ಕಲಬುರಗಿ: ಸಮಾಜಕ್ಕೆ ದಿಕ್ಕು ತೋರಿಸುವರು ಮಹಾತ್ಮರಾಗುತ್ತಾರೆ. ಇಂತಹ ಮಹಾತ್ಮರಲ್ಲಿ ಒಬ್ಬರಾದ ಲಿಂ.ದೊಡ್ಡಪ್ಪ ಅಪ್ಪಾರವರು ಈ ಭಾಗದ ಯುಗಪುರುಷರಾಗಿದ್ದಾರೆ ಎಂದು ವಿವಿ ಕುಲಪತಿ ಡಾ. ನಿರಂಜನ್ ನಿಷ್ಠಿ ಮಾತನಾಡಿದರು.
ನಗರದ ಶರಣಬಸವ ವಿಶ್ವವಿದ್ಯಾಲಯದ ಅನುಭವ ಮಂಟಪ ಸಭಾಮಂಟಪ್ಪದಲ್ಲಿ ಶನಿವಾರ ಆಯೋಜಿಸಿದ್ದ ಪರಮ ಪೂಜ್ಯ ಲಿಂ.ದೊಡ್ಡಪ್ಪ ಅಪ್ಪಾ ಅವರ ೩೬ನೇ ಪುಣ್ಯಸ್ಮರಣೋತ್ಸವದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೊಡ್ಡ ವ್ಯಕ್ತಿಗಳು ಕೌಟುಂಬಿಕ ನೆಮ್ಮದಿಯನ್ನು ಅನುಭವಿಸುವುದಿಲ್ಲ. ಅವರ ಜೀವನ ತ್ಯಾಗಮಯಿಯಾಗಿರುತ್ತದೆ. ಹೀಗಾಗಿ ಅತೀ ಶಿಸ್ತನಿಂದ ಕೂಡಿದ ಬದುಕು ಅವರದಾಗಿರುವುದರಿಂದಲೆ ಈ ಸಮಾಜ ಅವರನ್ನು ಮಹಾತ್ಮರೆಂದು ಗುರುತಿಸುತ್ತದೆ ಎಂದು ಹೇಳಿದರು.
ವಿವಿ ಸಮಕುಲಪತಿ ಡಾ.ವಿ.ಡಿ.ಮೈತ್ರಿ ಮಾತನಾಡಿ, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಬ್ರಿಟಿಷರ್ ಮತ್ತು ನಿಜಾಮರ್ ಆಡಳಿತದ ನಡುವೆಯು ಪೂಜ್ಯ ದೊಡ್ಡಪ್ಪ ಅಪ್ಪಾರವರು ಶೈಕ್ಷಣಿಕ ಸಾಧನೆ ಮಾಡಿರುವುದು ಅನನ್ಯವಾಗಿದೆ. ಅದರಲ್ಲೂ ದೊಡ್ಡಪ್ಪ ಅಪ್ಪಾಜೀಯವರು ಆ ಸಂದರ್ಭದಲ್ಲಿ ಸೋಮವಾರ ರಜೆ ದಿನವಾಗಿ ಪರಿಪಾಲಿಸಿರುವುದು ಇನ್ನೂ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರೀ, ಡೀನ್ ಡಾ.ಲಕ್ಷ್ಮಿ ಮಾಕಾ ಮತ್ತು ಡಾ. ಬಸವರಾಜ ಮಠಪತಿ, ಡಾ. ಶಿವದತ್ ಹೊನ್ನಳ್ಳಿ, ಡಾ. ಎಂ.ಎಸ್.ಪಾಟೀಲ, ಡಾ.ಎಲಿಯಾನ್ ಗೀತಮಾಲಾ ಇತರರು ಇದ್ದರು.
ಡಾ. ಚಿದಾನಂದ ಚಿಕ್ಕಮಠ ನಿರೂಪಿಸಿದರು. ಪ್ರೊ. ಪವನಕುಮಾರ ಕಲಬುರಗಿ ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರೊ. ಅಶ್ವಿನಿ ರೆಡ್ಡಿ ವಂದಿಸಿದರು. ಕು. ರಾಜೇಶ್ವರಿ ಪ್ರಾರ್ಥನೆ ಗೀತೆ ಹಾಡಿದರು. ಪುಣ್ಯಸ್ಮರಣೋತ್ಸವ ನಿಮಿತ್ತ ಏರ್ಪಡಿಸಿದ್ದ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ದಸ್ತಗೀರ ನದಾಫ್, ಸಹನಾ ಶಿವಪ್ರಕಾಶ, ರಾಜೇಶ್ವರಿ, ನಿಖೀತಾ, ಭೀಮನರಾಯಗೌಡ ಬಿರಾದಾರ, ಪೂಜಾ.ಎಸ್.ನಿಂಬರ್ಗಾ, ಪೂಜಾ ಚವ್ಹಾಣ, ಚೈತ್ರಾ.ವಿ.ಕುಲಕರ್ಣಿ,ಶರೀನ್ ಫಾತೀಮಾ ಮುಂತಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳು ದೊಡ್ಡಪ್ಪ ಅಪ್ಪಾರವರ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.