ಕಲಬುರಗಿ; ನಗರದ ವಾರ್ಡ ನಂ.54ರ ವ್ಯಾಪ್ತಿಯಲ್ಲಿ ಬರುವ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸುಮಾರು 170ಕ್ಕೂ ಹೆಚ್ಚು ವಸಾಹತುಗಳಿದ್ದು, ಅಲ್ಲಿನ ಮಹಿಳೆಯರಿಗೆ, ನಾಗರೀಕರಿಗೆ ಸಾರ್ವಜನಿಕ ಶೌಚಾಲಯ ಇರುತ್ತದೆ ಆದರೆ ಅದೂ ಯಾವುದಕ್ಕೂ ಉಪಯೋಗವಾಗುತ್ತಿಲ್ಲ. ಕೊಳವೆ ಬಾವಿ ಇದೆ ಅದಕ್ಕೆ ವಿದ್ಯುತ್ ಮೋಟರ್ ಅಳವಡಿಸಿರುವುದಿಲ್ಲ. ಮಹಿಳೆಯರ ಶೌಚಾಲಯದಲ್ಲಿ ಒಳಗಡೆ ಸ್ವಚ್ಛತೆ ಇರುವುದಿಲ್ಲ. ಶೌಚಾಲಯಕ್ಕೆ ರೀಪೇರಿ ಸಲುವಾಗಿ ಅನುದಾನ ಬಿಡುಗಡೆ ಮಾಡಬೇಕೆಂದು ಕರುನಾಡ ವಿಜಯಸೇನೆ ಜಿಲ್ಲಾ ಅಧ್ಯಕ್ಷ ಪೃಥ್ವಿರಾಜ ಎಸ್.ರಾಂಪೂರª ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಕಲಬುರಗಿ ನಗರದ ವಾರ್ಡ ನಂ.54ರ ವ್ಯಾಪ್ತಿಯಲ್ಲಿ ಬರುವ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸುಮಾರು 170ಕ್ಕೂ ಹೆಚ್ಚು ವಸಾಹತುಗಳಿದ್ದು, ಅಲ್ಲಿನ ಮಹಿಳೆಯರಿಗೆ, ನಾಗರೀಕರಿಗೆ ಸಾರ್ವಜನಿಕ ಶೌಚಾಲಯ ಇರುತ್ತದೆ. ಆದರೆ ಅದು ಯಾವುದಕ್ಕೂ ಉಪಯೋಗವಾಗುತ್ತಿಲ್ಲ. ಕೊಳವೆ ಬಾವಿ ಇದ್ದು ಅದಕ್ಕೆ ಮೋಟಾರ್ ಅಳವಡಿಸಿರುವುದಿಲ್ಲ. ಶೌಚಾಲಯ ಒಳಗಡೆ ಸ್ವಚ್ಛತೆ ಇರುವುದಿಲ್ಲ. ನೀರು ಪೂರೈಕೆಗಾಗಿ ಪೈಪು ಜೋಡಿಸುವ ಕೆಲಸ ಮಾಡಿರುವುದಿಲ್ಲ. ಶೌಚಾಲಯ ಯಾವದಕ್ಕೂ ಬಾರದಂತಾಗಿದೆ. ಸಾರ್ವಜನಿಕ ಮಹಿಳೆಯರಿಗೆ ಶೌಚಾಲಯದ ಕೊರತೆ ಇದೆ. ಸಾರ್ವಜನಿಕ ಶೌಚಾಲಯ ನಿರ್ಮಿಸಿದ್ದು ಅದೂ ಪೂರ್ಣ ಗೊಳಿಸಿಲ್ಲ. ಯಾವುದಕ್ಕೂ ಉಪಯೋಗವಾಗದ ಶೌಚಾಲಯ ನಿರ್ಮಿಸಿದ್ದಾರೆ. ಇದನ್ನು ಕರುನಾಡ ವಿಜಯಸೇನೆ ಖಂಡಿಸುತ್ತದೆ.
ಆದಕಾರಣ ದಯಾಪರರಾದ ತಾವುಗಲು ಕೊಳಗೇರಿ ಅಭಿವೃದ್ಧಿ ವಸಾಹತುಗಳಲ್ಲಿ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯದ ಒಳಗಡೆ ಸ್ವಚ್ಛತೆಗೊಳಿಸಿ ಕೊಳವೆಬಾವಿಗೆ ವಿದ್ಯುತ್ ಮೊಟಾರ ಅಳವಡಿಸಿ ನೀರು ಪೂರೈಕೆಗಾಗಿ ಪೈಪು ಜೋಡಿಸುವುದು. ಇಷ್ಟೆಲ್ಲಾ ರಿಪೇರಿಗಾಗಿ ಅನುದಾನ ಬಿಡುಗಡೆ ಮಾಡಿ ಅಲ್ಲಿನ ನಾಗರೀಕ ಮಹಿಳೆಯರಿಗೆ 15ದಿನಗಳ ಒಳಗಡೆ ಶೌಚಾಲಯದ ಅನುಕೂಲತೆ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಒಂದು ವೇಳೆ ನಮ್ಮ ಮನವಿ ಪತ್ರ ಪುರಸ್ಕರಿಸಿದರೆ ಮುಂದೆ ಬರುವಂಥ ದಿನಗಳಲ್ಲಿ ಮಹಾನಗರ ಪಾಲಿಕೆ ಕಚೇರಿಗೆ ಬೀಗ ಹಾಕಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾಧ್ಯಕ್ಷ ಪೃಥ್ವಿರಾಜ ಎಸ್. ಆರ್. ತಾರಫೈಲ್, ಕಲಬುರಗಿ ನಗರ ಅಧ್ಯಕ್ಷ ಲಕ್ಷ್ಮಿಗಂಡ ದೇವಿಂದ್ರಪ್ಪ ,ನಾಗರಾಜ ಮೈತ್ರಿ, ವಿಜಯ್ ಕುಮಾರ್, ಶಂಕರ್ ದೊಡ್ಮನಿ , ರಾಜೇಂದ್ರ ಟೈಗರ್ , ರಾಜು ಹೆಚ್ ಗುಂಟ್ರಾಳ , ಅನಿಲ್ ಕುಮಾರ್ ಬಿ ಮಂಗ್ , ರಾಜು ನಿಡಗುಂದಿ ಮಲ್ಲಿಕಾರ್ಜುನ ಉಳೆಸುಗೂರು , ವಿಶ್ವನಾಥ್ ಆರ್ ಪಿ , ಮೋಹನ್ ಕುಮಾರ್ , ಪ್ರಶಾಂತ್, ರಾಣುಜಿ , ಶೇಖರ್ ಭಂಡಾರಿ , ಶಿವಕುಮಾರ್ ಡೆಂಗೆ , ಭೀಮ ಶಂಕರ್ , ಲಿಂಗರಾಜ್ ಹೇರೂರು ಹಾಗೂ ಹೀಗೆ ಅನೇಕ ಮಹಿಳಾ ನಾಗರಿಕರು ಮತ್ತು ವಿಜಯಸೇನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.