ಶಹಾಪುರ: ಕರ್ನಾಟಕ ಸರ್ಕಾರ ಸೆಪ್ಟೆಂಬರ್ ೧೭ ರಂದು ಆಚರಿಸುತ್ತಿದ್ದ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಆಚರಿಸಲು ಆದೇಶಿಸಿರುವ ಸಂಗತಿ ಈ ಭಾಗದ ಬುದ್ಧಿಜೀವಿಗಳಿಗೆ ಪ್ರಗತಿಪರ ಚಿಂತಕರಿಗೆ ತುಂಬಾ ನೋವಿನ ಸಂಗತಿ ಎಂದು ಸಾಹಿತಿ ಬಸವರಾಜ ಸಿನ್ನೂರು ಹೇಳಿದರು.
ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದ ಸರ್ಕಾರದ ನಿರ್ಧಾರ ಶ್ಲಾಘನೀಯವಾದದ್ದು,ಆದರೆ ಅವಸರದಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಎಂದು ತಪ್ಪು ಆದೇಶ ಹೊರಡಿಸಿತ್ತು.
ಅದರ ಬದಲಿಗೆ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ದಿನಾಚರಣೆಯಂದು ಮಾಡಿದರೆ ಅದಕ್ಕೆ ತುಂಬಾ ಅರ್ಥಪೂರ್ಣವಾಗಿರುತ್ತಿತ್ತು ಎಂಬ ಸಲಹೆ ನಮ್ಮದು.
ಸರಕಾರವೇ ಕಲ್ಯಾಣ ಕರ್ನಾಟಕದಿಂದ ವಿಮೋಚನೆ ಮಾಡಲು ಹೊರಟಿರುವದು ಅದೆಷ್ಟು ಸರಿ ಎಂಬುದು ಅರ್ಥ ಮಾಡಿಕೊಳ್ಳಬೇಕಾಗಿದೆ.
ಸರ್ಕಾರದ ಮೇಲಧಿಕಾರಿಗಳು ಹಿರಿಯ ಅಧಿಕಾರಿಗಳು ಪ್ರಗತಿಪರ ಚಿಂತಕರು ಕೂಡಿಕೊಂಡು ಒಂದು ನಿರ್ಧಾರ ಕೈಗೊಂಡು ಅರ್ಥಪೂರ್ಣವಾದ ಒಂದು ಶೀರ್ಷಿಕೆಯನ್ನು ನೀಡಬೇಕಾಗಿತ್ತು.