ಭಾರತೀಯ ಶಿಕ್ಷಣ ವ್ಯವಸ್ಥೆ ಸರಿದಾರಿಯಲ್ಲಿ ಸಾಗುತ್ತಿಲ್ಲ

0
17

ಸುರಪುರ: ನಗರದ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ, ಬಸವರಾಜಪ್ಪ ಅಪ್ಪಾ ಪದವಿ ವಾಣಿಜ್ಯ ಮಹಾವಿದ್ಯಾಲಯ, ಶರಣಬಸವ ಪಬ್ಲಿಕ್ ಸ್ಕೂಲ್ ಮತ್ತು ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಸುರಪುರ ಹಾಗೂ ಕೋತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ಹಾಗೂ ವಿಕಾಸ ಆಕಾಡಮಿ ಸುರಪುರ ಸಂಯುಕ್ತಾಶ್ರಯದಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮಿಜೀ ಅಧ್ಯಕ್ಷರು ರಾಮಕೃಷ್ಣ ವಿವೇಕಾನಂದ ಆಶ್ರಮ ಗದಗ ಮತ್ತು ವಿಜಾಪುರ ರವರು ಆಗಮಿಸಿದ್ದರು. ಮತ್ತು ಇನ್ನೋರ್ವ ಅತಿಥಿüಗಳಾಗಿ ಆಗಮಿಸಿರುವ ಶ್ರೀಪ್ರಭುಲಿಂಗ ಮಹಾಸ್ವಾಮಿಗಳು ನಿಷ್ಠಿ ಕಡ್ಲಪ್ಪನವರ ವಿರಕ್ತ ಮಠ ಸುರಪುರ ಹಾಗೂ ಅಧ್ಯಕ್ಷ ಸ್ಥಾನವನ್ನು ದೊಡ್ಡಪ್ಪ ಎಸ್ ನಿಷ್ಠಿ ಜಂಟಿ ಕಾರ್ಯದರ್ಶಿಗಳು ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಸಂಘ ಸಂಸ್ಥೆಗಳು ಸುರಪುರ ರವರು ವಹಿಸಿದ್ದರು.

Contact Your\'s Advertisement; 9902492681

ಕಾರ್ಯಕ್ರಮದ ಕುರಿತು ಶ್ರೀ.ನಿರ್ಭಯಾನಂದ ಸರಸ್ವತಿ ಸ್ವಾಮಿಜೀಯವರು ಮಾತನಾಡಿ, ಇಂದಿನ ದಿನಗಳಲ್ಲಿ ಭಾರತೀಯ ಶಿಕ್ಷಣ ವ್ಯವಸ್ಥೆ ಸರಿ ದಾರಿಯಲ್ಲಿ ಸಾಗುತ್ತಿಲ್ಲ ಪಠ್ಯಪುಸ್ತಕದಲ್ಲಿ ಬೇತಾಳದ ಕಥೆಗಳು ಇದ್ದು ಮಕ್ಕಳ ಮೇಲೆ ನಾನಾ ರೀತಿಯ ಕೆಟ್ಟ ಪರಿಣಾಮ ಬೀರುತ್ತಿದೆ, ಹಾಗೂ ಕೈಗಾರಿಕೆಗಳಿಗೆ ಪ್ರತ್ಯೇಕ ಸ್ಥಳ ನಿಗದಿಮಾಡಿದಂತೆ ಸರಕಾರ ಶಿಕ್ಷಣ ನೀಡಲು ಜನ ಸಂದಣಿಯಿಂದ 20 ಕಿ.ಮೀ ದೂರದಲ್ಲಿ ಪ್ರತಿ ಊರು ನಗರಗಳಿಗೆ ವಿದ್ಯಾ ಕೇಂದ್ರಗಳು ಪ್ರಾರಂಭವಾಗಬೇಕು. ಪ್ರತಿ ಶಾಲೆಗಳಲ್ಲಿ ನೈತಿಕ ಮತ್ತು ಬೌಧ್ದಿಕ ಬೆಳವಣಿಗೆಗಾಗಿ ವಿವೇಕಾನಂದರ ಪುಸ್ತಕಗಳನ್ನು ಮಕ್ಕಳಿಗೆ ಓದುವ ವ್ಯವಸ್ಥೆ ಮಾಡಬೇಕು.

ಗುರುಗಳಾದವರು ಪ್ರತಿ ವಿದ್ಯಾರ್ಥಿಗಳಿಗೆ ಓದುವ ಆಸಕ್ತಿಯನ್ನು ಬೆಳಸಬೇಕು ತಮ್ಮ ವಿವೇಕಾನಂದ ಶಾಲೆಯಲ್ಲಿ ಓದಿ ಅತ್ಯುನತ್ತ ಹುದ್ದೆಯನ್ನು ಪಡೆದ ಸಾಧಕರ ಬಗ್ಗೆ ಹೇಳಿದರು. ಇಡೀ ಜಗತ್ತಿನಲ್ಲಿ ಭಾರತೀಯರ ರಕ್ತದಲ್ಲಿ ಅತೀ ಬುದ್ದಿವಂತಿಕೆ ಅನುವಂಶಿಯವಾಗಿ ಬಂದಿದೆ ಅದಕ್ಕಾಗಿ ನಮ್ಮ ಹಿರಿಯರ ಬಗ್ಗೆ ಹೆಮ್ಮೆ ಪಡಬೇಕು ಅದನ್ನು ನಾವು ನಮ್ಮ ಪರಿಶ್ರಮದಿಂದ ಸದುಪಯೋಗ ಮಾಡಿಕೊಂಡು ಜೀವನವನ್ನು ಯಶಸ್ವಿಯಾಗಿ ಮಾಡಿಕೊಳ್ಳಬೇಕು. ಅಮೇರಿಕ, ಇಂಗ್ಲೇಡ, ರಷ್ಯಾ, ಪ್ರಾನ್ಸ್ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಅತೀ ಹೆಚ್ಚು ಅಂಕ ಪಡೆದ 10 ವಿದ್ಯಾರ್ಥಿಗಳಲ್ಲಿ ಭಾರತೀಯರೇ ಆಗಿದ್ದಾರೆ ಎಂದರು.

ನಂತರ ಶ್ರೀ ಶರಣಬಸಪ್ಪ ವ್ಹಿ ನಿಷ್ಠಿ ಕಾರ್ಯದರ್ಶಿಗಳು ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಸಂಘ ಸಂಸ್ಥೆಗಳು ಸುರಪುರ ರವರ ತೋಟದಲ್ಲಿ ಗೋ ಶಾಲೆಯನ್ನು ಉದ್ಘಾಟನೆ ಮಾಡಲಾಯಿತು. ಈ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಕ್ಕಾಗಿ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here