ಯಾದಗಿರಿ : ಕಳೆದ 2 ದಶಕಗಳಿಂದ ನಾವೂ ಕಲ್ಯಾಣ ಕರ್ನಾಟಕದಲ್ಲಿ ಪ್ರಮುಖ ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮೂಲಕ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದ್ದೇವೆ, ಜಿಲ್ಲೆಯಲ್ಲಿ ಬರುವ ದಿನಗಳಲ್ಲಿ ಹಮ್ಮಿಕೊಳ್ಳುವ ಚಟುವಟಿಕೆಗಳ ಯಶಸ್ಸಿಗೆ ಎಲ್ಲರೂ ಅಗತ್ಯ ಸಹಾಯ ಸಹಕಾರ ನೀಡಬೇಕೆಂದು ವಿಕಾಸ ಅಕಾಡೆಮಿಯ ಮುಖ್ಯಸ್ಥರಾದ ಡಾ. ಬಸವರಾಜ ಪಾಟೀಲ್ ಸೇಡಂ ಕರೆ ನೀಡಿದರು.
ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಅಕಾಡೆಮಿಯ ಜಿಲ್ಲಾ ಹಾಗೂ ತಾಲ್ಲೂಕಗಳ ಸಂಚಾಲಕರ ಹಾಗೂ ಹಿತೈಷಿಗಳ ಸರ್ವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಾನವ ಸಂಪನ್ಮೂಲ ಹಾಗೂ ಯುವಶಕ್ತಿಗೇನು ಕೊರತೆಯಿಲ್ಲ, ಹಿರಿಯರ ಮಾರ್ಗದರ್ಶನದಲ್ಲಿ ನಾವೇಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಮಾತ್ರ ಬದುಕಿಗೆ ಸಾರ್ಥಕತೆ, ಆತ್ಮತೃಪ್ತಿ ಸಿಗುತ್ತದೆ ಎಂದು ಸಲಹೆ ನೀಡಿದರು.
ಬರುವ ಫೆ.2 ರಿಂದ 6ನೇ ತಾರೀಕಿನವರೆಗೆ ಜಿಲ್ಲಾ ಕೇಂದ್ರ ನಗರದ ಲಕ್ಷ್ಮೀ ದೇವಸ್ಥಾನದಲ್ಲಿ ವಿಜಯಪೂರ, ಗದಗನ ವಿವೇಕಾನಂದನ ರಾಮಕೃಷ್ಣ ಆಶ್ರಮದ ಪರಮ ಪೂಜ್ಯ ನಿರ್ಭಯಾನಂದ ಸರಸ್ವತಿ ಸ್ವಾಮಿಜಿ ಅವರ ಉಪನ್ಯಾಸ ವಿಶೇಷ ಮಾಲೆ ಕಾರ್ಯಕ್ರಮಗಳು ಜರುಗುವವು.
ನಂತರ ಫೆ.18ರಂದು ನಗರದ ಹೊರ ವಲಯದಲ್ಲಿರುವ ಆರ್ಯಭಟ್ಟ ಅಂತರಾಷ್ಟ್ರೀಯ ಶಾಲೆ ಸಭಾಂಗಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಶಾಲಾ ಕಾಲೇಜುಗಳ ಮುಖ್ಯಸ್ಥರು-ಮುಖ್ಯ ಗುರುಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ವಿಕಾಸ ಅಕಾಡೆಮಿಯ ಹಿರಿಯರಾದ ಶಾಂತರಡ್ಡಿ ವನಿಕೇರಿ, ನರಸರಡ್ಡಿ ಗುರುಮಿಠಕಲ್, ಸಿದ್ದಣಗೌಡ ಕಾಡಂನೋರ, ಹೆಚ್.ಸಿ ಪಾಟೀಲ್, ಬಸವರಾಜ ಸ್ವಾಮಿ ಸ್ಥಾವರಮಠ ಹುಣಸಗಿ, ಭೀಮಣ್ಣ ವಡವಟ್, ಶೃತಿ ಕಂದಕೂರ, ನಾರಾಯಣಚಾರ್ಯ ಸಗರ, ಅಮರಯ್ಯಸ್ವಾಮಿ ಜಾಲಿಬೆಂಚಿ, ಡಾ. ಸಿದ್ದರಾಜರಡ್ಡಿ ಪಾಟೀಲ್, ಡಾ. ಜ್ಯೋತಿಲತಾ ತಡಿಬಿಡಿಮಠ, ಸೋಮನಾಥರಡ್ಡಿ ಬೋರಡ್ಡಿ, ಭೀಮರಾಯ ರಾಯಪ್ಪನೋರ, ದೇವಂದ್ರರಡ್ಡಿ ಕುಮನೂರ, ಪ್ರಶಾಂತ ಯಲ್ಹೇರಿ, ಆನಂದ ಬೆಳಗೇರಾ, ಭೀಮರಡ್ಡಿ ಕೌಳೂರ ಹತ್ತಿಕುಣಿ, ವಿಶ್ವನಾಥರಡ್ಡಿ ಚಟ್ನಳಿ,್ಳ ವೆಂಕೋಬಾ ಗುಜ್ಜಾ ಬಳಿಚಕ್ರ, ಚಂದಪ್ಪ ನಾಯಕ್, ಶರಣಪ್ಪಗೌಡ ರಾಮಸಮುದ್ರ, ಬುಗ್ಗಯ್ಯ ಕಲಾಲ್, ಅಂಬಣ್ಣ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.