ಕಲಬುರಗಿ: ಜೇವರ್ಗಿ ತಾಲೂಕಿನ ಯಡ್ರಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮಳ್ಳಿ ಗ್ರಾಮದ ಸರಹದ್ದಿನಲ್ಲಿ ಬರುವ ಶಹಪುರ ಸಿಂದಗಿ ರಾಜ್ಯ ಹೆದ್ದಾರಿಯಲ್ಲಿ ಇರುವ ದಾಬಾಗಳಲ್ಲಿ ಅಕ್ರಮ ಜೂಜಾಟ (ಇಸ್ಪೀಟ್), ಮಟ್ಕಾ ದಂದೆ ಸೇರಿದಂತೆ ಹಲವಾರು ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಜನಜಾಗೃತ ವೇದಿಕೆಯ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ಅವರಿಗೆ ದೂರು ಸಲ್ಲಿಸಲಾಯಿತು.
ಹೆದ್ದಾರಿಯಲ್ಲಿ ಇರುವ ದಾಬಾಗಳಲ್ಲಿ ,ಅಕ್ರಮ ಜೂಜಾಟˌ ಮಟ್ಕಾ ದಂದೆ ಸೇರಿದಂತೆ ಹಲವಾರು ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು ಈ ಬಗ್ಗೆ ಸಾಕಷ್ಟು ಬಾರಿ ಸಾರ್ವಜನಿಕರು ಸೇರಿದಂತೆ ಹಲವಾರು ಸಂಘಸಂಸ್ಥೆಗಳು ಮೌಖಿಕ ಮತ್ತು ಲಿಖಿತ ದೂರು ಕೊಟ್ಟರೂ ಸಹಿತ ಅದನ್ನು ಮಟ್ಟ ಹಾಕುವ ಬದಲಿಗೆ ಸ್ಥಳಿಯ ಪೊಲೀಸರು ಆ ಮಟ್ಕಾ ಮತ್ತು ಇಸ್ಪೀಟ್ ಆಡಿಸುವ ಏಜೆಂಟರ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಆದ್ದರಿಂದ ಅದಕ್ಕೆ ಕುಮ್ಮಕ್ಕು ನೀಡುತ್ತಿರುವ ಆ ವ್ಯಾಪ್ತಿಯ ಬೀಟ್ ಪೊಲೀಸರು ಮತ್ತು ಇಷ್ಟೆಲ್ಲಾ ಅಕ್ರಮ,ಅನೈತಿಕ ಚಟುವಟಿಕೆಗಳು ನಡೆದರೂ ಅದನ್ನು ತಡೆಗಟ್ಟುವಲ್ಲಿ ಸ್ಥಳೀಯ ಬೀಟ್ ಪೊಲೀಸರು ಮತ್ತು ಪಿಎಸ್ ಐ ಅವರ ಮೇಲೆ ಕ್ರಮಕೈಗೊಳ್ಳಬೇಕು. ಕೂಡಲೇ ಈ ಬುಕ್ಕಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಸಂಸ್ಥಾಪಕ ಅಧ್ಶಕ್ಷ ಗುರಣ್ಣ ಐನಾಪುರˌ ಜಿ.ಶಿವಶಂಕರ್, ಮಲ್ಲಿಕಾರ್ಜುನ ಕೆರಮಗಿ, ಶ್ರೀಕುಮಾರ್ ಕಟ್ಟಿಮನಿ , ಶಿವಕುಮಾರ್ ದೊಡಮನಿ, ಬಸವರಾಜ ಕಣಮೇಶ್ವರ ಸೇರಿದಂತೆ ಇತರರು ಇದ್ದರು.