ಕಲಬುರಗಿ: ಎಪಿಎಲ್ ಹಾಗೂ ಬಿಪಿಎಲ್ ಕಾರ್ಡದಾರರು ಸ್ವಯಂ ಪ್ರೇರಿತ ತಮ್ಮ ಮೊಬೈಲ್‍ನಲ್ಲಿ ಆಯುಷ್ಮಾನ್ ಆ್ಯಪ್(AYUSHMAN APP (AYUSHMAN APP) ಮೂಲಕ ಂಃ-Pಒಎಂಙ-ಅಒ’S–ಂಖಏ ಕಾರ್ಡ್‍ನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು ಅಥವಾ ಗ್ರಾಮ ಓನ್, ಕಲಬುರಗಿ ಓನ್, ಆಶಾ ಕಾರ್ಯಕರ್ತೆಯರಲ್ಲಿ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು/ ಸಿಬ್ಬಂದಿಗಳಲ್ಲಿ ಕಾರ್ಡ್‍ಗಳನ್ನು ಸೃಜಿಸಿಕೊಂಡು ಆರೋಗ್ಯಕ್ಕೆ ಸಂಬಂಧಪಟ್ಟ ರೋಗಗಳಿಗೆ ಕೆಲವು ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.
ಈ ಕಾರ್ಡ್‍ದಿಂದ ಎಪಿಎಲ್ ಕಾರ್ಡುದಾರರು 1,50,000 ರೂ.ಗಳವರೆಗೆ ಮತ್ತು ಬಿಪಿಎಲ್ (BPL) ಕಾರ್ಡುದಾರರಿಗೆ 5 ಲಕ್ಷ ರೂ. ದವರಿಗೆ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳಲು ಕಡ್ಡಾಯವಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಿಂದ ರೆಫಿರಲ್ (REFFERAL) ಚೀಟಿಯನ್ನು ತೆಗೆದುಕೊಂಡು ಈ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ರತಿಕಾಂತ ಸ್ವಾಮಿ ಹಾಗೂ ಜಿಲ್ಲಾ ನೋಡಲ್ ಅಧಿಕಾರಿಗಳಾದ ಡಾ.ರಾಜಕುಮಾರ ಕುಲಕರ್ಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.