ಉಚಿತ ಬಸ್ ಪಾಸ್: ಗ್ರಾಮೀಣ ಪತ್ರಕರ್ತರ ಹರ್ಷ

0
69

ವಾಡಿ: ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶುಕ್ರವಾರ ಮಂಡಿಸಿದ ಬಜೆಟ್‍ನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಪ್ರಕಟಿಸಿದ್ದು, ಚಿತ್ತಾಪುರ ತಾಲೂಕಿನ ವಾಡಿ ವಲಯ ಪತ್ರಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಪತ್ರಕರ್ತರು, ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಿಸಿದರು.

ಈ ವೇಳೆ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಚಿತ್ತಾಪುರ ತಾಲೂಕು ಅಧ್ಯಕ್ಷ ಸಿದ್ಧರಾಜ ಮಲಕಂಡಿ, ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವಂತೆ ಕಳೆದ ಹತ್ತಾರು ವರ್ಷಗಳಿಂದ ಬೇಡಿಕೆಯಿಟ್ಟು ಒತ್ತಾಯ ಮಾಡುತ್ತಲೇ ಬರಲಾಗುತ್ತಿತ್ತು. ರಾಜ್ಯವಾಳಿದ ಎಲ್ಲಾ ಸರ್ಕಾರಗಳು ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಭರವಸೆ ನೀಡುತ್ತಿದ್ದವು. ಆದರೆ ಅದು ಕಾರ್ಯರೂಪಕ್ಕೆ ಬರುತ್ತಿರಲಿಲ್ಲ.

Contact Your\'s Advertisement; 9902492681

ಪದೇಪದೆ ಗ್ರಾಮೀಣ ಪತ್ರಕರ್ತರಿಗೆ ಹುಸಿ ಭರವಸೆಗಳನ್ನೇ ನೀಡಲಾಗುತ್ತಿತ್ತು. ಈ ಬಾರಿಯೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದಾವಣಗೆರೆಯಲ್ಲಿ ನಡೆದ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಈ ಭರವಸೆ ಮತ್ತೆ ನೀಡಿದ್ದರು. ಇದೂ ಕೂಡ ಹುಸಿ ಭರವಸೆ ಎಂದೇ ನಂಬಿದ್ದೇವು. ಆದರೆ ಸಿಎಂ ಸಿದ್ಧರಾಮಯ್ಯ ಅವರು ನುಡಿದಂತೆ ಬಜೆಟ್‍ನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಘೋಷಿಸಿ ನ್ಯಾಯ ಒದಗಿಸಿಕೊಟ್ಟಿದ್ದಾರೆ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಚಿತ್ತಾಪುರ ತಾಲೂಕು ಮಾಜಿ ಪ್ರಧಾನ ಕಾರ್ಯದರ್ಶಿ, ಉದಯವಾಣಿಯ ಮಡಿವಾಳಪ್ಪ ಹೇರೂರ ಮಾತನಾಡಿ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ನಾವು ಗ್ರಾಮೀಣ ಪತ್ರಕರ್ತರ ಭವಣೆ ಹೇಳುವಂತಿಲ್ಲ. ಕನಿಷ್ಠ ಗೌರವಧನದಲ್ಲಿ ಸೇವೆ ಸಲ್ಲಿಸುತ್ತೇವೆ. ಗ್ರಾಮೀಣ ಭಾಗದಲ್ಲಿ ಜನರ ಸಮಸ್ಯೆಗಳನ್ನು ಬಿತ್ತರಿಸುವ ಮೂಲಕ ಸರ್ಕಾರದ ಗಮನ ಸೆಳೆಯುತ್ತೇವೆ. ಗ್ರಾಮೀಣ ಪತ್ರಕರ್ತರು ಕಟ್ಟಿಕೊಡುವ ವರದಿಗಳು ದಿನಪತ್ರಿಕೆಗಳ ಜೀವಾಳವಾಗಿವೆ. ಹಳ್ಳಿ ಜನರ ಗೋಳನ್ನು ಸರ್ಕಾರಕ್ಕೆ ತಲುಪಿಸುವ ಸಾಹಸ ಸಾಮಾನ್ಯವಲ್ಲ. ಗ್ರಾಮೀಣ ಪ್ರತಿಭೆಗಳು ಬೆಳಕಿಗೆ ಬರಲು ಗ್ರಾಮೀಣ ಪತ್ರಕರ್ತರು ಪ್ರಮುಖ ಕಾರಣವಹಿಸುತ್ತಾರೆ. ಉಚಿತ ಬಸ್ ಪಾಸ್ ವ್ಯವಸ್ಥೆಯಾದರೆ ಗ್ರಾಮೀಣ ಪ್ರದೇಶಗಳ ವರದಿ ಸಂಗ್ರಹಿಸಲು ಇನ್ನಷ್ಟು ಅನುಕೂಲವಾಗಲಿದೆ ಎಂದರು.

ಪತ್ರಕರ್ತ ಸಂಘದ ತಾಲೂಕು ಸಹ ಕಾರ್ಯದರ್ಶಿ ರಾಯಪ್ಪ ಕೊಟಗಾರ, ಪತ್ರಕರ್ತರಾದ ಸಾಯಬಣ್ಣ ಗುಡುಬಾ, ವಿಕ್ರಮ ನಿಂಬರ್ಗಾ, ದಯಾನಂದ ಖಜೂರಿ. ಶೇಖ ಅಲ್ಲಾಭಕ್ಷ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here