ಸುರಪುರ; ತಾಲೂಕು ವಿಶೇಷ ಚೇತನ ಮಕ್ಕಳ ಕ್ರೀಡಾಕೂಟ

0
11

ಸುರಪುರ: ನಗರದ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ 2023-24 ನೇ ಸಾಲಿನ ವಿಶೇಷ ಚೇತನ ಮಕ್ಕಳಿಗಾಗಿ ಕ್ರೀಡಾಕೂಟ ಹಾಗೂ ಕ್ಷೇತ್ರ ಭೇಟಿ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜಶೇಖರ ದೇಸಾಯಿ ಮಾತನಾಡಿ,ವಿಶೇಷ ಚೇತನ ಮಕ್ಕಳ ಬಗ್ಗೆ ಕೇವಲ ಅನುಕಂಪ ಪಡದೆ ಅವರಿಗೆ ಅವಕಾಶ ನೀಡುವುದು ಮುಖ್ಯವಾಗಿದೆ,ಸಾಮಾನ್ಯ ಮಕ್ಕಳಂತೆ ವಿಕಲಚೇತನ ಮಕ್ಕಳಿಗೆ ಕೂಡ ಅವಕಾಶ ನೀಡಿದರೆ ಅವರುಕೂಡ ಸಬಲರಾಗಲು ಸಾಧ್ಯ ಎಂದರು.ಇದೇ ಸಂದರ್ಭದಲ್ಲಿ ಶಿಕ್ಷಕರಾದ ಮಹಾದೇವಪ್ಪ ಗುತ್ತೇದಾರ,ಬಿ.ಐ.ಆರ್.ಟಿ ಓಂ ಪ್ರಕಾಶ್ ಮಾತನಾಡಿದರು.

Contact Your\'s Advertisement; 9902492681

ವಿವಿಧ ಶಾಲೆಗಳಿಂದ ವಿಕಲ ಚೇತನ ಮಕ್ಕಳು ಹಾಗೂ ಪಾಲಕ ಪೋಷಕರು ಮತ್ತು ಶಿಕ್ಷಕರು ಭಾಗವಹಿಸಿದ್ದರು 215 ಮಕ್ಕಳು 72 ಪಾಲಕರು 18 ಜನ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಕ್ಕಳಿಗಾಗಿ ವಿಶೇಷ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿತ್ತು ಹಾಗೂ ಕ್ವಿಜ್ ಫಜಲ್ ಗಣಿತಕ್ಕೆ ಸಂಬಂಧಿಸಿದ ಆಟಗಳು ಚಿತ್ರಕಲಾ ಸ್ಪರ್ಧೆ ವಿಶೇಷ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪ್ರತಿಯೊಬ್ಬ ಕ್ಲಸ್ಟರ್ನ ಸಂಪನ್ಮೂಲ ವ್ಯಕ್ತಿಗಳ ನೇತೃತ್ವದಲ್ಲಿ ಪ್ರತಿಯೊಂದು ಆಟಕ್ಕೂ ಉಪಹಾರಕ್ಕು ತಂಡಗಳನ್ನ ರಚಿಸಿ ಈ ಕಾರ್ಯಕ್ರಮದಲ್ಲಿ ದೊಡ್ಡ ಮಲ್ಲಿಕಾರ್ಜುನ್ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು ಹಾಗೂ ಅಶೋಕ್ ಗುರುಗಳು ಫ್ರಿಡ್ಜ್ ಮತ್ತು ಫಜಲ್ ಆಟಗಳನ್ನು ಆಡಿಸುವ ತಂಡವನ್ನು ನೋಡಿಕೊಂಡರು.

ಕ್ರೀಡಾಕೂಟದ ತಂಡದಲ್ಲಿ ಶಿವಕುಮಾರ್ ಕಮತಗಿ ನಿಂಗಣ್ಣ ದೇವರಗೋನಲ ಹಾಗೂ ರಾಮಣ್ಣ ಗುಂಜಾಳ್ ಮತ್ತು ಪ್ರಶಾಂತ ಸಮೂಹ ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಿಕ್ಷಕರಾದ ಸಿದ್ದನಗೌಡ ಬಾಬು ಜೋಗಪ್ಪ ಮತ್ತು ಮಾನಮ್ಮ ದೈಹಿಕ ಶಿಕ್ಷಕರು ಮಕ್ಕಳಿಗೆ ಆಟದ ಸಾಮಗ್ರಿಗಳ ವ್ಯವಸ್ಥೆಯನ್ನು ಮಾಡಿಕೊಂಡು ಮಕ್ಕಳಿಗೆ ಆಟವನ್ನು ಆಡಿಸುವಲ್ಲಿ ಸಹಕಾರವನ್ನು ನೀಡಿದರು.

ಮಾರ್ಗದರ್ಶಕರು ಈ ಕಾರ್ಯಕ್ರಮದಲ್ಲಿ ಕೈಜೋಡಿಸಿದ್ದರು. ಎಪಿಡಿ ಸಂಸ್ಥೆಯ ಸಿಬ್ಬಂದಿಯವರು ಪಾಲ್ಗೊಂಡು ವಿಶೇಷ ಚೇತನ ಮಕ್ಕಳಿಗೆ ಮಾರ್ಗದರ್ಶನವನ್ನು ಮಾಡಿದರು . ಅಜೀಮ್ ಪ್ರೇಮ್ ಜಿ ಫೌಂಡೇಶನ್ ಕೃಷ್ಣ ಬಿ, ಪರಮಣ್ಣ ತೆಳಗೇರಿ ಇದ್ದರು. ಮಾಳಪ್ಪ ಹುಲ್ಲಿಕೇರಿ ರನಿರೂಪಿಸಿದರು,ಶಿವಕುಮಾರ ಕಮತಗಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here