ವಿಜ್ಞಾನ ಜೀವನದ ಒಂದು ಭಾಗ : ಡಾ. ವಿಶ್ವನಾಥ ನಾಲ್ವಾಡ್

0
70

ಕೊಪ್ಪಳ: ವಿಜ್ಞಾನ ಜೀವನದ ಒಂದು ಭಾಗ. ಇದುವೇ ಸತ್ಯ ಉಳಿದುದೆಲ್ಲಾ ಮಿತ್ಯ ಎಂದು ವೈದ್ಯರಾದ ಡಾ.ವಿಶ್ವನಾಥ ನಾಲ್ವಾಡ ಅಭಿಪ್ರಾಯ ವ್ಯಕ್ತ ಪಡಿಸಿದರು.

ಅವರು ನಗರದ ಶ್ರೀಗವಿಸಿದೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಯೋಗಾಲಯದಲ್ಲಿ ಸಿ.ಎನ್.ಆರ್ ರಾವ್ ಕ್ಲಬ್ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿದ್ದ ‘ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟನೆ ಮಾಡಿ ಮಾತನಾಡಿ, ವಿಜ್ಞಾನ ಜೀವನದ ಒಂದು ಭಾಗ. ಇದುವೇ ಸತ್ಯ. ಉಳಿದುದೆಲ್ಲಾ ಮಿತ್ಯ. ಏಕೆಂದರೆ ಪ್ರತಿಯೊಂದು ವಸ್ತು ಹಾಗೂ ವಿಷಯಗಳಲ್ಲಿ ವೈಜ್ಞಾನಿಕ ಅಂಶಗಳು ಇದ್ಧೇ ಇರುತ್ತವೆ ಅವುಗಳನ್ನು ವಿದ್ಯಾರ್ಥಿಗಳು ಅರಿತುಕೊಳ್ಳುವಂತಾಗಬೇಕು. ಇದರಿಂದ ಸತ್ಯದ ಅರಿವು ಮೂಡಿಬರುತ್ತದೆ. ಈ ನಿಟ್ಟಿನಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವಂತಹ ಇಂತಹ ‘ವಿಜ್ಞಾನ ವಸ್ತು ಪ್ರದರ್ಶನ’ ಏರ್ಪಡಿಸಲಾಗಿರುವದು ಬಹಳಷ್ಟು ಸೂಕ್ತವೆಂದರು.

Contact Your\'s Advertisement; 9902492681

ವೇದಿಕೆಯಲ್ಲಿ ಪದವಿ ಪ್ರಾಚಾರ್ಯ ಎಂ.ಎಸ್.ದಾದ್ಮಿ, ಪದವಿ ಪೂರ್ವ ಪ್ರಾಚಾರ್ಯ ಬಿ.ಶ್ರೀನಿವಾಸ, ಕಾಲೇಜಿನ ಸಂಯೋಜಕರಾದ ಪರೀಕ್ಷಿತರಾಜ, ಹಿರಿಯ ಪ್ರಾಧ್ಯಾಪಕ ಸಿ.ವಿ.ಕಲ್ಮಠ ಇದ್ದರು. ಪ್ರಾರ್ಥನೆ ಕುಮಾರಿ ವೃಂದಾ, ಸಿ.ಎನ್.ಆರ್ ರಾವ್ ಕ್ಲಬ್ ಕಾರ್ಯಕ್ರಮಗಳ ರೂಪರೇಶಗಳ ವರದಿ ಮಂಡನೆಯನ್ನು ಉಪನ್ಯಾಸಕ ಪ್ರತಾಪ್, ಸ್ವಾಗತ ಮತ್ತು ಪ್ರಾಸ್ತಾವಿಕ ಉಪನ್ಯಾಸಕ ಡಾ.ವಿರೇಶ, ಅತಿಥಿಗಳ ಪರಿಚಯ ಉಪನ್ಯಾಸಕ ಡಾ.ಪ್ರಕಾಶ ಬಳ್ಳಾರಿ, ನಿರೂಪಣೆ ಉಪನ್ಯಾಸಕಿ ಭವಾನಿ ನೆರವೇರಿಸಿದರು.

ಸಮಾರಂಭದಲ್ಲಿ ವಿಜ್ಞಾನ ವಿಭಾಗದ ಉಪನ್ಯಾಸಕರಾದ ಸಂತೋಷ್ ಗೌಡ, ಶ್ರೀಧರ್ ವಾಣಿ, ವಿನಯ್ ಹಿರೇಮಠ, ಉಪನ್ಯಾಸಕಿಯರಾದ ಮಧು ಬಳ್ಳೊಳ್ಳಿ, ಮಂಜುಳಾ ಬೀಡನಾಳ್, ಸವಿತಾ, ಆಶ್ವಿನಿ, ವರ್ಷಾ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಭೌತ ಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಹಾಗೂ ಸಸ್ಯಶಾಸ್ತ್ರ ಈ ಎಲ್ಲ ಹತ್ತು ಹಲವು ವಿಷಯಗಳನ್ನು ಪ್ರಾತ್ಯಕ್ಷಿತೆ ಹಾಗೂ ವಸ್ತುಗಳ ಪ್ರದರ್ಶನ ಮನಸೂರೆಗೊಂಡಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here