ವಾಡಿ; ಗ್ರಾಮ ಚಲೋ ಅಭಿಯಾನದ ಮೂಲಕ ಪ್ರತಿ ವಾರ್ಡ್,ಗ್ರಾಮದ ಮನೆ ಮನೆಗೆ,ಅಂಗಡಿ ಮುಂಗಟ್ಟುಗಳಿಗೆ ನಾವು ಹೋಗಿ ,ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡ ಜನಪರ ಯೋಜನೆಗಳ ಬಗ್ಗೆ ಅವರ ಮನೆ ಮನ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು.
ಪಟ್ಟಣದ ವಾರ್ಡ್ ನಂ 17ರ ಹಮ್ಮಿಕೊಂಡ ಗ್ರಾಮ ಚಲೋ ಅಭಿಯಾದಲ್ಲಿ ಭಾಗವಹಿಸಿ ಮಾತನಾಡಿ,ಮುಂಬರುವ ದಿನಗಳಲ್ಲಿ ಭಾರತ ವಿಶ್ವಕ್ಕೆ ಗುರುವಾಗಲಿದೆ. ಆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗಲು ಗ್ರಾಮಗು ಅಭಿವೃದ್ಧಿ ಹೊಂದಬೇಕಿದೆ ಎಂದರು.
ಈ ಗ್ರಾಮ ಚಲೋ ಅಭಿಯಾನವು ಫೆ. 9,10,11 ಮೂರು ದಿನಗಳ ಕಾಲ ನಡೆಯಲಿದ್ದು, ಮೋದಿ ಮತ್ತೊಮ್ಮೆ ಎಂಬ ವಿಚಾರ ಮುಂದಿಟ್ಟುಕೊಂಡು, ಮೋದಿ 3ನೇ ಬಾರಿಗೆ ಪ್ರಧಾನಿ ಆಗಬೇಕು, ಕಳೆದ 10 ವರ್ಷಗಳಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕೆಂಬ ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಮುಖಂಡರಾದ ರಾಮಚಂದ್ರ ರಡ್ಡಿ, ಸಿದ್ದಣ್ಣ ಕಲ್ಲಶೆಟ್ಟಿ, ಭೀಮರಾವ ದೊರೆ, ಶರಣಗೌಡ ಚಾಮನೂರ, ಶಿವಶಂಕರ ಕಾಶೆಟ್ಟಿ,ಪ್ರಕಾಶ ಪುಜಾರಿ, ಸತೀಶ ಸಾವಳಗಿ, ಅಯ್ಯಣ್ಣ ದಂಡೋತಿ,ಬಸವರಾಜ ಪಗಡಿಕರ,ದೇವೇಂದ್ರ ಪಂಚಾಳ, ಯಂಕಮ್ಮ ಗೌಡಗಾಂವ, ಅನುಸುಭಾಯಿ ಪವಾರ ಸೇರಿದಂತೆ ಇತರರು ಇದ್ದರು.