ಕಲಬುರಗಿ: ನಗರದ ಪೀರ್ ಬಂಗಾಲಿ ದರ್ಗಾದ ಎದುರಿನ ಖಾಜಾ ಬಂದಾ ನವಾಜ್ ಮೈದಾನದಲ್ಲಿ ದಾವತೆ ಎ ಇಸ್ಲಾಮಿ ಚಾರಿಟೇಬಲ್ ಟ್ರಸ್ಟ್ ಮತ್ತು ಅಹಲೆ ಸುನ್ನಿತ್ ಉಲ್ ಜಮಾತ್ ವತಿಯಿಂದ ಶನಿವಾರ ಮತ್ತು ಭಾನುವಾರ ಆಯೋಜಿಸಿರುವ ಸುನ್ನಿ ವಾರ್ಷಿಕ ಸಮಾವೇಶ ಇಂದು ರಾತ್ರಿ 10 ಗಂಟೆಗೆ ಸಮಾರೋಪಗೊಳ್ಳಲಿದೆ.
ಸಮಾವೇಶದಲ್ಲಿ ಆಗಮಿಸುವ ಪುಸ್ತಕ ಪ್ರೇಮಿಗಳಿಗೆ ಸಮಾವೇಶದ ಮೈದಾನದಲ್ಲಿ 50-60% ರಿಯಾತಿ ದರದಲ್ಲಿ ಉರ್ದು, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ ಪುಸ್ತಕ ಮಳಿಗೆಗಳು ಕೈ ಬಿಸಿ ಕರೆಯುತ್ತಿದ್ದು, ತಿಂಡಿ, ತಿನಿಸುಗಳು, ವಿಶೇಷ ಕಲಾಕೃತಿಗಳಿಂದ ತಯಾರಿಸಿರುವ ಗೃಹ ಬಳಕ್ಕೆ ವಸ್ತುಗಳು. ಇತರ್ (ಸುಗಂಧ) ಮಳಿಗೆಗಳು, ಟೋಪಿಗಳ ಶಾಪ್, 5ರೂ.ನಲ್ಲಿ ಶುದ್ಧ ಕುಡಿಯುವ ನೀರಿನ ಬಾಟಲ್ ಮಾರಾಟ.
ಓದು ವಿದ್ಯಾರ್ಥಿಗಳಿಗೆ ವೃತಿ ಮತ್ತು ತರಬೇತಿಗಳ ಆಯ್ಕೆಗಳ ಕುರಿತು ಎಸ್.ಎಸ್.ಎಲ್.ಸಿ ಮತ್ತು ವಿಯುಸಿ ವಿದ್ಯಾರ್ಥಿಗಳಿಗೆ ಮುಂದೇನು ಎಂಬ ಕೈಪಿಡಿಗಳ ಮಾಹಿತಿ ಕೇಂದ್ರ ಇಲ್ಲಿ ವಿಶೇಷವಾಗಿದೆ.
ಅಲ್ಲದೇ ಸಮಾವೇಶದ ಹತ್ತಿರ ವಿವಿಧ ರೀತಿಯ ಬೀಡಿ ಬಟ್ಟೆಗಳು ಮಾರಾಟ ಸೇರಿದಂತೆ ಕಡಿಮೆ ಬೆಲೆಯಲ್ಲಿ ವಸ್ತುಗಳ ಮಾರಾಟ ಮತ್ತು ವಸ್ತು ಪ್ರದರ್ಶನ ನಡೆಯುತ್ತಿದೆ.
ಜಾತ್ರೆಯ ಕೇಂದ್ರ ಬಿಂದುವಾಗಿರುವ ಸುನ್ನಿ ಸಮಾವೇಶ: ಸಮಾವೇಶದ ಹೊರಗಡೆಯ ಜಾತ್ರೆ ರೀತಿಯಲ್ಲಿ ಹಲವು ಸಣ್ಣ ವ್ಯಾಪಾರಿಗಳು ತನ್ನ ಮಳಿಗೆಗಳು ಇಟಲಾಗಿದೆ. ಅಲ್ಲದೇ ನೂರಾರು ಸಂಖ್ಯೆಯಲ್ಲಿ ಜನರು ಸಮಾವೇಶಕ್ಕೆ ಆಗಮಿಸುವ ಜನರಿಗೆ ಸೂಕ್ತ ಭದ್ರತೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಿಬ್ಬಂದಿಗಳ ನಿಯೋಜನೆ ಮಾಡುವ ಮೂಲಕ ಪೊಲೀಸರ ಸಹಕಾರದೊಂದಿಗೆ ಸಮಾವೇಶದ ಕೊನೆಯ ಹಂತಕ್ಕೆ ತಲುಪಿದೆ.