ಕಲಬುರಗಿ: ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಮಂಡಿಸಿರುವ ಬಜೆಟ್ ಬಂಡವಾಳ ಶಾಹಿಗಳ ಅನುಕೂಲ ಮಾಡಿಡಿರುವ ಬಜೆಟ್ ಇದಾಗಿದೆ ಎಂದು ಕಲಬುರಗಿ ಉತ್ತರ ಮತಕ್ಷೇತ್ರದ ಯುವ ನಾಯಕ ದಸ್ತೇಗಿರ್ ಅಹ್ಮದ್ ಟೀಕಿಸಿದ್ದಾರೆ.
ಕೇಂದ್ರದ ಬಿಜೆಪಿ ಸರಕಾರ ಜನ ಸಾಮನ್ಯರಿಗೆ ಕಡೆಗಣಿಸಿ ಬಜೆಟ್ ಮಂಡಿಸಿದ್ದು, ಶೇ. 30ರಷ್ಟಿದ್ದ ತೆರಿಗೆಯನ್ನು ಶೇ. 22ಕ್ಕೆ ಇಳಿಸುವ ಮೂಲಕ ಶ್ರೀಮಂತ ಉದ್ಯಮಗಳಿಗೆ ಅನುಕೂಲ ಮಾಡಿಕೊಡುವ ಬಜೆಟ್ ಇದ್ದಾಗಿದೆ. ಕರ್ನಾಟಕದ ಜೆಡಿಎಸ್ ಮತ್ತು ಬಿಜೆಪಿ ಮಿತ್ರ ಪಕ್ಷಗಳ 27 ಸಂಸದರನ್ನು ನೀಡಿರುವ ರಾಜ್ಯಕ್ಕೆ ಬಜೆಟ್ ನಲ್ಲಿ ಸಿಕ್ಕಿರುವುದು ಶೂನ್ಯ. ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ನೀಡಬೇಕಾದ ತೆರಿಗೆ ಹಣ ನೀಡುತ್ತಿಲ್ಲ. ಬಜೆಟ್ ನಲ್ಲಿ ಮಹಾದ್ರೋಹ ಮಾಡಲಾಗಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕದ ಭಾಗದ ಜನರೊಂದಿಗೆ ಬಿಜೆಪಿ ಸರಕಾರ ಮಲತಾಯಿ ಧೋರಣೆ ನಿರಂತರ ಮುಂದು ವರೆಸಿದ್ದು, ನೀರಾವರಿ ಯೋಜನೆಗಳಿಗೆ ಹಣವಿಲ್ಲ, ಅಭಿವೃದ್ಧಿ ಕಾರ್ಯಕ್ರಮಗಳ ಸುಳಿವಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.