವಿ ಕೆ ಕಲಬುರಗಿ ಮುಖ್ಯಸ್ಥರಾದ ಡಾ. ರಾಜು ತೆಗ್ಗಳಿ ಉಪಸ್ಥಿತರಿದ್ದರು. ಭೌಗೋಳಿಕ ಸೂಚ್ಯಂಕ ಪಡೆದ ಕಲಬುರ್ಗಿ ತೊಗರಿ ಬೇಳೆ (Tur Dhal) ಹಾಗೂ ಕಮಲಾಪುರ ಕೆಂಪು ಬಾಳೆ(Kamalpur Red Banana) ಮಾಹಿತಿಯನ್ನು ಮಹಾ ನಿರ್ದೇಶಕ ರಿಗೆ ವಿವರಿಸಿದರು.
ಒಂದು ಜಿಲ್ಲೆ ಒಂದು ಉತ್ಪನ್ನ, ಕೃಷಿ ಮಾರುಕಟ್ಟೆ ಗೆ ಸಂಬಂಧಿಸಿದಂತೆ ಕಿಸಾನ್ ಕಾರ್ಟ್ ಚರ್ಚೆಯಲ್ಲಿ ವಿವಿದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಆಟರಿ ಹೆಬ್ಬಾಳ ವಿಜ್ಞಾನಿಗಳು, ಅಧಿಕಾರಿಗಳು ಬೆಂಗಳೂರುನಲ್ಲಿ ಜರುಗಿದ ಸಭೆಯಲ್ಲಿ ಹಾಜರಿದ್ದರು.