ಕಲಬುರಗಿ; ಜಿಲ್ಲೆಯ ಕೆಳಕಂಡ ತಾಲೂಕಿನಲ್ಲಿ ಖಾಲಿಯಿರುವ 54 ಗ್ರಾಮಒನ್ ಪ್ರಾಂಚೈಸಿ ಕೇಂದ್ರಗಳ ಸ್ಥಾಪನೆ ಹಾಗೂ ನಿರ್ವಹಣೆಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿಗಳಾದ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.
ತಾಲೂಕಿನ ಹೆಸರು ಹಾಗೂ ಖಾಲಿ ಇರುವ ಗ್ರಾಮ ಒನ್ ಕೇಂದ್ರಗಳ ಇವರ ಇಂತಿದೆ. ಕಲಬುರಗಿ ತಾಲೂಕಿನಲ್ಲಿ-3, ಕಮಲಾಪೂರ ತಾಲೂಕು-4, ಅಫಜಲಪೂರ ತಾಲೂಕು-6, ಆಳಂದ ತಾಲೂಕು-10, ಚಿಂಚೋಳಿ ತಾಲೂಕು-8, ಚಿತ್ತಾಪೂರ ತಾಲೂಕು-6, ಜೇವರ್ಗಿ ತಾಲೂಕು-6, ಸೇಡಂ ತಾಲೂಕು-4, ಕಾಳಗಿ ತಾಲೂಕು-4 ಹಾಗೂ ಯಡ್ರಾಮಿ ತಾಲೂಕು-3 ಸೇರಿದಂತೆ ಒಟ್ಟು 54 ಗ್ರಾಮ ಒನ್ ಪ್ರಾಂಚೈಸಿ ಕೇಂದ್ರಗಳ ಸ್ಥಾಪನೆಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕು ಹೊರತುಪಡಿಸಿ ಉಳಿದ ಎಲ್ಲ ತಾಲೂಕುಗಳಲ್ಲಿ ಬರುವ ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲು ಅಧಿಸೂಚನೆ ಹೊರಡಿಸಲಾಗಿದೆ.
ಗ್ರಾಮಒನ್ ಫ್ರಾಂಚೈಸಿ ಕೇಂದ್ರಗಳನ್ನು ನಡೆಸಿಕೊಂಡು ಹೋಗಲಿಚ್ಛಿಸುವ ಅರ್ಹ ಅಭ್ಯರ್ಥಿಗಳು 2024ರ ಫೆಬ್ರವರಿ 15ರ ರಾತ್ರಿ 11.59 ಗಂಟೆಯೊಳಗಾಗಿ https://kal-mys.gramaone.karnataka.gov.in/index.php/applicant-registration-initial-step ಲಿಂಕ್‍ದಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.