ಕಲಬುರಗಿ: ಐ.ಸಿ.ಎ.ಆರ್ ನವದೆಹಲಿ, ಭಾರತೀಯ ಕಬ್ಬು ಸಂಶೋಧನಾ ಕೇಂದ್ರ ಲಕ್ನೊ ಸಂಯುಕ್ತ ಆಶ್ರಯದಲ್ಲಿ ಆಹಾರ ಭದ್ರತೆ ಗಾಗಿ ಸಸ್ಯ ಆರೋಗ್ಯ ರಾಷ್ಟೀಯ ವಿಚಾರ ಸಂಕಿರಣ ಸಮಾರೋಪ ಸಮಾರಂಭದಲ್ಲಿ ರಾಯಚೂರು ಸಸ್ಯ ರೋಗ ಪ್ರಾಧ್ಯಾಪಕ ರು ಹಾಗೂ ಮುಖ್ಯ ವೈಜ್ಞಾನಿಕ ಅಧಿಕಾರಿ ಸಿಎಸ್ಓ ಡಾ. ಅಮರೇಶ ವೈ ಎಸ್ ರವರಿಗೆ ಕೃಷಿ ಶಿಕ್ಷಣ, ಕೃಷಿ ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಗಾಗಿ
ಐಪಿಎಸ್ ಫೆಲೋ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪುರಸ್ಕೃತರು ರಾಯಚೂರು ವಿಶ್ವ ವಿದ್ಯಾಲಯದ ವ್ಯಾಪ್ತಿಯ ಕೃಷಿ ವಿಜ್ಙಾನ ಕೇಂದ್ರ ರಾಯಚೂರು, ಯಾದಗಿರಿ ಯಲ್ಲಿ ಈ ಹಿಂದೆ ಹಿರಿಯ ವಿಜ್ಞಾನಿ ಮುಖ್ಯಸ್ಥ ರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರುವರು.
ಕೃಷಿ ವಿಶ್ವ ವಿದ್ಯಾಲಯದ ಸಸ್ಯ ರೋಗ ವಿಭಾಗ ಮುಖ್ಯಸ್ಥ ರು, ಕೃಷಿ ಕಾಲೇಜು ರಾಯಚೂರು ಸಸ್ಯ ರೋಗ ವಿಭಾಗ ಮುಖ್ಯಸ್ಥರು, ಎಲ್ಲ ಸಸ್ಯ ರೋಗ ತಜ್ಞರು, ಕೃಷಿ ವಿಜ್ಞಾನಿಗಳು, ಕೃಷಿ ಶಿಕ್ಷಕರು, ಕೃಷಿ ವಿದ್ಯಾರ್ಥಿಗಳು, ರಾಯಚೂರು ಕೃಷಿ ವಿಶ್ವ ವಿದ್ಯಾಲಯದ ಸಿಬ್ಬಂದಿ ವರ್ಗ ದವರು ಡಾ. ಅಮರೇಶ ವೈ ಎಸ್ ಗೌರವ ಸದಾನ ಐಪಿಎಸ್ ಪ್ರಶಸ್ತಿ ಗೆ ಅಭಿನಂದನೆ ಶುಭಾಶಯ ತಿಳಿಸಿದ್ದಾರೆ.