ಕಲಬುರಗಿ: ನಗರದ ಪ್ರತಿಷ್ಠಿತ ಮನ್ನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಚಿಕಿತ್ಸೆಯ ಜೊತೆಗೆ ಸಮಾಜಿಕ ಕ್ಷೇತ್ರದಲ್ಲೂ ಸದಾ ಮುಂದೆ ಇರುವ ಕಾರಣ ಜಿಲ್ಲೆಯ ಜನರ ಭರವಸೆಗೆ ಪಾತ್ರರಾಗಿದಾರೆ.
ಸಮಾಜಿಕ ಕ್ಷೇತ್ರದಲ್ಲಿ ಸದಾ ಹೊಸತನದೊಂದಿಗೆ ಕೆಲಸ ಮಾಡುತ್ತಿರುವ ಆಸ್ಪತ್ರೆಯ ಮುಖ್ಯಸ್ಥ ಡಾ.ಫಾರುಕ್ ಅಹ್ಮದ ಮನ್ನೂರ ಅವರು ಹೊಸ ಪ್ರಯತ್ನ ದೊಂದಿಗೆ ಕಲ್ಯಾಣ ಕರ್ನಾಟಕದ ಭಾಗದ ಜನರಿಗೆ ಆರೋಗ್ಯ, ಕ್ಷೇಮ, ಯೋಗ, ಸದೃಢತೆಯ ಬಗ್ಗೆ ಜಾಗೃತಿಗಾಗಿ “ದ ವೆಲ್ ನೇಸ್ ರೆವೂಲೇಷನ” ಎಂಬ ಆರೋಗ್ಯ ಕುರಿತು ಕಲ್ಯಾಣ ಕರ್ನಾಟಕ ಭಾಗದ ಪ್ರಪ್ರಥಮ ಮ್ಯಾಗಝೀನ್ ಬಿಡುಗಡೆ ಮಾಡಲಿದ್ದಾರೆ.
ಜ.24 ರಂದು ಇಂದು ಸಂಜೆ 5 ಗಂಟೆಗೆ ಕಲಬುರಗಿ ನಗರದ ರಿಂಗ್ ರಸ್ತೆಯ ಮನ್ನೂರ ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲೆಯ ಶಾಸಕರು ಸೇರಿದಂತೆ ಗಣ್ಯರು ಪಾಲ್ಗೊಳಲಿದ್ದಾರೆ ಎಂದು ಮನ್ನೂರ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರುಕ್ ಅಹ್ಮದ ಮನ್ನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಜನರಿಗೆ ಆರೋಗ್ಯದ ಕುತಿತು ಜಾಗೃತಿ ಮೂಡಿಸಲು ನಾವು ಕಳೆದ 3 ವರ್ಷದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ, ಅಪಘಾತದಗಳು ಸೇರಿದಂತೆ ಅನೇಕ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಿಕೊಂಡು ಬಂದಿದೆವೆ. ಜೊತೆಗೆ ಜನರಿಗೆ ಇನ್ನೂ ಜಾಗೃತಿಗಾಗಿ ಆರೋಗ್ಯ ,ಕ್ಷೇಮ,ಯೋಗ, ಸದೃಢತೆಯ ಜಾಗೃತಿಯ ಕುರಿತು ‘ದ ವೆಲ್ ನೇಸ್ ರೆವೂಲೇಷನ ‘ ಎಂಬ ಆರೋಗ್ಯ ಮತ್ತು ಕ್ಷೇಮದ ಕುರಿತು ಕಲ್ಯಾಣ ಕರ್ನಾಟಕ ಭಾಗದ ಪ್ರಪ್ರಥಮ ಮ್ಯಾಗಝೀನ್ ಲೋಕಾರ್ಪಣೆ ಮಾಡುತ್ತಿದು, ಈ ಮ್ಯಾಗಝೀನ್ ಜನರಿಗೆ ಉಚಿತವಾಗಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.