ಸಂವಿಧಾನದ ಮೂಲ ಆಶಯ ಪ್ರತಿಯೊಬ್ಬರು ಅರಿಯಬೇಕು: ಡಾ.ಅಜಯ್ ಸಿಂಗ್

0
21

ಜೇರಟಗಿಯಲ್ಲಿ ಸಂವಿಧಾನ ಜಾಗೃತಿಗೆ ಅದ್ದೂರಿ ಸ್ವಾಗತ

ಕಲಬುರಗಿ: ಭಾರತ ದೇಶ ಹಲವು ವೈವಿಧ್ಯಮಯ ಸಂಸ್ಕೃತಿಗಳ ತವರೂರು. ಹಲವು ಧರ್ಮಗಳ ಜನರು ಅನ್ಯೋನ್ಯದಿಂದ ಇಲ್ಲಿ ಬದುಕುತ್ತಿದ್ದಾರೆ ಎಂದರೆ ಅದಕ್ಕೆ ಸಂವಿಧಾನವೇ ಮೂಲ ಕಾರಣ. ಇಂತಹ ಪ್ರಜಾ ಸ್ನೇಹಿ ಸಂವಿಧಾನದ ಮೂಲ ಆಶಯ ದೇಶದ ಪ್ರತಿ ಪ್ರಜೆ ಅರಿಯಬೇಕು ಎಂದು ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್ ತಿಳಿಸಿದರು.

ಶನಿವಾರ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಸಾರ್ವಜನಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ದೇಶದ ಪ್ರತಿ ಪ್ರಜೆಗೆ ಸಮಾನತೆ, ನ್ಯಾಯ, ರಾಜಕೀಯ, ಸಾಮಾಜಿಕ ನ್ಯಾಯ, ಅಭಿವ್ಯಕ್ತಿ ಸ್ವಾತಂತ್ರ್ಯ ಒದಗಿಸಿದ ಮತ್ತು ಪ್ರತಿಯೊಬ್ಬರು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ಕಾರಣವಾದ ಸಂವಿಧಾನ ನಮ್ಮೆಲ್ಲರಿಗೂ ದಾರಿದೀಪವಾಗಿದೆ ಎಂದರು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಸಹ ಮಾತನಾಡಿದರು.

ಅಂಕಲಗಾ ಗ್ರಾಮದ ಮೂಲಕ ಶನಿವಾರ ತಾಲೂಕಿಗೆ ಪ್ರವೇಶ ಪಡೆದ ಜಾಗೃತಿ ಜಾಥಾಕ್ಕೆ ಜೇರಟಗಿ ಗ್ರಾಮದಲ್ಲಿ ಅದ್ದೂರಿ ಸ್ವಾಗತ‌ ನೀಡಲಾಯಿತು. ಗ್ರಾಮಸ್ಥರು ಡೊಳ್ಳಿನೊಂದಿಗೆ ಸುತ್ತುವರಿದು ನೃತ್ಯ ಮಾಡುತ್ತಾ ಸಂಭ್ರಮದ ಸ್ವಾಗತ ಕೋರಿದರು. ಮೆರವಣಿಗೆಯುದ್ದಕ್ಕು ಮಹಿಳೆಯರು, ಮಕ್ಕಳ ಬಾಗವಹಿಸಿದ್ದರು. ಎತ್ತಿನ ಬಂಡಿ ಓಡಿಸು ಮುಖಂಡರು ಸಂಭ್ರಮಿಸಿದರು. ಲಂಬಾಣಿ‌ ಮಹಿಳೆಯರ ನೃತ್ಯ ಮೆರವಣಿಗೆಗೆ ಕಳೆ ತಂದಿತ್ತು.

ವಿವಿಧ ಪೂಜ್ಯ ಮಠಾಧೀಶರ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೇವರ್ಗಿ ತಹಸೀಲ್ದಾರ ಮಲ್ಲಣ್ಣ ಯಲಗೋಡ್, ತಾಲೂಕ ಪಂಚಾಯತ್ ಇ.ಓ. ಅಬ್ದುಲ್ ನಭಿ, ತಾಲೂಕು ಆರೋಗ್ಯಾಧಿಕಾರಿ ಸಿದ್ದು ಪಾಟೀಲ್, ಸಮಾಜ ಕಲ್ಯಟಣ ಇಲಾಖೆಯ ಸಹಾಯಕ ನಿರ್ದೇಶಕಿ ಮೋನಮಗಂ ಸುತಾರ ಕೃಷಿ,‌ತೋಟಗಾರಿಕೆ ಸೇರಿದಂತೆ ಇನ್ನಿತರ ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಇದಕ್ಕೂ ಮುನ್ನ ಅಂಕಲಗಾ, ಹುಲ್ಲೂರ, ನಂತರ ರಂಜಣಗಿ, ಬಳ್ಳೂಂಡಗಿ ಗ್ರಾಮದಲ್ಲಿ ಸಂಚರಿಸಿ ಸಂವಿಧಾನ ಕುರಿತು ಅರಿವು ಮೂಡಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here