ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಯಲ್ಲಿರುವಂತ ಅಂಗವಿಕಲ ಮಹಿಳೆಯರಿಗೆ ಹೆಚ್ಚುವರಿ ಮಶಾಸನವನ್ನು ಕೆ.ಕೆ.ಆರ್.ಡಿ.ಬಿ ನೀಡಬೇಕೆಂದು ನ್ಯೂ ಲೈಫ್ ಅಂಗವಿಕಲರ ಮಹಿಳೆಯರ ಸಂಘದಿಂದ ಕೆ.ಕೆ.ಆರ್.ಬಿ ಅಧ್ಯಕ್ಷ ಹಾಗೂ ಶಾಸಕರಾದ ಡಾ. ಅಜಯಸಿಂಗ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿ ಒತ್ತಾಯಿಸಿದರು.
ಶಾಸಕರ ನಿವಾಸದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷರಾದ ಮಹೆಬೂಬ್ ಬಿ ಮತ್ತು ಉಪಾಧ್ಯಕ್ಷರಾದ ಶಕೀಲಾ ಬೇಗಂ ಅವರ ನಿಯೋಗ ಭೇಟಿ ನೀಡಿ ಮನವಿ ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅಂಗವಿಕಲರ ಮಹಿಳೆಯರ ಸ್ಥಿತಿ ಗಂಭೀರವಾಗುತ್ತಿದ್ದು ನಿರುದ್ಯೋಗ, ಬೆಲೆ ಏರಿಕೆ ಮತ್ತು ಸ್ಪರ್ಧಾತ್ಮಕ ಜಗತಿನಲ್ಲಿ ರಾಜ್ಯ ಸರಕಾರ ನೀಡುತ್ತಿರುವ ಮಶಾಸನ ಯಾವುದಕ್ಕೂ ಸಾಲುತಿಲ್ಲ. ಅಂಗವಿಕಲ ಮಹಿಳೆಯರು ತನ್ನ ಕುಟುಂಬ ಹಾಗೂ ಇತರರ ಮೇಲೆ ಅವಲಂಬಿತರಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಶಿಕ್ಷಣ ಹಾಗೂ ಯಾವುದೇ ಉದ್ಯೋಗದಿಂದ ನೂರಾರು ಮಹಿಳೆಯರು ದೂರುಳಿದಿರುವ ಗುರುತಿಸಿ ರಾಜ್ಯ ಸರಕಾರ ನೀಡುತ್ತಿರುವ 1400 ರೂ ಮಶಾಸನಕ್ಕೆ ಕೆ.ಕೆ.ಆರ್.ಡಿ.ಬಿಯಿಂದ ಹೆಚ್ಚುವರಿಯಾಗಿ ಸೇರಿ ಅಂಗವಿಕಲ ಮಹಿಳೆಯರಿಗೆ ರೂ. 6000 ಮಶಾಸನ ತಲುಪುವಂತೆ ವ್ಯವಸ್ಥೆ ಮಾಡುವ ಮೂಲಕ ಕಲ್ಯಾಣ ಕರ್ನಾಟಕದಲ್ಲಿ ಅಂಗವಿಕಲ ಮಹಿಳೆಯರ ನೆರವಿಗೆ ಧಾವಿಸುವ ಮೂಲಕ ಘನತೆಯ ಬದುಕನ್ನು ಕಟ್ಟಿಕೊಳ್ಳವಂತೆ ವಾತಾವರಣ ನಿರ್ಮಾನ ಮಾಡಬೇಕೆಂದು ಡಾ. ಅಜಯಸಿಂಗ್ ಮನವರಿಕೆ ಮಾಡಿಕೊಟ್ಟರು.