ಗಜಲ್ ಆಕರ್ಷಕ ಕಾವ್ಯ : ಡಾ.ಹೊನ್ನಳ್ಳಿ 

0
16

ಕಲಬುರಗಿ; ಅರೆಬಿಕ್, ಪರ್ಷಿಯನ್  ಮೂಲದಿಂದ ಉರ್ದುವಿನಿಂದ ಕನ್ನಡಕ್ಕೆ ಬಂದಿರುವ ಗಜಲ್ ಎಂಬುದು ತುಂಬಾ ಆಕರ್ಷಕ ಕಾವ್ಯವಾಗಿದೆ ಎಂದು ಶರಣಬಸವ ವಿಶ್ವವಿದ್ಯಾಲಯ ಕುಲಸಚಿವ (ಮೌಲ್ಯಮಾಪನ) ಡಾ.ಶಿವದತ್ತ ಹೊನ್ನಳ್ಳಿ ಹೇಳಿದರು.

ಶರಣಬಸವೇಶ್ವರ ಕಲಾ ಮಹಾವಿದ್ಯಾಲಯ ಕಲಬುರಗಿ ಹಾಗೂ ಕರ್ನಾಟಕ ಗಜಲ್ ಅಕಾಡೆಮಿ ಬೆಂಗಳೂರು ನಹಯೋಗದಲ್ಲಿ ” ಹೊಸಗನ್ನಡ ಸಾಹಿತ್ಯದಲ್ಲಿ ಗಜಲ್ ಪರಂಪರೆ ಎಂಬ ವಿಷಯದ ಮೇಲೆ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಜಲ್ ಕಾವ್ಯ ರಸವತ್ತಾಗಿದೆ. ಪ್ರೇಮ ಮತ್ತು ವಿರಹದ ಜೊತೆಗೆ ಸಾಮಾಜಿಕ ಕಳಕಳಿಯನ್ನು ಒಳಗೊಂಡಿದೆ ಎಂದು ಹೇಳಿದರು.

Contact Your\'s Advertisement; 9902492681

ಮುಖ್ಯ ಅತಿಥಿ ಗಳಾಗಿದ್ದ ವಿಜಯಪುರದ ಹಿರಿಯ ಗಜಲಕಾರ್ತಿ ಪ್ರಭಾವತಿ ದೇಸಾಯಿ ಮಾತನಾಡಿ, ಧ್ಯಾನಸ್ಥ ಮನಸ್ಥಿತಿಯಿಂದ ಗಜಲ್ ಹುಟ್ಟುತ್ತದೆ‌ ‌. ಅದಕ್ಕೆ ಅಧ್ಯಯನ ಇರಲೇಬೇಕು ಎಂದು ತಿಳಿಸಿದರು. ಕರ್ನಾಟಕ ಗಜಲ್ ಅಕಾಡೆಮಿ ಅಧ್ಯಕ್ಷ ರಂಗಸ್ವಾಮಿ ಸಿದ್ದಯ್ಯ ಮಾತನಾಡಿದರು.

ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸುರೇಶಕುಮಾರ ನಂದಗಾಂವ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣದಿಂದ ಜಗತ್ತನ್ನೆ ಗೆಲ್ಲಬಹುದು ಎಂದರು.  ಡಾ.ಶಿವರಾಜ ಶಾಸ್ತ್ರಿ ಹೇರೂರು ಸ್ವಾಗತಿಸಿದರು. ಕರ್ನಾಟಕ ಗಜಲ್ ಅಕಾಡೆಮಿ ಕಾರ್ಯದರ್ಶಿ, ಹಿರಿಯ ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಪ್ರಾಸ್ತಾವಿಕ ಮಾತನಾಡಿದರು.

ಐಕ್ಯೂಎಸಿ ಸಂಯೋಜಕಿ ಅಕ್ಷತಾ ಬೆಳ್ಳಮಕರ್, ನ್ಯಾಕ್ ಸಂಯೋಜಕಿ ಡಾ.ಶರಣಮ್ಮ ವಾರದ ವೇದಿಕೆಯಲ್ಲಿದ್ದರು. ಇತಿಹಾಸ ಪ್ರಾಧ್ಯಾಪಕಿ ಡಾ.ಸಂಗೀತಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.  ಮೊದಲ ಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕದ ಗಜಲ್ ಸಾಹಿತ್ಯದ ಕುರಿತು ಕೊಪ್ಪಳದ ಹಿರಿಯ ಗಜಲಕಾರ್ತಿ ಅರುಣ ನರೇಂದ್ರ ಹಾಗೂ ಕನ್ನಡದಲ್ಲಿ ಗಜಲ್ ಹೆಜ್ಜೆಗುರುತು ಕುರಿತು ಪ್ರಾಧ್ಯಾಪಕ  , ಗಜಲಕಾರ ಡಾ.ಮಲ್ಲಿನಾಥ ತಳವಾರ ಉಪನ್ಯಾಸ ನೀಡಿದರು.

ವಿಜಯಪುರದ ಗಜಲಕಾರ್ತಿ ಹೇಮಲತಾ ವಸ್ತ್ರದ ಅಧ್ಯಕ್ಷತೆ ವಹಿಸಿದ್ದರು.  ಉಪನ್ಯಾಸಕಿ ಪ್ರತಿಭಾ ಕಾರ್ಯಕ್ರಮ ‌ನಿರೂಪಿಸಿದರು. ನಂತರ ನಡೆದ ಗಜಲ್ ಸಂಭ್ರಮ ಕಾವ್ಯ ವಾಚನದಲ್ಲಿ ಹಿರಿಯ ಗಜಲಕಾರ ಸಿದ್ದರಾಮ ಹೊನ್ಕಲ್, ಇತಿಹಾಸ ತಜ್ಞ ಡಾ.ಶ್ರೀಶೈಲ ಬಿರಾದಾರ ಮುಖ್ಯ ಅತಿಥಿಗಳಾಗಿದ್ದರು.  ಶರಣಬಸವೇಶ್ವರ ಕಲಾ ಮಹಾವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಶಿವರಾಜ‌ ಶಾಸ್ತ್ರೀ ಹೇರೂರ ಅಧ್ಯಕ್ಷತೆ ವಹಿಸಿದ್ದರು.

ನಂರುಶಿ ಕಡೂರು, ಡಾ.ಭಾಗ್ಯವತಿ ಕೆಂಭಾವಿ,  ಜ್ಯೋತಿ ದೇವಣಗಾಂವ, ಡಿ.ಎಂ.ನದಾಫ್,  ಕಪಿಲ ಚಕ್ರವರ್ತಿ, ನೀಲಾ ಬಿ.ಮಲ್ಲೆ, ಹೆಚ್.ವೈ.ರಾಠೋಡ, ವಿದ್ಯಾವತಿ ಅಂಕಲಗಿ, ಪ್ರೇಮಾ ಹೂಗಾರ, ವೆಂಕಟೇಶ ಪಾಟೀಲ, ಸುವರ್ಣ ರಾಠೋಡ, ಗಿರೀಶ ಜಕಾಪುರೆ, ಡಾ.ಗೌರಿ ಪಾಟೀಲ, ಶರಣಗೌಡ ಪಾಟೀಲ ಜೈನಾಪುರ, ಬಸಮ್ಮ ಸಜ್ಜನ, ಪಾರ್ವತಿ ಬೂದೂರು, ಪ್ರಕಾಶ ರಜಪೂತ ಹಾಗೂ ಮಹಿಪಾಲರೆಡ್ಡಿ ಸೇಡಂ ಅವರು ಗಜಲ್ ವಾಚಿಸಿದರು.

ಡಾ. ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ನಂತರ ಸಮಾರೋಪ ಸಮಾರಂಭದಲ್ಲಿ ದಿಕ್ಸೂಚಿ ಭಾಷಣವನ್ನು ಹಿರಿಯ ಗಜಲಕಾರ ಮಹಾಂತೇಶ ನವಲಕಲ ಮಾಡಿದರು. ಹಿರಿಯ ಲೇಖಕ ಪ್ರೊ. ವೆಂಕಣ್ಣ ಡೊಣ್ಣೆಗೌಡರು, ಕರ್ನಾಟಕ ಗಜಲ್ ಅಕಾಡೆಮಿ ಕಾರ್ಯದರ್ಶಿ ಮಹಿಪಾಲರೆಡ್ಡಿ ವೇದಿಕೆಯಲ್ಲಿದ್ದರು. ಉಪನ್ಯಾಸಕ ಚಂದ್ರಶೇಖರರೆಡ್ಡಿ ಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here