ಕಲಬುರಗಿ: ವಿಶೇಷಚೇತನ ನೌಕರರ ಬಹುದಿನಗಳ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದ್ದು ಭಾರತದ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯ ಅಂಗವಿಕಲರ ಹಕ್ಕುಗಳ ಕಾಯಿದೆ 2016ರ ಸೆಕ್ಷನ್ 34ರಲ್ಲಿ ಒದಗಿಸಿದಂತೆ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಮುಂಬಡ್ತಿಯಲ್ಲಿ ಮೀಸಲಾತಿ ನೀಡುವಂತೆ ಆದೇಶಿಸಿತ್ತು.
ಇತ್ತಿಚೆಗೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಯ ವಿಶೇಷಚೇತನ ನೌಕರರಿಗೆ ಬಡ್ತಿಯಲ್ಲಿ ಶೇ. 4 ಪ್ರತಿಶತ ಮೀಸಲಾತಿಯನ್ನು ಡಿಸೆಂಬರ್ 2016ರಿಂದಲೇ ಪೂರ್ವಾನ್ವಯ ಪರಿಣಾಮದೊಂದಿಗೆ ಮುಂಬಡ್ತಿ ನೀಡಬೇಕೆಂದು ಆದೇಶಿಸಿದೆ. ಅದೇ ರೀತಿ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಯ ವಿಕಲಚೇತನ ನೌಕರರಿಗೂ ಕೂಡ ನೀಡಬೇಕೆಂದು ಎಂದು ಡಿಸೇಬಲ್ಡ ಹೆಲ್ಪಲೈನ್ ಫೌಂಡೇಷನ್ ರಾಜ್ಯ ಸಂಯೋಜಕ ಬಸವರಾಜ ಹೆಳವರ ಯಾಳಗಿ ಮನವಿ ಮಾಡಿದ್ದಾರೆ.