ಶಹಾಬಾದ: ಪಂಡಿತ್ ದೀನ್‍ದಯಾಳ ಉಪಾಧ್ಯಾಯ ಅವರು ಸರಳ ಜೀವಿಯಾಗಿದ್ದು, ಬಿಜೆಪಿಗೆ ಭದ್ರ ಬುನಾದಿ ಹಾಕಿದ ದೀಮಂತ ನಾಯಕರಲ್ಲಿ ಅವರು ಒಬ್ಬರಾಗಿದ್ದರು ಎಂದು ಬಿಜೆಪಿ ಹಿರಿಯ ಮುಖಂಡ ಅರುಣ ಪಟ್ಟಣಕರ್
ಹೇಳಿದರು.
ಅವರು ರವಿವಾರ ಬಿಜೆಪಿ ಪಕ್ಷದ ವತಿಯಿಂದ ನಗರದ ಬಿಜೆಪಿ ಕಛೇರಿಯಲ್ಲಿ ಪಂಡಿತ್ ದೀನ್‍ದಯಾಳ ಉಪಾಧ್ಯಾಯರ ಪುಣ್ಯತಿಥಿ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೀನ್ ದಯಾಳ್ ಅವರು ಜನರ ನಾಡಿ ಮಿಡಿತಗಳನ್ನು ಅರ್ಥೆಸಿಕೊಳ್ಳುವ ಮೂಲಕ ಹೋರಾಟ ಮನೋಭಾವ ಹೆಚ್ಚಿಸಿಕೊಂಡಿದ್ದರು.ಪಕ್ಷ ಸಂಘಟನೆಗಾಗಿ ಸಾಕಷ್ಟ ಶ್ರಮಿಸಿದ್ದಾರೆ.ಅವರ ಆದರ್ಶ ಗುಣಗಳು, ಮಾರ್ಗದರ್ಶನಗಳನ್ನು ಎಲ್ಲಾ ಕಾರ್ಯಕರ್ತರು ಪಾಲಿಸಬೇಕೆಂದು ಹೇಳಿದರು.
ಬಿಜೆಪಿ ಮುಖಂಡ ಶರಣು ವಸ್ತ್ರದ್ ಮಾತನಾಡಿ,ಪಕ್ಷ ಸಂಘಟನೆಯಲ್ಲಿ ಪ್ರತಿಯೊಬ್ಬರೂ ಶ್ರದ್ಧೆಯಿಂದ ಪಾಲ್ಗೊಳ್ಳಬೇಕು.ಇಂದು ಪಕ್ಷಕ್ಕಾಗಿ ದುಡಿದು ತನ್ನನ್ನು ತಾನು ಅರ್ಪಿಸಿಕೊಂಡವರು ಉತ್ತಮ ನಾಯಕರಾಗಿ ಹೊರಹೊಮ್ಮಿದ್ದಾರೆ.ಅಂದಿನ ದಿನಗಳಲ್ಲಿ ಭೂತಪೂರ್ವ ಪತ್ರಿಕೆಯನ್ನು ಹೊರತಂದು ಬ್ರಿಟಿಷರ ದೌರ್ಜನ್ಯದ ವಿರುದ್ಧ ನೇರ ನುಡಿಗಳ ಮೂಲಕ ಪತ್ರಿಕೆಯ ಶಕ್ತಿ, ಸಾಮಥ್ರ್ಯ ಎಷ್ಟು ಎಂಬುದನ್ನು ತೋರಿಸಿದ್ದರು.ಅವರ ಕೆಲ ಪುಸ್ತಕಗಳು ಜೀವನಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.
ಪ್ರಮುಖರಾದ ಅನೀಲ ಬೋರಗಾಂವಕರ್, ಮಹಾದೇವ ಗೊಬ್ಬೂರಕರ, ಸದಾನಂದ ಕುಂಬಾರ, ಸಾಯಿಬಣ್ಣ ಬೆಳಗುಂಪಿ, ಯಲ್ಲಪ್ಪ ದಂಡಗುಲಕರ, ಜಗದೇವ ಸುಬೇದಾರ, ಶ್ರೀನಿವಾಸ ದೇವಕರ, ಮೋಹನ ಹಳ್ಳಿ, ರಹೀಮಸಾಬ, ಅಂಬರೀಶ್ ಕಲ್ಯಾಣಿ, ವಿನೋದ ಕಟ್ಟಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.