20 ರಂದು ಕೇಂದ್ರ ಸರಕಾರದ ಭೂತ ದಹನ ಚಳುವಳಿ

0
40

ಭಾವನಾತ್ಮಕ ರಾಜಕಾರಣ ಸಾಕು; ಜನರ ಬದುಕು ಕಟ್ಟುವ ರಾಜಕಾರಣ ಬೇಕು

ಕಲಬುರಗಿ: ರಾಮ ಮಂದಿರ ವಿಷಯದಲ್ಲಿ ಕೇಂದ್ರ ಸರ್ಕಾರ ನಡೆಸುತ್ತಿ ರುವ ಭಾವನಾತ್ಮಕ ರಾಜಕಾರಣವನ್ನು ಕೈಬಿಟ್ಟು ಜನರ ಬದುಕು ಕಟ್ಟುವ ರಾಜಕಾರಣ ಮಾಡಬೇಕೆಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಮಂಡಳಿಯ ಕರೆಯ ಮೇರೆಗೆ ಜ. 20ರಂದು ರಾಜ್ಯಾದ್ಯಂತ ಸರಕಾರದ ಭೂತದಹನ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಡಾ. ಮಹೇಶ ರಾಠೋಡ ತಿಳಿಸಿದರು.

ನಗರದ ಜಿಲ್ಲಾದಿಕಾರಿಗಳ ಕಚೇರಿ ಮುಂದೆ ಕೇಂದ್ರ ಸರಕಾರದ ಭೂತದಹನ ಮಾಡುವ ಮೂಲಕ ಕೇಂದ್ರ ಸರಕಾರದ ವೈಫಲ್ಯಗಳು ಮತ್ತು ಸದ್ಯ ನಡೆಸುತ್ತಿರುವ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದು ಇಂತಹ ಭಾವನಾತ್ಮಕ ರಾಜಕಾರಣ ಬದಲಿಗೆ ಜನರ ಬದುಕು ಕೊಡುವ ನಿಟ್ಟಿನಲ್ಲಿ ಮುಂಬರುವ ಬಜೆಟ್‍ನಲ್ಲಿ ವಿವಿಧ ಬೇಡಿಕೆಗಳನ್ನು ಅನುಷ್ಠಾನಕ್ಕೆ ತರಬೇಕೆಂದು ಒತ್ತಾಯಿಸಲಾಗುವುದೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಪಕ್ಷದ ಪ್ರಮುಖ ಬೇಡಿಕೆಗಳಾದ ಬರಗಾಲ ಪರಿಹಾರ, ಕೇಂದ್ರ ಸರಕಾರವು ರಾಜ್ಯ ಸರಕಾರ ಸಲ್ಲಿಸಿರುವ 18,171ಕೋಟಿ ರೂಪಾಯಿಗಳನ್ನು ರಾಷ್ಟ್ರೀಯ ಪರಿಹಾರ ನಿಧಿಯಿಂದ ಬಿಡುಗಡೆ ಮಾಡಬೇಕು, ಮನರೇಗಾ ಯೋಜನೆಯಡಿ ದಿನಗೂಲಿ 200ದಿನಗಳಿಗೆ ಏರಿಸಿ ಕೂಲಿಯನ್ನು 600ಗಳಿಗೆ ಹೆಚ್ಚಿಸಬೇಕು, ರಾಜ್ಯದಲ್ಲಿರುವ 27ಲಕ್ಷ ಕುಟುಂಬಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು, ಕಾಪೆರ್Çೀರೆಟ್ ಪರ ಕಾರ್ಮಿಕ ಕಾಯ್ದೆಯಲ್ಲಿ 8ಗಂಟೆಯಿಂದ 12ಗಂಟೆಗೆ ಕೆಲಸದ ಅವಧಿ ಹೆಚ್ಚಿಸಿದ್ದು ಹಿಂಪಡೆಯಬೇಕು ಮತ್ತು ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಅದಿಕಾರಕ್ಕೆ ಬಂದರೆ 6ನೇಯ ಗ್ಯಾರಂಟಿಯಾಗಿ ಅಕ್ಷರ ದಾಸೋಹ, ಬಿಸಿಂiÀೂಟ, ಹಾಗೂ ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸುವುದಾಗಿ ಪ್ರಚಾರದ ವೇಳೆ ಪ್ರಿಯಂಕಾ ಗಾಂಧಿ ಆಶ್ವಾಸನೆ ನೀಡಿದ್ದರು. ಅದನ್ನು ಈಡೇರಿಸುವುದು ಸೇರಿದಂತೆ ಹಲವಾರು ಬೇಡಿ ಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

ಸಿಪಿಐ ರಾಜ್ಯ ಮಂಡಳಿ ಸದಸ್ಯ ಮೌಲಾಮುಲ್ಲಾ, ಭೀಮಾಶಂಕರ ಮಾಡಿಯಾಳ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here