-
ಕ್ರಾಪಲೋನಗಾಗಿ ರೈತರ ಪರದಾಟ-ವಾರದೊಳಗಡೆ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ
ಆಳಂದ: ನಿಂಬರ್ಗಾದಲ್ಲಿನÀ ಎಸ್‍ಬಿಐ ಬ್ಯಾಂಕನಲ್ಲಿ ಸಿಬ್ಬಂದಿ ಕೊರತೆಯಿಂದ ಗ್ರಾಹಕರು, ರೈತರು ಹಾಗೂ ಕೂಲಿಕಾರ್ಮಿಕರು ಸಮಸ್ಯೆ ಅನುಭವಿಸುವಂತಾಗಿದೆ.
25 ಗ್ರಾಮದ ಗ್ರಾಹಕರು ನಿತ್ಯ ಅಲೆದಾಡುವಂತಾಗಿದೆ. ಬ್ಯಾಂಕ್‍ನಲ್ಲಿ ಬೆರಳೆಣಿಕೆಯಷ್ಟು ಸಿಬ್ಬಂದಿ ಇದ್ದು, ಕೆಲಸಗಳು ಆಗುತ್ತಿಲ್ಲ. ಮೊದಲೇ ಬರಗಾಲ ಇದ್ದು ರೈತರ ಪರಿಸ್ಥಿತಿಯಂತು ಹೇಳುವಂತಿಲ್ಲ. 05-07 ತಿಂಗಳಿಂದ ಲೋನಗಾಗಿ ಅರ್ಜಿ ಸಲ್ಲಿಸಿದ್ದರು. ಪ್ರಯೋಜನವಾಗುತ್ತಿಲ್ಲ, ಅನೇಕ ರೈತರ ಲೋನಗಳು ಆಗುತ್ತಿಲ್ಲ. ಇದರಿಂದ ರೈತರು ನಿತ್ಯ ಬ್ಯಾಂಕಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಲೋನಗಾಗಿ ರೈತರು ನಿತ್ಯ ಬ್ಯಾಂಕಗೆ ಅಲೆದಾಡುವಂತಾಗಿದೆ, ಮೇಲಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಬೇಗ ಸಿಬ್ಬಂದಿ ನಿಯೋಜಿಸಬೇಕು, ರೈತರ ಕೆಲಸಗಳು ತ್ವರಿತ ಗತಿಯಲ್ಲಿ ಆಗುವಂತೆ ಕ್ರಮ ವಹಿಸಬೇಕು ಇಲ್ಲದಿದ್ದರೇ ಹೋರಾಟ ಅನಿವಾರ್ಯ-ಬಸವರಾಜ ಯಳಸಂಗಿ ಅಧ್ಯಕ್ಷರು ಕ.ರ.ವೇ. ನಿಂಬರ್ಗಾ ವಲಯ
ಹಳೆಯ ಸಾಲ ತಿರಿಸಿ ಹೊಸ ಸಾಲಕ್ಕೆ ಅರ್ಜಿ ಸಲ್ಲಿಸಿ ನಾಲ್ಕು ತಿಂಗಳಾಯ್ತು ಲೋನ ಆಗ್ತಾಯಿಲ್ಲ, ಆದಷ್ಟು ಬೇಗ ಸಾಲ ಮಂಜೂರು ಆದ್ರೆ ಭಾಳ ಅನುಕೂಲ ಆಗತೈತಿ. –ಶಿವರಾಯ ನಿಂಬರ್ಗಾ ರೈತ