ಮಾತೆ ರಮಾಬಾಯಿ ಅಂಬೇಡ್ಕರ್‍ರ ಸಾಮಾಜಿಕ ಕೊಡುಗೆ ಅನನ್ಯ

0
29

ಕಲಬುರಗಿ: ರಮಾಬಾಯಿ ಅಂಬೇಡ್ಕರ್ ಅವರು ತಮ್ಮ ಮದುವೆಗೆ ಮುಂಚೆ ಅನಕ್ಷರಸ್ಥರಾಗಿದ್ದು, ಮದುವೆಯ ನಂತರ ಡಾ.ಬಾಬಾಸಾಹೇಬ ಅಂಬೇಡ್ಕರ ಅವರಿಂದ ಅಕ್ಷರಸ್ಥರಾದರು. ತಾವು ಅನಕ್ಷರಸ್ಥರಾಗಿದ್ದಾಗ ತಮಗೆ ಆಗುತ್ತಿದ್ದ ತೊಂದರೆ, ಅನ್ಯಾಯವನ್ನು ಮನಗಂಡು, ನನ್ನಂತೆ ಬೇರೆ ಮಹಿಳೆಗೆ ಸಮಸ್ಯೆಯಾಗಬಾರದೆಂದು ತಮ್ಮ ಪತಿಯ ಜೊತೆಗೂಡಿ ಇಡೀ ಜೀವನದುದ್ದಕ್ಕೂ ಶೋಷಿತರು, ಮಹಿಳೆಯರ ಶಿಕ್ಷಣ, ಹಕ್ಕುಗಳನ್ನು ದೊರಕಿಸಿಕೊಡಲು ಹೋರಾಟ ಮಾಡುವ ಮೂಲಕ ಅನನ್ಯವಾದ ಸಾಮಾಜಿಕ ಕೊಡುಗೆಯನ್ನು ನೀಡಿದ್ದಾರೆ ಎಂದು ಉಪನ್ಯಾಸಕಿ, ಮಹಿಳಾ ಚಿಂತಕಿ ಅಶ್ವಿನಿ ಜೆ.ಪಾಟೀಲ ಹೇಳಿದರು.

ನಗರದ ಎಸ್.ಬಿ.ಕಾಲೇಜು ಎದುರುಗಡೆಯಿರುವ ‘ಕೊಹಿನೂರ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಜರುಗಿದ ‘ಮಾತೆ ರಮಾಬಾಯಿ ಅಂಬೇಡ್ಕರ್‍ರ 126ನೇ ಜನ್ಮದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಪುರುಷನ ಯಶಸ್ಸಿಗೆ ಮಹಿಳೆಯ ಸಹಕಾರ, ಬೆಂಬಲೆ ಅಗತ್ಯ. ‘ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುವುದು ಶಿವಂಗೆ’ ಎಂಬ ಮಾತಿನಂತೆ ಡಾ.ಬಾಬಾಸಾಹೇಬ್ ಅಂಬೇಡ್ಕರ್‍ರ ಅವರ ಹಿಂದಿನ ಬೆಳಕು ಮತ್ತು ಶಕ್ತಿಯಾಗಿ ಮಾತೆ ರಮಾಬಾಯಿ ಅವರು ಕೆಲಸ ಮಾಡಿದ್ದಾರೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ದೇಶ ಕಟ್ಟುವ ಕಾರ್ಯಕ್ಕೆ ಕೈಜೋಡಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕೊಹಿನೂರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಸತೀಶ್ ಟಿ.ಸಣಮನಿ, ಕಾರ್ಯದರ್ಶಿ ಹಾಗೂ ಪ್ರಾಂಶುಪಾಲ ಪ್ರೊ.ಭೀಮಾಶಂಕರ ಎಸ್.ಘತ್ತರಗಿ, ಪ್ರಮುಖರಾದ ಸ್ಮಿತಾ ಕಟ್ಟೋಳಿ, ವೈಷ್ಣವಿ ಮಡಿವಾಳ, ಭವಾನಿ ಜಿ., ಅಂಬಿಕಾ ಸುತಾರ, ಕೀರ್ತಿ ಎಸ್.ಕಂಠಿ, ಐಶ್ವರ್ಯ ಜಿ.ಶೀಲವಂತ, ಶರಣಮ್ಮ ಎಸ್.ಸಂಗೋಳಗಿ, ಶರಣಮ್ಮ ಎಸ್.ಡಾಂಗೆ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here