ಕಿರ್ಲೋಸ್ಕರ್ ಕಾರ್ಖಾನೆಗೆ ಉನ್ನತ ಸುರಕ್ಷಾ ಪುರಸ್ಕಾರ ಪ್ರಶಸ್ತಿ

0
60

ಕೊಪ್ಪಳ, : ತಾಲೂಕಿನ ಬೇವಿನಹಳ್ಳಿ ಗ್ರಾಮದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯು ರಾಷ್ಟೀಯ ಸುರಕ್ಷತಾ ಮಂಡಳಿಯು ಸುರಕ್ಷತೆಗಾಗಿ ನೀಡುವ “ಉನ್ನತ ಸುರಕ್ಷಾ ಪುರಸ್ಕಾರ ಪ್ರಶಸ್ತಿ” ಗೆ ಭಾಜನವಾಗಿದೆ.

ಬೆಂಗಳೂರಿನ ರ್ಯಾಡಿಸನ್ ಬ್ಲೂ ಏಟ್ರಯಾ ಹೊಟೇಲನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಡಿ.ಸಿ ಜಗದೀಶ್, ನಿರ್ದೇಶಕರು, ಕಾರ್ಖಾನೆಗಳು, ಬಾಯ್ಲರುಗಳು , ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಕರ್ನಾಟಕ ಸರ್ಕಾರ ಬೆಂಗಳೂರು, ಇವರು ಕಿರ್ಲೋಸ್ಕರ್ ಕಾಖಾನೆಯ ಹಿರಿಯ ಉಪಾಧ್ಯಕ್ಷರು-ಮಾನವ ಸಂಪನ್ಮೂಲ ಮತ್ತು ಸಾ.ಆಡಳಿತ ಅಧಿಕಾರಿಯಾದ ಪಿ.ನಾರಾಯಣ ಇವರಿಗೆ “ಉನ್ನತ ಸುರಕ್ಷಾ ಪುರಸ್ಕಾರ” ಪ್ರಶಸ್ತಿ ಪ್ರದಾನ ಮಾಡಿದರು.

Contact Your\'s Advertisement; 9902492681

ಕಂಪನಿಯ ಕಾರ್ಯಾಚರಣೆ, ಉತ್ಪಾದನಾ ಚಟುವಟಿಕೆಗಳಲ್ಲಿ ಅಪಘಾತಗಳು ಸಂಭವಿಸದಂತೆ ತೆಗೆದುಕೊಳ್ಳುವ ಮುನ್ನೆಚ್ಚರಿಕೆ ಕ್ರಮಗಳು, ಕಾರ್ಖಾನೆಯ ಕೆಲಸದ ಸ್ಥಳದಲ್ಲಿ ಉದ್ಯೋಗಿಗಳ ಸುರಕ್ಷತೆ, ಸುರಕ್ಷತಾ ತರಬೇತಿ, ಅಣುಕು ಪ್ರದರ್ಶನ ಮತ್ತು ಅಪಘಾತಗಳ ಅಂಕಿ-ಅಂಶ, ಸುರಕ್ಷತಾ ಸಾಧನ ಸಾಮಾಗ್ರಿಗಳ ಧರಿಸುವಿಕೆ ಇತ್ಯಾದಿಗಳನ್ನು ಗಮನಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ರಾಷ್ಟ್ರೀಯ ಸುರಕ್ಷತಾ ಮಂಡಳಿಯವರು ಕಿರ್ಲೋಸ್ಕರ್ ಕಾರ್ಖಾನೆಯ ಈ ಸಾಧನೆಯನ್ನು ಗುರುತಿಸಿ 2017-2019 ನೇ ಸಾಲಿನ ಉನ್ನತ ಸುರಕ್ಷಾ ಪುರಸ್ಕಾರ ಪ್ರಶಸ್ತಿ ಪ್ರಧಾನ ಮಾಡಿರುತ್ತಾರೆ.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸುರಕ್ಷತಾ ಮಂಡಳಿಯ (ಕರ್ನಾಟಕ ಚಾಪ್ಟರ್) ಅಧ್ಯಕ್ಷತಾದ ಗುಂಡಪ್ಪ ಉಪಾಧ್ಯಕ್ಷರಾದ ಜಿ. ರಾಮಮೂರ್ತಿ, ಗೌರವ ಕಾರ್ಯದರ್ಶಿಗಳಾದ ಪಿ.ಸಿ.ವೆಂಕಟೇಶ್ವರುಲು, ಹರಿಹರದ ಪಿ.ಕೆ ಪ್ರಕಾಶ್‍ರಾವ್, ಶಿಕ್ಷಣತಜ್ಞರು, ಕಾರ್ಖಾನೆಯ ಹಿರಿಯ ಅಧಿಕಾರಿಗಾದ ಜಿ.ಎಸ್ ಕೃಷ್ಣಮೂರ್ತಿ, ರಾಜೇಶ್ ಬುಟಕಿ, ರವಿಕುಮಾರ್ ಸೇರಿದಂತೆ ಸಮಾರಂಭದಲ್ಲಿ ಕರ್ನಾಟಕದ 125 ವಿವಿಧ ಕಾರ್ಖಾನೆಗಳ ಹಿರಿಯ ಅಧಿಕಾರಿಗಳು, ಮುಖ್ಯಸ್ಥರು ಮತ್ತು ಸುರಕ್ಷತಾ ವಿಭಾಗದ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here