ಕಲಬುರಗಿ: ಗ್ರಾಮೀಣ ಭಾಗದ ಮಹಿಳಾ ಸ್ವಸಹಾಯ ಗುಂಪಿನ ಅದ್ಯಕ್ಷರಾದ ನನಗೆ ನವದೆಹಲಿ ನೋಡುವ ಭಾಗ್ಯ ದೋರೆತಿದ್ದು ತುಂಬಾ ಖುಷಿ ತಂದಿದೆ, ನಾನು ಅತಿ ಹತ್ತಿರದಿಂದ ಕೆಂಪು ಕೋಟೆಯಲ್ಲಿ ಮಾನ್ಯ ಪ್ರಧಾನ ಮಂತ್ರಿಯವರು ಧ್ವಜಾರೋಹಣ ಮಾಡಿರುವುದನ್ನು ನೋಡಿದ್ದೆನೆ. ಇಂತಹ ಒಂದು ದೊಡ್ಡ ಕಾರ್ಯಕ್ರಮ ನೋಡುತ್ತೆನೆಂದು ಭಾವಿಸಿರಲಿಲ್ಲ. ಈ ಕಾರ್ಯಕ್ರಮದಲ್ಲಿ ನಾನು ಮಹಿಳಾ ಸ್ವಸಹಾಯ ಗುಂಪಿನಲ್ಲಿರುವುದಿಂದ ಇಂತಹ ಅವಕಾಶ ಸಿಕ್ಕಿದೆ. ನಮ್ಮ ಮಹಿಳಾ ಸಂಘದ ಇತರೆ ಸದಸ್ಯರು ಸಹ ಈ ಒಂದು ಅವಕಾಶ ನೀಡಿರುವುದು ತುಂಬಾ ಖುಷಿ ತಂದಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ವವ ಪರೇಡ್‍ನಲ್ಲಿ ಅಥಿತಿಗಳಾಗಿ ಭಾಗವಹಿಸಿದ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಗಂಗಾಂಬಿಕಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ಬೋಧನ ಕಾರ್ಯಕಾರಿ ಸಮಿತಿಯ ಸದಸ್ಯರಾದ ಲಲಿತಾಬಾಯಿ ಆನಂದರಾಯ ಇವರ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಕಮಲಾಪೂರ ತಾಲ್ಲೂಕಿನ ಮಹಾಗಾಂವ ಅಕ್ಕಮಹಾದೇವಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಕಾರ್ಯಕಾರಿ ಸಮಿತಿಯ ಸದಸ್ಯರಾದ sಸಂಗೀತಾ ಮಲ್ಲಿಕಾರ್ಜುನ ಇವರು ನಾನು ಒಕ್ಕೂಟದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿರುವುದರಿಂದ ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಾಗ್ಯ ದೋರೆತಿರುವುದು ನನಗೆ ತುಂಬಾ ಸಂತೋಷ. ಸಂಜೀವಿನಿ-ಎನ್‍ಆರ್‍ಎಲ್‍ಎಂ ಯೋಜನೆಯ ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕರಾದ ಎಂ.ಕೆ. ಅಲಿ ಸರ್ ಹಾಗೂ ಲೂಸಿ ಮೇಡಂರವರು ನಮ್ಮನ್ನು ಸುರಕ್ಷಿತವಾಗಿ ಕೆರದುಕೊಂಡು ಬಂದಿದ್ದಾರೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಪಿಎಲ್‍ಎಫ್‍ನ ಕಾರ್ಯಕಾರಿ ಸಮಿತಿಯ ಸಮಿತಿಯ ಸದಸ್ಯರಿಗೆ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭಂವಾರಸಿಂಗ್ ಮಿನಾ, ಹಾಗೂ ಯೋಜನಾ ನಿರ್ದೇಶಕರಾದ (ಡಿಆರ್‍ಡಿಎ) ಜಗದೇವ ಭೈರಗೊಂಡರವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಲೋಹಿತ್‍ಕುಮಾರ, ಜಿಲ್ಲಾ ವ್ಯವಸ್ಥಾಪಕರುಗಳಾದ ಅರುಣಕುಮಾರ ಹಾಗೂ ರೇವಪ್ಪ ಯುವ ವೃತ್ತಿಪರರಾದ ನಾಗರಾಜ ಹಾಜರಿದ್ದರು.
ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ಸಂಜೀವಿನಿ-ಎನ್‍ಆರ್‍ಎಲ್‍ಎಂ ಯೋಜನೆಯ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸಬಲಿಕರಣವಾಗಬೇಕು. ಗ್ರಾಮೀಣ ಭಾಗದ ಮಹಿಳೆಯರಿಗೆ ಇದೊಂದು ಸುವರ್ಣಾವಕಾಶ ವಾಗಿದ್ದು ಇದರ ಮೂಲಕ ತಾವು ಸ್ವತಂತ್ರವಾಗಿ ಉದ್ದಿಮೇಗಳನ್ನು ಪ್ರಾರಂಭಮಾಡಿಕೊಂಡು ತಮ್ಮ ಜೀವನ ಸುಧಾರಿಸಿಕೊಳ್ಳಬೇಕು. ನಮ್ಮ ಜಿಲ್ಲೆಯಿಂದ ನವದೆಹಲಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದು, ನಮಗೆ ಸಂತೋಷ ತಂದಿದೆ. ಇನ್ನೂ ಇಂಥಹ ಅವಕಾಶಗಳನ್ನು ನಮ್ಮ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಿಗಲಿ. – ಭಂವಾರ್ ಸಿಂಘ ಮೀನಾ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ಕಲಬುರಗಿ.