ಹೆಚ್ ಎಸ್ ಪಿ ಆರ್ ನಂಬರ್ ಅಳವಡಿಸಲು ಇನ್ನಷ್ಟು ಕಾಲಾವಧಿಗೆ ಒತ್ತಾಯ

0
16

ಕಲಬುರಗಿ: ವಾಹನ ಸವಾರಿಗೆ ಯಾವುದೇ ದಂಡವನ್ನು ವಿಧಿಸದೇ ಹೆಚ್ ಎಸ್ ಪಿ ಆರ್ ನಂಬರ್ ಅಳವಡಿಸಲು ಇನ್ನಷ್ಟು ಕಾಲಾವಧಿ ನೀಡಬೇಕೆಂದು ಕಲ್ಯಾಣ ಕರ್ನಾಟಕ ಸೇನೆ ಸಂಘದ ಗೌರವಾಧ್ಯಕ್ಷ ರೇವಣಸಿದ್ದಪ್ಪ ಹುಳಿಪಲ್ಯ ಅವರು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.

ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿ ಮಾಡಿರುವ ಪ್ರತಿ ವಾಹನಕ್ಕೆ ಹೆಚ್‌.ಎಸ್‌.ಪಿ.ಆರ್‌. ನಂಬರ್‌ ಅಳವಡಿಸಬೇಕೆಂದು ಆದೇಶ ಜಾರಿ ಮಾಡಲಾಗಿದೆ, ಇದಕ್ಕೆ ಕೊನೆಯ ದಿನಾಂಕ 17.02.2024 ನೀಡಿದ್ದು, ಆದರೆ ವಾಹನ ಸವಾರರು ಸೈಬರ್‌ ಹಾಗೂ ಇನ್ನಿತರ ಕಡೆಗಳಲ್ಲಿ ಹೆಜ್‌.ಎಸ್‌.ಹಿ.ಆರ್‌. ನಂಬರ್‌ ಅಳವಡಿಸಿಕೊಳ್ಳಲು ಹೋದರೆ ಸರ್ವರ್‌ ಸಮಸ್ಯೆ ಎದುರಾಗುತ್ತಿದೆ.

Contact Your\'s Advertisement; 9902492681

ಅರ್ಜಿ ಸಲ್ಲಿಸಿದರಿಗೂ ಕೂಡಾ ಒಂದು ತಿಂಗಳ ನಂತರಗಳ ಕಾಲ ಸಮಯ ಬೇಕಾಗುತ್ತಿದೆ, ಆದ್ದರಿಂದ ನಗರದಲ್ಲಿರುವ ಬೈಕ್‌, ಆಟೋ, ಟ್ಯಾಕ್ಸಿ ಇನ್ನಿತರ ವಾಹನ ಚಾಲಕಕರಿಗೆ ಹೆಜ್‌.ಎಸ್‌.ಪಿ.ಆರ್‌. ನಂಬರ್‌ ಅಳವಡಿಸಲು ಕಡಿಮೆ ಸಮಯ ನೀಡಿದ್ದಕ್ಕಾಗಿ ನಾವು ಕಲ್ಯಾಣ ಕರ್ನಾಟಕ ಸೇನೆ, ಕಲಬುರಗಿ ಆಟೋ ಚಾಲಕರ ಸಂಘ, ವಿವಿಧ ಆಟೋಚಾಲಕರ ಸಂಘದ ಗೌರವಾಧ್ಯಕ್ಷರ ವತಿಯಿಂದ ಕನಿಷ್ಟ ಮೂರು ತಿಂಗಳಿಗಿಂತ ಹೆಚ್ಚು ಸಮಯಾವಕಾಶವನ್ನು ನೀಡಿ ವಾಹನ ಸವಾರರಿಗೆ ಹೆಚ್‌.ಎಸ್‌.ಪಿ.ಆರ್‌. ನಂಬರ್‌ ಅಳವಡಿಸಲು ಅನುವು ಮಾಡಿಕೊಡಬೇಕೆಂದು ವಿನಂತಿಸಿದರು.

ಬಹಳಷ್ಟು ಜನ ಬೈಕ್‌ ಹಾಗೂ ಇನ್ನೀತರ ವಾಹನ ಚಾಲಕರು ದಿನಗೂಲಿ ಕಾರ್ಮಿಕರು, ರೈತರು ಆಗಿರುವುದರಿಂದ ಇವರಿಗೆ ಇಷ್ಟು ಕಡಿಮೆ ಸಮಯದಲ್ಲಿ ಹೆಜ್‌.ಎಸ್‌.ಪಿ.ಆರ್‌. ನಂಬರ್‌ ಅಳವಡಿಸಲು ಆಗುವುದಿಲ್ಲ. ಆದಕಾರಣ ಇನ್ನು ಹೆಚ್ಚಿನ ಸಮಯಾವಕಾಶ ನೀಡಿ ಹೆಜ್‌.ಎಸ್‌.ಪಿ.ಆರ್‌. ನಂಬರ್‌ ಅಳವಡಿಸಲು ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.

ಒಂದು ವೇಳೆ ಇದೇ ದಿನಾಂಕ ಅಂತಿಮಗೊಳಿಸಿ ದಂಡ ಹಾಕಿದರೇ .ನಮ್ಮ ಸೇನೆ ವತಿಯಿಂದ ಜಗತ್‌ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳುತ್ತೇವೆಂದು ಎಂದು ಎಚ್ಚರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here