ಶಹಾಬಾದನಲ್ಲಿ ಸಾಂಸ್ಕøತಿಕ ಜನೋತ್ಸವ: ಫೆ.12 ಮತ್ತು 13ರಂದು

0
49

ಶಹಾಬಾದ :ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಜೀರಹಿತ ಪಂಥದ ಹೋರಾಟಗಾರ ನೇತಾಜಿ ಸುಭಾಷಚಂದ್ರ ಬೋಸ್ ರವರ 127ನೇ ಜನ್ಮ ದಿನಾಚರಣೆಯ ಅಂಗವಾಗಿ ಎಐಡಿಎಸ್‍ಓ, ಎಐಡಿವೈಓ,ಎಐಎಮ್‍ಎಸ್‍ಎಸ್ ವತಿಯಿಂದ ಫೆ. 12 ಮತ್ತು 13 ರಂದು ಎರಡು ದಿನಗಳವರೆಗೆ ಸಾಂಸ್ಕೃತಿಕ ಜನೋತ್ಸವ ಕಾರ್ಯಕ್ರಮವನ್ನು ಹನುಮಾನ ನಗರದ ಶ್ರೀ ಸಿದ್ಧರಾಮೇಶ್ವರ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎಐಎಮ್‍ಎಸ್‍ಎಸ್ ಜಿಲ್ಲಾಧ್ಯಕ್ಷೆ ಗುಂಡಮ್ಮ ಮಡಿವಾಳ ತಿಳಿಸಿದರು.

ಅವರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ, ಫೆ 12ರಂದು ಸಂಜೆ 5-30ಕ್ಕೆ ನಡೆಯಲಿರುವ ಮೊದಲನೆ ದಿನದ ಸಾಂಸ್ಕೃತಿಕ ಜನೋತ್ಸವ ಕಾರ್ಯಕ್ರಮಕ್ಕೆ ಎಸ್.ಎಸ್.ಮರಗೋಳ ಕಾಲೇಜಿನ ಪ್ರಾಂಶುಪಾಲ ಪೆÇ್ರೀ. ಕೆ.ಬಿ.ಬಿಲ್ಲವ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಎಮ್.ಸಿ.ಸಿ ಶಾಲೆಯ ಮುಖ್ಯಗುರುಗಳಾದ ಸಿಸ್ಟರ್ ಲಿನೇಟ್ ಸಿಕ್ವೆರಿಯಾ, ಮುಖ್ಯ ಭಾಷಣಕಾರರಾಗಿ ರಾಯಚೂರಿನ ವಿದ್ಯಾನಿಧಿ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರಗೀರಿಶ ಆಗಮಿಸಲಿದ್ದಾರೆ. ಎಐಡಿಎಸ್‍ಒ ಜಿಲ್ಲಾ ಕಾರ್ಯದರ್ಶಿಗಳಾದ ತುಳಜಾರಾಮ.ಎನ್.ಕೆ ಉಪಸ್ಥಿತರಿರುವರು. ಎಐಡಿವೈಒ ಜಿಲ್ಲಾ ಅಧ್ಯಕ್ಷ ಜಗನ್ನಾಥ.ಎಸ್.ಹೆಚ್À ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.

Contact Your\'s Advertisement; 9902492681

ಫೆ.13 ರಂದು ಸಂಜೆ 5-30ಕ್ಕೆ ಪೂರ್ಣಚಂದ್ರ ತೇಜಸ್ವಿ ಯವರ ಕಾದಂಬರಿ ಆಧಾರಿತ ಸಿನಿಮಾ ಡೇರ ಡೇವಿಲ್ ಮುಸ್ತಾಫ ಸಾರ್ವಜನಿಕವಾಗಿ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಎಸ್‍ಯುಸಿಐ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ಇಬ್ರಾಹಿಂಪೂರ, ಡಾ. ವಿಶ್ವನಾಥ ಬೆಲ್ಲದ ಸಿನಿಮಾ ಕುರಿತು ಸಂವಾದ ನಡೆಸಿಕೊಡಲಿದ್ದಾರೆ. ಎಐಡಿವೈಒ ಸ್ಥಳೀಯ ಕಾರ್ಯದರ್ಶಿ ರಮೇಶ ದೇವಕರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಂಬಿಕಾ ಗುರಜಾಲಕರ, ಜಗನ್ನಾಥ.ಎಸ್.ಹೆಚ್,ರಮೇಶ ದೇವಕರ, ಕಿರಣ ಮಾನೆ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here