ಕಲಬುರಗಿ: ಯಾರೋ ಏನೇನೂ ಹೇಳಿದಾರೆಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಅವರು ಗುಂಡುಕ್ಕಿ ಕೊಲ್ಲುವ ಕಾನೂನು ತರಬೇಕೆಂದು ಹೇಳಿಕೆ ನೀಡಿರುವುದು ಅವರ ವಿವೇಕತನ ಎಷ್ಟಿದೆ ಎಂಬುದು ತೊರಿಸಿಕೊಡುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಶನಿವಾರ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯ ರೆಕಾರ್ಡ್ ರೂಂ ಡಿಜಿಟೈಲೇಷನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ಈಶ್ವರಪ್ಪಗೆ ಬಿಜೆಪಿ ಪಕ್ಷದಲ್ಲಿ ಇನ್ ವಾಲೆಂಟ್ರಿ ರಿಟಾರ್ಮಿಂಟ್ ಸಿಕ್ಕಿದೆ. ಸ್ವ ಪಕ್ಷದಲ್ಲಿ ಅವರಿಗೆ ಮಾರ್ಗದರ್ಶಕ ಮಂಡಲ್ಲದಲ್ಲಿಯೂ ಅವಕಾಶ ಸಿಗದ ಅವರ ಮಾತನ್ನೂ ಗಂಭೀರ ತೆಗೆದುಕೊಳ್ಳುವ ಅಗತ್ಯ ವಿಲ್ಲ ಎಂದು ಹೇಳಿದರು.
ಹತ್ತು ವರ್ಷಗಳಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿರುವ ವಿರುದ್ಧ ನಮ್ಮ ಹೋರಾಟಕ್ಕೆ ಕೈಜೊಡಿಸುವುದನ್ನು ಬಿಟ್ಟು ಮೋದಿ ಅವರ ಗುಲಾಮರಾಂತೆ ಮಾತನಾಡುತ್ತಿದ್ದಾರೆ.
ಹತ್ತು ವರ್ಷಗಳಲ್ಲಿ ಕೇಂದ್ರ ಸರಕಾರ ಕನ್ನಡಿಗರಿಗೆ ಏನು ಮಾಡಿದೆ ಎಂಬುದು ಪಟ್ಟಿ ಕೊಡ್ಲಿ. ಮೋದಿ ಅವರು ಪಾರ್ಲಿಮೆಂಟನ ರಾಜಕೀಯ ಭಾಷಣ ಮಾಡುವಾಗ ಅಂಕಿ ಅಂಶಗಳನ್ನು ಇಟ್ಟುಕೊಂಡು ಮಾತಾಡಲ್ಲ. ನಹೇರು, ರಾಜೀವ್ ಗಾಂಧಿ, ಇಂದ್ರಾ ಗಾಂಧಿ, ಮನಮೊಹನ್ ಸಿಂಗ್ ಈಗ ಖರ್ಗೆ ಅವರ ಹೆಸರನ್ನು ಹೇಳಕೊಂಡು ಭಾಷಣ ಮಾಡುತ್ತಾರೆ. ಕೇಂದ್ರದ ಹತ್ತು ವರ್ಷದ ಸಾಧನೆ ಎನ್ನಿಲ್ಲ ಎಂಬುದು ತೋರಿಸಿಕೊಡುತ್ತದೆ ಎಂದರು.
ಈ ಸಂದರ್ಭದಲ್ಲಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಹಲವರು ಇದ್ದರು.