ಕಲಬುರಗಿ: ಸರ್ಕಾರಿ ಪದವಿ ಪೂರ್ವ ಕಾಲೇಜು ಶ್ರೀ ನಿವಾಸ ಸರಡಗಿಯಲ್ಲಿ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ ಮಕ್ಕಳಲ್ಲಿ ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ಮನೋಭಾವನೆ ಮತ್ತು ಪ್ರಶ್ನಿಸುವ ಗುಣ ಬೆಳೆಸುವುದು ಅನಿವಾರ್ಯವಾಗಿದೆ.
ಇಂದಿನ ಮೋಬೆಲಗಳ ಹಾವಳಿಯಿಂದ ಮಕ್ಕಳು ವಾಟ್ಸಪ್, ಟ್ಟಿಟ್ಟರ್, ಪೆÇೀಸ್ ಬುಕ್ಕ ಬಳಕೆ ಕಡಿಮೆ ಮಾಡಿ ಪುಸ್ತಕವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ ಹಾಗೂ ಇದು ಸ್ಪರ್ಧಾತ್ಮಕ ಯುಗ ವಾಗಿರುವುದುರಿಂದ ಹೆಚ್ಚಿನ ಜ್ಯಾನ ಬೆಳಗಿಸಿ ಕೊಳ್ಳಲು ಪುಸ್ತಕ ಪ್ರೇಮಿ ಆಗಬೇಕು. ಇಂದಿನ ಯುಗದಲ್ಲಿ ಮನುಷ್ಯರನ್ನು ಮನುಷ್ಯರಾಗಿ ರೂಪಿಸುವ ಶಿಕ್ಷಣ ಅನಿವಾರ್ಯ ಎಂದು ಚಿಂತಕರು ಹಾಗೂ ಉಪನ್ಯಾಸಕರಾದ ರಮೇಶ ಮಾಡ್ಯಾಳಕರ ಕರೆ ನೀಡಿದರು.
ಕಾರ್ಯಕ್ರಮದ ದಿವ್ಯಾ ಸಾನ್ನಿಧ್ಯವನ್ನು ಸ್ಥಳೀಯ ಚಿಕ್ಕವೀರ ಸಂಸ್ಥಾನ ಮಠದ ಡಾ.ಶ್ರೀ ಷ ಪ್ರ ಬ್ರ ರೇವಣಸಿದ್ಧ ಶಿವಾಚಾರ್ಯರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎನ್ ಪಿ ಎಸ್ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಧರ್ಮರಾಜ ಜವಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಗುರುಗಳಾದ ಅನುಸುಬಾಯಿ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಸಂಗಯ್ಯ ಹೀರೆಮಠ,ಪ್ರವೀಣ ಆಡೆ, ಶಿಕ್ಷಣ ಪ್ರೇಮಿಗಳಾದ ಸಂಗನಗೌಡ ಪಾಟೀಲ, ಶಿವಾನಂದ ಕಿಳ್ಳಿ , ಆಗಮಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಉಪನ್ಯಾಸಕರಾದ ಶಿವಶರಣಪ್ಪ ತಮಗೋಳ ವಹಿಸಿದ್ದು, ಉಪನ್ಯಾಸಕರಾದ ಗೋಪಾಲ ರೆಡ್ಡಿ, ಗುರುರಾಜ, ಗುಣಾ ಎಚ್ ಆರ್, ಜ್ಯೋತಿ ಮೇಡಂ, ಸೈಪಾನ ಮಖಾಂದರ, ಹಳೆಯ ವಿದ್ಯಾರ್ಥಿಗಳು, ಗ್ರಾಮದ ಪ್ರಮುಖ ಹಾಜರಿದ್ದರು.ಕಾರ್ಯಕ್ರಮದ ಕೊನೆಗೆ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.