ಶಹಾಬಾದ: ಪಟ್ಟಣದ ಆಹಾರ ಇಲಾಖೆಯಲ್ಲಿ ಪಡರಿತರ ಧಾನ್ಯ ಕಳ್ಳ ಸಾಗಾಣಿಕೆಗೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶನಿವಾರ ಆಹಾರ ಇಲಾಖೆಯ ಜಂಟಿ ನಿರ್ದೇಶಕರಿಗೆ ಕಲ್ಯಾಣ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಶಹಾಬಾದ ಪಟ್ಟಣದಲ್ಲಿ 11ಟನ್ ಪಡಿತರ ಆಹಾರವನ್ನು ಅಕ್ರಮವಾಗಿ ಸಾಗಿಸುವಾಗ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಸ್ಥಳೀಯ ಪಡಿತರ ಡೀಲರ್ ಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ, ಬಡವರಿಗೆ ಸಿಗಬೇಕಾದ ಪಡಿತರ ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಈ ವೇಳೆ ಆಗ್ರಹಿಸಲಾಯಿತು.
ಅಕ್ರಮವಾಗಿ ಪಡಿತರ ಸಾಗಿಸಲು ಕಾರಣರಾದವರ ಮೇಲೆ ಪ್ರಕರಣ ದಾಖಲಿಸದಿದ್ದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ಗುರಣ್ಣ ಐನಾಪೂರ, ಜಿ ಶಿವಶಂಕರ್ ಭೋವಿ, ರಾಜು ಡೋಣ್ಣೆಗೇರಿˌ ಶಿವಕುಮಾರ್ ದೊರೆˌರವಿಚಂದ್ರ ಗುತ್ತೇದಾರˌ ಮಲ್ಲಿಕಾರ್ಜುನ ಕೆರಮಗಿˌ ಶ್ರೀಕುಮಾರ ಕಟ್ಟಿಮನಿˌ ಕ್ರಿಷ್ಣಾˌ ಹರ್ಷˌ ನಾಗೇಶ ಜೆಗದೇವ ಮುಂತಾದವರು ಭಾಗವಹಿಸಿದ್ದರು.