“ಕಲ್ಯಾಣ ಕರ್ನಾಟಕ” ಹೆಸರು ಬದಲಾವಣೆಯೊಂದಿಗೆ ಈ ಭಾಗದ ಅಭಿವೃದ್ಧಿಗೂ ಗಮನಹರಿಸುವುದು ಅಗತ್ಯ: ನಾಗಲಿಂಗಯ್ಯ ಮಠಪತಿ

1
55

ಕಲಬುರಗಿ: ರಾಜ್ಯ ಸರ್ಕಾರ ಹೈದ್ರಾಬಾದ ಕರ್ನಾಟಕ ಪ್ರದೇಶದ ಹೆಸರನ್ನು ಬದಲಾಯಿಸಿ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ. ರಾಜ್ಯ ಸರ್ಕಾರ ಹೆಸರು ಬದಲಾವಣೆಯೊಂದಿಗೆ ಈ ಭಾಗದ ಅಭಿವೃದ್ಧಿಯಡೆಗೂ ಗಮನಹರಿಸುವುದು ಅಗತ್ಯವಾಗಿದೆ ಎಂದು ಜನಪರ ಹೋರಾಟಗಾರ ನಾಗಲಿಂಗಯ್ಯ ಮಠಪತಿ ಒತ್ತಾಯಿಸಿದ್ದಾರೆ.

ಕಲ್ಯಾಣವೆಂದರೆ ಸುಖಕರ, ಮಂಗಳಕರ, ಮಂಗಲಕರ ಎಂದು ಸೂಚಿಸುತ್ತದೆ.  ಅದೇ ತರನಾಗಿ ಇಲ್ಲಿಯ ಪ್ರತಿಯೊಬ್ಬರೂ ಸುಖಕರವಾಗಿ ಬದುಕಲು ಮಂಗಲಕರವಾಗಿ ಜೀವನ ನಡೆಸಲು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸೇರಿದಂತೆ ಮೂಲ ಸೌಕರ್ಯದೆಡೆಗೆ ಗಮನಹರಿಸುವುದು ತುರ್ತಾಗಿ ನಡೆಯಬೇಕಾಗಿದೆ.  ಕೇವಲ ಹೆಸರು ಬದಲಾಯಿಸಿದರೆ ಅಷ್ಟೆ ಸಾಲದು, ಇಲ್ಲಿಯ ಜನರ ಹಣೆಬರಹ ಸಹ ಬದಲಾಯಿಸುವುದು ಸರ್ಕಾರದ ಬಹುದೊಡ್ಡ ಜವಾಬ್ದಾರಿಯಾಗಿದ್ದು, ಈ ನಿಟ್ಟಿನತ್ತ ರಾಜ್ಯ ಸರ್ಕಾರ ಹೆಚ್ಚು ಒತ್ತು ಕೊಡುವಂತೆ ವಿನಂತಿಸಿಕೊಳ್ಳುತ್ತೇನೆ.

Contact Your\'s Advertisement; 9902492681

1 ಕಾಮೆಂಟ್

  1. ವಿಕಾಸ ಅಕಾಡೆಮಿ ಕಲಬುರ್ಗಿಯ ಕನಸು ನೆನಸಾಯಿತು
    ಕನಕಪಾ ದಂಡಗುಲಕರ ಶಾಹಬಾದ್ ತಾಲೂಕು ವಿಕಾಸ ಅಕಾಡೆಮಿ ಶಾಹಬಾದ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here