ಹುಟ್ಟು ಹಬ್ಬದ ನೆಪದಲ್ಲಿ ಸಾಮಾಜಿಕ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ

0
44

ಶಹಾಬಾದ: ಹುಟ್ಟು ಹಬ್ಬದ ನೆಪದಲ್ಲಿ ರಾಜಕುಮಾರ ಕಪನೂರ ಅವರ ಅಭಿಮಾನಿ ಬಳಗದ ಯುವಕರು ರಕ್ತದಾನ ಶಿಬಿರದ ಮೂಲಕ ಹಲವಾರು ಜೀವಗಳನ್ನು ಉಳಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕೆಲಸ ಎಂದು ದಲಿತ ಮುಖಂಡ ಸುರೇಶ ಮೆಂಗನ್ ಹೇಳಿದರು.

ಅವರು ಸೋಮವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ರಾಜಕುಮಾರ ಕಪನೂರ್ ಅವರ ಹುಟ್ಟು ಹಬ್ಬದ ನಿಮಿತ್ತ ರಾಜಕುಮಾರ ಕಪನೂರ ಅವರ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

Contact Your\'s Advertisement; 9902492681

ರಕ್ತದಾನವೇ ಮಹಾದಾನ. ರಕ್ತ ಕೊಡುವುದಕ್ಕೆ ಬಹಳಷ್ಟು ಜನರು ಹೆದರುತ್ತಾರೆ.ಆದರೆ ಭಯಪಡಬೇಕಾದ ಅವಶ್ಯಕತೆಯಿಲ್ಲ. ನಾವು ವರ್ಷದಲ್ಲಿ ಎರಡು ಬಾರಿ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ಹೊಸ ರಕ್ತ ನಮ್ಮ ದೇಹಲ್ಲಿ ಉತ್ಪತ್ತಿಯಾಗುತ್ತದೆ. ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಪ್ರಾಣ ಉಳಿಸುವ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಇಂಥ ಕಾರ್ಯಗಳಿಂದ ಜನರಿಗೆ ಒಂದು ಒಳ್ಳೆಯ ಸಂದೇಶ ಹೋಗುತ್ತದೆ ಎಂದರು.

ಕಾಂಗ್ರೆಸ್ ನಾಯಕ ರಾಜಕುಮಾರ ಕಪನೂರ್ ಮಾತನಾಡಿ, ನನ್ನ ಹುಟ್ಟು ಹಬ್ಬದ ನಿಮಿತ್ತ ನಗರದ ಯುವಕರು ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಿರುವುದಕ್ಕೆ ಅತ್ಯಂತ ಸಂತೋಷವಾಗಿದೆ.ಇಂತಹ ಸಾಮಾಜಿಕ ಕಾರ್ಯದಿಂದ ಇನ್ನೊಬ್ಬರ ಬದುಕಿಗೆ ಆಸರೆಯಾಗುವಂತ ಕೆಲಸ ಮೇಲಿಂದ ಮೇಲೆ ನಡೆಯಬೇಕು ಎಂದರು.

ಸುರೇಶ ಮೆಂಗನ್,ಬಸವರಾಜ ಮಯೂರ, ರಾಜು ನಾಟೇಕಾರ,ಪರಶುರಾಮ ಚಲುವಾದಿ, ಶರಣು ನಾಟೇಕಾರ,ಉದಯಕುಮಾರ ಯನಗುಂಟಿಕರ್, ಶರಣು ಸನಾದಿ,ಶಿವರಾಮ ಇಂಗಳೆ,ಮಹೇಶ ಕಾಂಬಳೆ, ಕರವೇ ಅಧ್ಯಕ್ಷ ಯಲ್ಲಾಲಿಂಗ ಹಯ್ಯಳಕರ್, ರಾಹುಲ್ ಚಲುವಾದಿ,ರಂಜಿತ ಕಾಂಬಳೆ,ಪ್ರವೀಣ ರಾಜನ್, ಹರೀಶ ಕರಣಿಕ್, ರಾಹುಲ್ ಯನಗುಂಟಿಕರ್,ಸ್ನೇಹಲ್ ಜಾಯಿ, ನಿಂಗಣ್ಣ ಕನಗನಹಳ್ಳಿ,ಅಶೋಕ ಮುಸಲಗಿ,ಸುನೀಲ ದೊಡ್ಡಮನಿ, ರಾಜೇಶ ಯನಗುಂಟಿಕರ್,ಪ್ರಕಾಶ ಸಣ್ಣೂರ್,ಪ್ರಕಾಶ.ಎಸ್.ಹೆಚ್.ಕಪನೂರ್, ಶರಣು.ಹೆಚ್.ಕಪನೂರ್,ಹೈದ್ರಬಾದ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ನಂದಕುಮಾರ ನಾಗಬುಜಂಗೆ,ನಾಗೇಂದ್ರ ಟೆಂಗಳಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here