ಶಹಾಬಾದ: ಕಲಬುರಗಿ ಜಿಲ್ಲೆಯ ಕೊಟನೂರ್ ಡಿ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಅವಮಾನ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಿ, ಕಠಿಣ ಶಿಕ್ಷಗೆ ಒಳಪಡಿಸಬೇಕೆಂದು ಆಗ್ರಹಿಸಿ ಮಂಗಳವಾರ ದಸಂಸ(ಪ್ರೋ.ಕೃಷ್ಣಪ್ಪ) ಮುಖಂಡರು ನಗರದ ವಾಡಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಇದೇ ವೇಳೆಕೆಲ ಕಾಲ ರಸ್ತೆ ತಡೆ ನಡೆಸಿ ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಂದು ಒತ್ತಾಯಿಸಿದರು.
ಮುಖಂಡರಾದ ಬಸವರಾಜ ಮಯೂರ ಹಾಗೂ ಭರತ್ ಧನ್ನಾ ಮಾತನಾಡಿ, ಕಲಬುರಗಿ; ಕೋಟನೂರ್ (ಡಿ) ಗ್ರಾಮದಲ್ಲಿನ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಪತ್ಥಳಿಗೆ ಕಿಡಿಗೇಡಿಗಳು ಅಪಮಾನ ಮಾಡಿರುವ ಕೃತ್ಯವನ್ನು ಖಂಡಿಸಿ ತಕ್ಷಣ ಕೃತ್ಯವೇಸಗಿದ ಆರೋಪಿಗಳ ಪತ್ತೆ ಮಾಡಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು.
ಇಡೀ ದೇಶಕ್ಕೆ ಸಮಾನತೆಯ ಸಂವಿಧಾನ ನೀಡಿರುವ ಬಾಬಾ ಸಾಹೇಬರಿಗೆ ಭಾರತೀಯರ ಮೇಲೆ ಮಹದುಪಕಾರ ಮಾಡಿದ್ದಾರೆ. ಯಾರೋ ಕಿಡಿಗೇಡಿಗಳು, ಮತಿಹೀನರು ರಾತ್ರಿ ಹೊತ್ತಲ್ಲಿ ಹೋಗಿ ಅಂಬೇಡ್ಕರ್ ಪುತ್ಥಳಿಯನ್ನು ಅಪಮಾನಿಸಿ ಇಡೀ ದೇಶಕ್ಕೆ ಮತ್ತು ಸಂವಿಧಾನಕ್ಕೆ ದ್ರೋಹ ಎಸಗಿದ್ದಾರೆ.ಇಂತ ಕೃತ್ಯಗಳು ನಿಲ್ಲಬೇಕೆಂದು ಗ್ರೇಡ್-2 ತಹಸೀಲ್ದಾರ ಗುರುರಾಜ ಸಂಗಾವಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಸಂಸದ ರಾಹುಲ ಚಲುವಾದಿ,ಶ್ರೀಧರ್ ಕೊಲ್ಲೂರ್,ಸುನೀಲ ದೊಡ್ಡಮನಿ, ಅಶೋಕ ಮೊಸಲಗಿ, ಸತೀಶ ಕೋಬಾಳಕರ್,ಮರೆಪ್ಪ ತೆಗನೂರ್,ಪುನೀತ್ ಹಳ್ಳಿ, ವಸಂತ ಕಾಂಬಳೆ,ಶಿವಶಾಲಕುಮಾರ ಪಟ್ಟಣಕರ್,ಮಹೇಶ ಕಾಂಬಳೆ, ಕರವೇ ತಾಲೂಕಾಧ್ಕ್ಷ ಯಲ್ಲಾಲಿಂಗ ಹೈಯ್ಯಳಕರ್ ಬೆಂಬಲ ವ್ಯಕ್ತಪಡಿಸಿ, ಪಾಲ್ಗೊಂಡಿದ್ದರು.